ಹರಿಯಾಣದ ಹಿಸ್ಸಾರ್ ಕ್ಷೇತ್ರದಿಂದ ಕಣಕ್ಕಿಳಿದ ಭಾರತದ ಶ್ರೀಮಂತ ಮಹಿಳೆ
ಬಿಜೆಪಿಯಿಂದ ಟಿಕೆಟ್ ನಿರಾಕರಣೆ, ಸ್ವತಂತ್ರವಾಗಿ ಸಾವಿತ್ರಿ ಜಿಂದಾಲ್ ಕಣಕ್ಕೆ
ಪುತ್ರನ ದಾರಿಯಲ್ಲಿಯೇ ಸಾಗುತ್ತಿದ್ದ ಸಾವಿತ್ರಿ ಜಿಂದಾಲ್ಗೆ ಟಿಕೆಟ್ ತಪ್ಪಿದ್ದು ಏಕೆ?
ಚಂಡಿಗಢ: ಭಾರತದ ಅತ್ಯಂತ ಶ್ರೀಮಂತ ಮಹಿಳೆ ಹಾಗೂ ಒಪಿ ಜಿಂದಾಲ್ ಗ್ರೂಪ್ನ ಅಧ್ಯಕ್ಷೆ ಸಾವಿತ್ರಿ ಜಿಂದಾಲ್, ಹರಿಯಾಣ ವಿಧಾನಸಭಾ ಚುನಾವಣೆಯ ಕಣಕ್ಕೆ ಇಳಿದಿದ್ದಾರೆ. ಈ ಬಾರಿ ಹಿಸ್ಸಾರ್ ಕ್ಷೇತ್ರದಿಂದ ಸಾವಿತ್ರಿ ಜಿಂದಾಲ್ ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದ್ರೆ ಬಿಜೆಪಿ ಸಾವಿತ್ರಿಯವರಿಗೆ ಟಿಕೆಟ್ ನಿರಾಕರಿಸಿ ಹಿಸ್ಸಾರ್ ಕ್ಷೇತ್ರದಿಂದ ಹಾಲಿ ಸಚಿವ ಕಮಲ್ ಗುಪ್ತಾ ಅವರಿಗೆ ಟಿಕೆಟ್ ನೀಡಿದೆ.
ಇದನ್ನೂ ಓದಿ: port blair: ಅಂಡಮಾನ್ ನಿಕೋಬಾರ್ ರಾಜಧಾನಿಗೆ ಹೊಸ ನಾಮಕರಣ; ಏನಿದರ ವಿಶೇಷ? ಕಾರಣ ಇಲ್ಲಿದೆ!
74 ವರ್ಷದ ಸಾವಿತ್ರಿ ಜಿಂದಾಲ್ ಈಗ ಸ್ವತಂತ್ರ ಅಭ್ಯರ್ಥಿಯಾಗಿ ಹಿಸ್ಸಾರ್ ಕ್ಷೇತ್ರದ ಕಣಕ್ಕೆ ಇಳಿದಿದ್ದಾರೆ. ಈಗಾಗಲೇ ನಾಮಪತ್ರ ಸಲ್ಲಿಸಿರುವ ಸಾವಿತ್ರಿ ಜಿಂದಾಲ್ ಅವರು, ಹಿಸ್ಸಾರದ ಜನತೆ ನನ್ನ ಕುಟುಂಬವಿದ್ದಂತೆ. ಅವರು ನಾನು ಚುನಾವಣೆಗೆ ಸ್ಪರ್ಧಿಸಲೇಬೇಕು ಎಂದು ಹೇಳುತ್ತಿದ್ದಾರೆ. ಹೀಗಾಗಿ ನಾನು ಅವರಿಗೆ ಇಲ್ಲ ಎಂದು ಹೇಳಲಾಗುವುದಿಲ್ಲ. ಚುನಾವಣೆ ಇರುವುದೇ ಸ್ಪರ್ಧಿಸುವುದಕ್ಕೆ, ಜನರ ಭಾವನೆಗೆ ಗೌರವ ಕೊಡಬೇಕಾಗಿದ್ದು ನನ್ನ ಕರ್ತವ್ಯ. ಹೀಗಾಗಿ ನಾನು ಚುನಾವಣೆಯ ಕಣಕ್ಕೆ ಇಳಿದಿದ್ದೇನೆ ಎಂದು ಸಾವಿತ್ರಿ ಹೇಳಿದ್ದಾರೆ.
ಇದನ್ನೂ ಓದಿ: ಮುಂಬೈ ಗಣಪನ ದರ್ಶನದಲ್ಲೂ ತಾರತಮ್ಯ.. ಇದ್ದವರಿಗೊಂದು ಇಲ್ಲದವರಿಗೊಂದು ಪದ್ಧತಿ; ಭಕ್ತರಿಗೆ ಬೇಸರ!
ಸಾವಿತ್ರಿ ಜಿಂದಾಲ್ ಸ್ವತಂತ್ರವಾಗಿ ಕಣಕ್ಕೆ ಇಳಿದ ಕೂಡಲೇ ಕಾಂಗ್ರೆಸ್ ಮಾಜಿ ಎಂಎಲ್ಎ ಸಾವಿತ್ರಿ ಜಿಂದಾಲ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಸದ್ಯ ಸಾವಿತ್ರಿ ಜಿಂದಾಲ್ ಅವರು ನನ್ನದು ಬಿಜೆಪಿ ವಿರುದ್ಧದ ಬಂಡಾಯವಲ್ಲ. ನಾನು ಯಾವತ್ತೂ ಬಿಜೆಪಿಯನ್ನು ಸೇರಿಕೊಂಡಿಲ್ಲ ಎಂದಿದ್ದಾರೆ. ಆದ್ರೆ ಸಾವಿತ್ರಿಯವರ ಪುತ್ರ ನವೀನ್ ಜಿಂದಾಲ್ 2024ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಟಿಕೆಟ್ ಪಡೆದು, ಕುರುಕ್ಷೇತ್ರ ಕಣದಿಂದ ಗೆದ್ದು ಸಂಸದರಾಗಿದ್ದಾರೆ. ತಾಯಿಯೂ ಕೂಡ ಮಗನ ಹಾದಿಯಲ್ಲಿಯೇ ಸಾಗಲಿದ್ದಾರೆ. ಅವರಿಗೆ ಹಿಸ್ಸಾರ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆಯಿತ್ತು. ಆದ್ರೆ ಕೊನೆ ಗಳಿಗೆಯಲ್ಲಿ ಅದು ಸಾಧ್ಯವಾಗಲಿಲ್ಲ. ಹೀಗಾಗಿಯೇ ಭಾರತದ ಅತಿದೊಡ್ಡ ಶ್ರೀಮಂತ ಮಹಿಳೆ ಈಗ ಕೇಸರಿ ಪಾಳಯದ ವಿರುದ್ಧ ಸೆಡ್ಡು ಹೊಡೆದು ಸ್ವತಂತ್ರವಾಗಿ ಅಖಾಡಕ್ಕೆ ಧುಮುಕಿದ್ದಾರೆ.
ಇನ್ನು ದೇಶದ ಅತ್ಯಂತ ಶ್ರೀಮಂತ ಮಹಿಳೆಯಾಗಿರುವ ಸಾವಿತ್ರಿಯವರು, ನಾಮಪತ್ರ ಸಲ್ಲಿಕೆ ವೇಳೆ ನೀಡಿದ ಅಫಿಡವಿಟ್ನಲ್ಲಿ ಒಟ್ಟು 270 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ. 190 ಕೋಟಿ ರೂಪಾಯಿ ಚರಾಸ್ತಿ ಹೊಂದಿರುವ ಸಾವಿತ್ರಿ ಜಿಂದಾಲ್, 80 ಕೋಟಿ ಮೌಲ್ಯದ ಸ್ಥರಾಸ್ತಿಯನ್ನು ಹೊಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ