newsfirstkannada.com

×

ಧೋನಿ ಹೆಸರು ಹೇಳಿ ಮಗು ಕಳ್ಳತನ.. ಹಣದ ಆಸೆಗೆ ಬಿದ್ದು ಒಂದು ವರ್ಷದ ಕಂದನನ್ನು ಕಳೆದುಕೊಂಡ ತಾಯಿ

Share :

Published October 27, 2023 at 10:39am

Update October 27, 2023 at 11:00am

    ಮಹೇಂದ್ರ ಸಿಂಗ್​ ಧೋನಿ ಹೆಸರಿನಲ್ಲಿ ಮಕ್ಕಳ ಕಳ್ಳತನ ಮಾಡಿದ ಪ್ರಕರಣ

    ಧೋನಿ 5 ಸಾವಿರ ರೂಪಾಯಿ ನೀಡುತ್ತಾರೆಂದು ಮಹಿಳೆಯನ್ನೇ ಯಾಮಾರಿಸಿದ ಕಳ್ಳ

    ಬಿಸ್ಕೆಟ್​​ನಲ್ಲಿ ಮತ್ತು ಬರೋ ಔಷಧಿಯನ್ನ ನೀಡಿ ಮಗುವನ್ನು ಕದ್ದು ಕಳ್ಳ ಎಸ್ಕೇಪ್​

ಜಾರ್ಖಂಡ್​: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರಿನಲ್ಲಿ ಮಕ್ಕಳ ಕಳ್ಳತನ ಮಾಡಿದ ಪ್ರಕರಣ ರಾಂಚಿಯಲ್ಲಿ ಬೆಳಕಿಗೆ ಬಂದಿದೆ. ಜಗನ್ನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯ ಲಿಚಿ ಬಗಾನ್ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

ಮಹೇಂದ್ರ ಸಿಂಗ್ ಧೋನಿ ತಲಾ ಐದು ಸಾವಿರ ರೂಪಾಯಿ ಮತ್ತು ಬಡವರಿಗೆ ಮನೆ ನೀಡುತ್ತಿದ್ದಾರೆ ಎಂದು ಸುಳ್ಳು ಹೇಳಿ ಓರ್ವ ಮಹಿಳೆಯನ್ನ ಯಾಮಾರಿಸಿ ಒಂದು ಮನೆಗೆ ಕರೆದೊಯ್ದಿದ್ದಾರೆ. ಬಳಿಕ ಬಿಸ್ಕೆಟ್​ನಲ್ಲಿ ಮತ್ತು ಬರೋ ಔಷಧಿಯನ್ನ ನೀಡಿ ಒಂದೂವರೆ ವರ್ಷದ ಮಗುವನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸದ್ಯ ರಾಂಚಿಯ ಅರ್ಗೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗುವನ್ನು ಕಳೆದುಕೊಮಡ ಮಹಿಳೆ ಮಧು ದೇವಿ ಜಗನ್ನಾಥಪುರದ ನಿವಾಸಿಯಾಗಿದ್ದು, ತನ್ನ ಇಬ್ಬರು ಮಕ್ಕಳೊಂದಿಗೆ ರಾಂಚಿಯ ಹಿನ್ನುನ್ನಲ್ಲಿರುವ ಸ್ವಾಲ್​ನಿಂದ ಮಕ್ಕಳಿಗೆ ತಿಂಡಿ ಖರೀದಿಸುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ಬೈಕ್​ ಸವಾರ ಧೋನಿ ಬಡವರಿಗೆ 5 ಸಾವಿರ ರೂಪಾಯಿ ನೀಡುತ್ತಿದ್ದಾರೆ ಎಂದು ಹೇಳಿದ್ದಾನೆ. ಆತನ ಮಾತಿನ ಮರುಳಾದ ಮಧು ದೇವಿ ತನ್ನ ಮಗುವನ್ನೇ ಕಳೆದುಕೊಂಡಿದ್ದಾಳೆ.

ರಾಂಚಿ ಎಸ್​ಎಸ್​ಪಿ ಚಂದನ್​ ಸಿನ್ಹಾ ಈ ಬಗ್ಗೆ ಮಾತನಾಡಿದ್ದು, ಪೊಲೀಸರು ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಮಗುವನ್ನು ತಾಯಿ ಬಳಿಗೆ ತಲುಪಿಸುವ ಕೆಲಸ ಮಾಡುತ್ತೇವೆ’ ಎಂಬ ವಿಶ್ವಾಸದ ನುಡಿಗಳನ್ನಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧೋನಿ ಹೆಸರು ಹೇಳಿ ಮಗು ಕಳ್ಳತನ.. ಹಣದ ಆಸೆಗೆ ಬಿದ್ದು ಒಂದು ವರ್ಷದ ಕಂದನನ್ನು ಕಳೆದುಕೊಂಡ ತಾಯಿ

https://newsfirstlive.com/wp-content/uploads/2023/10/Dhoni-6.jpg

Load More