newsfirstkannada.com

ಸೌದಿ ದೊರೆ ಭಾರತ ಭೇಟಿ ಬಗ್ಗೆ ಪಾಕ್​​​ನಲ್ಲೂ ಭಾರೀ ಚರ್ಚೆ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

11-09-2023

  ಭಾರತ ಮತ್ತು ಪಾಕ್‌ ನಡುವೆ ಸಮತೋಲನ ಕಾಯ್ದುಕೊಂಡಿದ್ದ ಸೌದಿ

  ಪಾಕಿಸ್ತಾನದ ಪ್ರತಿ ಸಂಕಷ್ಟದಲ್ಲೂ ಸಹಾಯಕ್ಕೆ ಧಾವಿಸೋ ಸೌದಿ

  ಸುನ್ನಿ ಇಸ್ಲಾಮಿಕ್‌ ರಾಷ್ಟ್ರಗಳಿಗೆ ಸೌದಿಯೇ ಮುಂಚೂಣಿ ರಾಷ್ಟ್ರ

ನವದೆಹಲಿ: ಜಿ20ಗಾಗಿ ಭಾರತಕ್ಕೆ ಬಂದಿದ್ದ ಸೌದಿ ರಾಜಕುಮಾರ ಮೊಹಮದ್‌ ಬಿನ್‌ ಸಲ್ಮಾನ್‌ ಬಗ್ಗೆ ಪಾಕಿಸ್ತಾನದಲ್ಲಿ ತೀವ್ರ ಚರ್ಚೆ ಆಗ್ತಿದೆ. ಸಾಮಾನ್ಯವಾಗಿ ಪಾಕಿಸ್ತಾನಕ್ಕೆ ತೆರಳಿ ನಂತರ ಭಾರತಕ್ಕೆ ಆಗಮಿಸುತ್ತಿದ್ದ ಸೌದಿ ರಾಜಕುಮಾರ ಈ ಬಾರಿ ಪಾಕ್‌ಗೆ ತೆರಳದೆ ನೇರವಾಗಿ ಭಾರತಕ್ಕೆ ಭೇಟಿ ನೀಡಿದ್ದು ಪಾಕ್​ಗೆ ಆಘಾತ ನೀಡಿದೆ. ಪಾಕಿಸ್ತಾನದಲ್ಲಿ ಭಾರತ ಮತ್ತು ಸೌದಿ ಸಂಬಂಧ ಸುಧಾರಣೆ ಬಗ್ಗೆ ಚರ್ಚೆ ಆಗ್ತಿದ್ದು, ಪಾಕ್​ ಸರ್ಕಾರದ ವಿರುದ್ಧ ಅಲ್ಲಿನ ಜನರು ಕಿಡಿಕಾರುತ್ತಿದ್ದಾರೆ.

ಇದನ್ನು ಓದಿ: G-20 ಶೃಂಗಸಭೆಯಲ್ಲಿ ಚೀನಾಕ್ಕೆ ಭಾರತ ಟಕ್ಕರ್‌; ವಿಶ್ವದ ಅತಿ ದೊಡ್ಡ ಎಕನಾಮಿಕ್ ಕಾರಿಡಾರ್‌ನ ಸ್ಪೆಷಲ್ ರಿಪೋರ್ಟ್ ಇಲ್ಲಿದೆ

ಸೌದಿ ಅರೆಯಾಬಿ. ಮುಸ್ಲಿಂ ರಾಷ್ಟ್ರ ಸೌದಿ ಅರೆಬಿಯಾ ಭಾರತಕ್ಕಿಂತ ಪಾಕಿಸ್ತಾನಕ್ಕೆ ಹತ್ತಿರವಾಗಿದೆ. ಆದ್ರೆ ಸೌದಿ ರಾಜಕುಮಾರ ಪಾಕಿಸ್ತಾನಕ್ಕೆ ಹೋಗದೇ ಭಾರತಕ್ಕೆ ಬಂದಿದ್ದು, ಪಾಕಿಸ್ತಾನಕ್ಕೆ ಬಿಗ್​ ಶಾಕ್​ ನೀಡಿದೆ. ಸೌದಿ ಬಂಡವಾಳ ಭಾರತದ ಪಾಲಾಗುವ ಆತಂಕದಿಂದ ಪಾಕಿಸ್ತಾನದ ಸರ್ಕಾರದ ವಿರುದ್ಧ ಅಲ್ಲಿನ ಜನರು ನಿಗಿನಿಗಿ ಕೆಂಡ ಕಾರಲು ಶುರು ಮಾಡಿದ್ದಾರೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದ ಜಿ20 ಶೃಂಗ ಸಭೆಯಲ್ಲಿ ಭಾರತ -ಮಧ್ಯ ಪ್ರಾಚ್ಯ- ಯುರೋಪ್ ನಡುವಣ ಆರ್ಥಿಕ ಕಾರಿಡಾರ್ ಯೋಜನೆ ಪ್ರಕಟಿಸಲಾಗಿದೆ. ಈ ಯೋಜನೆಯು ಚೀನಾದ ಬೆಲ್ಟ್‌ & ರೋಡ್ ಯೋಜನೆಗೆ ಪರ್ಯಾಯವಾಗಿದೆ. ಭಾರತ ಈ ಯೋಜನೆ ಪ್ರಕಟಿಸಿದ್ದೇ ತಡ, ಪಾಕಿಸ್ತಾನದಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ಪಾಕಿಸ್ತಾನದಲ್ಲಿ ಸೌದಿ ಅರೇಬಿಯಾ ದೇಶವು ಬರೋಬ್ಬರಿ 25 ಬಿಲಿಯನ್ ಅಮೆರಿಕನ್ ಡಾಲರ್ ಹಣ ಹೂಡಿಕೆ ಮಾಡಲಿದೆ ಎಂದು ಅಲ್ಲಿನ ಸರ್ಕಾರ ನಿರೀಕ್ಷೆ ಮಾಡುತ್ತಿತ್ತು. ಈ ಹಂತದಲ್ಲೇ ಸೌದಿಯ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಪ್ರಧಾನಿ ಮೋದಿ ಅವರು ಜಿ20 ಶೃಂಗ ಸಭೆಯಲ್ಲಿ ಆತ್ಮೀಯವಾಗಿ ಅಪ್ಪಿಕೊಂಡಿದ್ದು, ಭಾರತದ ಮಹತ್ವಾಕಾಂಕ್ಷಿ ಆರ್ಥಿಕ ಕಾರಿಡಾರ್‌ನಲ್ಲಿ ಪಾಲುದಾರ ದೇಶವನ್ನಾಗಿ ಮಾಡಿಕೊಂಡಿದೆ. ಭಾರತದ ರಾಜತಾಂತ್ರಿಕ ನಡೆಗೆ ಪಾಕಿಸ್ತಾನದ ಜನರು ಅಲ್ಲಿನ ರಾಜಕಾರಣಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತ ಇಡೀ ಜಗತ್ತಿನಲ್ಲೇ ಆಗಸದೆತ್ತರಕ್ಕೆ ಬೆಳೆಯುತ್ತಿದೆ. ನಾವು ಒಂದೊಂದೇ ಡಾಲರ್‌ಗಾಗಿ ಭಿಕ್ಷೆ ಬೇಡುವಂತಾಗಿದೆ ಎಂದು ಪಾಕ್​ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ಸೌದಿ-ಭಾರತದ ಭಾಂದವ್ಯ ಮತ್ತಷ್ಟು ವೃದ್ಧಿ
24 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ!

ಸೌದಿ ಕ್ರೌನ್ ಪ್ರಿನ್ಸ್ ಫೆಬ್ರವರಿ 2019 ರಿಂದ 2ನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದು, ಉಭಯ ದೇಶಗಳ ಭಾಂದವ್ಯ ಮತ್ತಷ್ಟು ವೃದ್ಧಿಯಾಗಿದೆ. ಇಂದು ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಭಾರತ-ಸೌದಿ ದೇಶಗಳು ಮಾಹಿತಿ ತಂತ್ರಜ್ಞಾನ, ಕೃಷಿ, ಔಷಧ, ಪೆಟ್ರೋಕೆಮಿಕಲ್ಸ್ ಮತ್ತು ಮಾನವ ಸಂಪನ್ಮೂಲಗಳು ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಒಟ್ಟು 24 ಒಪ್ಪಂದಗಳಿಗೆ ಸಹಿ ಹಾಕಿವೆ. ಇನ್ನು ಭಾರತ ಮತ್ತು ಪಶ್ಚಿಮ ಏಷ್ಯಾ ಮತ್ತು ಯುರೋಪ್​ ನಡುವೆ ಆರ್ಥಿಕ ಕಾರಿಡಾರ್, ಮತ್ತಷ್ಟು ಅನುಕೂಲ ಆಗಲಿದೆ ಎಂದು ಮೋದಿ ಹೇಳಿದ್ದಾರೆ.

ನಾವು ನಿನ್ನೆ ಎಲ್ಲಾ ಸೇರಿ ಭಾರತ ಮತ್ತು ಪಶ್ಚಿಮ ಏಷ್ಯಾ ಮತ್ತು ಯುರೋಪ್​ ನಡುವೆ ಆರ್ಥಿಕ ಕಾರಿಡಾರ್ ಸ್ಥಾಪಿಸಲು ಐತಿಹಾಸಿಕ ಆರಂಭ ಮಾಡಿದ್ದೇವೆ. ಈ ಕಾರಿಡಾರ್​ ಮೂಲಕ ಎರಡು ದೇಶಗಳನ್ನ ಮಾತ್ರ ಒಂದಾಗಿಸಲ್ಲ, ಬದಲಾಗಿ ಏಷ್ಯಾ, ಪಶ್ಚಿಮ ಏಷ್ಯಾ, ಮತ್ತು ಯುರೋಪ್​ ಮಧ್ಯೆ ಆರ್ಥಿಕ ಸಹಯೋಗ, ಇಂಧನ ಮತ್ತು ಡಿಜಿಟಲ್​​ ಕನೆಕ್ಟಿವಿಟಿ ವಿಚಾರದಲ್ಲಿ ಶಕ್ತಿ ನೀಡಲಿದೆ.

-ನರೇಂದ್ರ ಮೋದಿ, ಪ್ರಧಾನ ಮಂತ್ರಿ

ಒಟ್ಟಾರೆಯಾಗಿ ಭಾರತ ಮತ್ತು ಸೌದಿ ಅರೆಬಿಯಾ ನಡುವಿನ ಸಂಬಂಧ ಪಾಕಿಸ್ತಾನಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಅಲ್ಲಿನ ಜನರು ಭಾರತದ ಅಭಿವೃದ್ಧಿ ಕಂಡು, ನಮ್ಮ ದೇಶ ಈ ರೀತಿ ಅಭಿವೃದ್ಧಿ ಆಗೋದು ಯಾವಾಗ ಎಂದು ಮರುಗುತ್ತಿದ್ದಾರೆ. ಕೆಲವರಂತೂ ಪಾಕಿಸ್ತಾನದ ಪ್ರಜಾಪ್ರಭುತ್ವ, ಸಂವಿಧಾನ, ಈ ನೆಲದ ಕಾನೂನಿಗೆ ಕೊನೆಯ ಎಚ್ಚರಿಕೆ ಕರೆ ಗಂಟೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೌದಿ ದೊರೆ ಭಾರತ ಭೇಟಿ ಬಗ್ಗೆ ಪಾಕ್​​​ನಲ್ಲೂ ಭಾರೀ ಚರ್ಚೆ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2023/09/pm-modi-4.jpg

Load More