Advertisment

ಪೊಲೀಸ್ ಸ್ಟೇಷನ್​ಗೆ ಓಡೋಡಿ ಬಂದ ಆಟೋ ಡ್ರೈವರ್! ಅನಾಮಿಕ ಬಿಟ್ಟು ಹೋದ ಬ್ಯಾಗ್​ನಲ್ಲಿ ಏನಿತ್ತು?

author-image
Gopal Kulkarni
Updated On
ಪೊಲೀಸ್ ಸ್ಟೇಷನ್​ಗೆ ಓಡೋಡಿ ಬಂದ ಆಟೋ ಡ್ರೈವರ್! ಅನಾಮಿಕ ಬಿಟ್ಟು ಹೋದ ಬ್ಯಾಗ್​ನಲ್ಲಿ ಏನಿತ್ತು?
Advertisment
  • ಆಟೋದಲ್ಲಿ ಬ್ಯಾಗ್ ಬಿಟ್ಟು ಹೋದ ಅನಾಮಿಕ ಪ್ರಯಾಣಿಕ, ಚಾಲಕ ಗಾಬರಿ
  • ಬ್ಯಾಗ್ ನೋಡಿ ಗಾಬರಿಯಿಂದ ಪೊಲೀಸ್​ ಠಾಣೆಗೆ ಬಂದ ಆಟೋ ಚಾಲಕ
  • ಎಂಇಎಸ್​ ಗ್ರೌಂಡ್​ಗೆ ಆಟೋ ತೆಗೆದುಕೊಂಡು ಹೋದ ಪೊಲೀಸರಿಗೆ ಸಿಕ್ಕಿದ್ದೇನು?

ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಹುಸಿ ಬಾಂಬ್ ಕರೆಗಳ ಕೋಲಾಹಲ ದೊಡ್ಡದಾಗಿದೆ. ಅಕ್ಟೋಬರ್ ಒಂದು ತಿಂಗಳಲ್ಲಿಯೇ 70 ಕ್ಕೂ ಹೆಚ್ಚು ಹುಸಿಬಾಂಬ್ ಕರೆಗಳನ್ನು ದೇಶದ ವಿವಿಧ ಏರ್​ಲೈನ್ಸ್​ಗಳು ಎದುರಿಸಿದ್ದವು. ಬೆಂಗಳೂರಿನಲ್ಲಿಯೂ ಕೂಡ ಅಂತಹುದೇ ಒಂದು ಘಟನೆ ನಡೆದಿದೆ. ಆದ್ರೆ ಇದು ಸ್ವಲ್ಪ ವಿಚಿತ್ರ ನೀವು ಸಿಬಿಐ ಶಂಕರ್ ಸಿನಿಮಾ ನೋಡಿದ್ರೆ ಅದರಲ್ಲಿ ಕುಂಬಳಕಾಯಿಯಲ್ಲಿ ಬಾಂಬ್ ಉಂಟು ಎಂಬ ಸೀನ್ ನೋಡಿಯೇ ನೋಡಿರ್ತೀರಾ ಅಂತಹುದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Advertisment

publive-image

ಪ್ರಯಾಣಿಕರೊಬ್ಬರು ಆಟೋ ನಂಬರ್ ಕೆಎ 01 ಎಹೆಚ್​ 5074ರಲ್ಲಿ ಪ್ರಯಾಣ ಮಾಡಿ ಇಳಿದು ಹೋಗಿದ್ದಾರೆ. ಅವರು ಹೋದ ಬಳಿಕ ಪ್ರಯಾಣಿಕರು ಕೂರುವ ಜಾಗದಲ್ಲಿ ಒಂದು ಬ್ಯಾಗ್​ ಬಿಟ್ಟು ಹೋಗಿರುವುದು ಆಟೋ ಡ್ರೈವರ್ ಕಂಡಿದ್ದಾನೆ. ಒಂದು ಹಂತಕ್ಕೆ ಗಾಬರಿಯೂ ಆಗಿದ್ದಾನೆ. ಅಲ್ಲಿಂದ ನೇರವಾಗಿ ಆಟೋವನ್ನು ಪೊಲೀಸ್ ಠಾಣೆಗೆ ಓಡಿಸಿಕೊಂಡು ಬಂದ ಗಾಬರಿ ಬಿದ್ದ ಚಾಲಕ. ಹೀಗೆ ಯಾರೋ ಪ್ರಯಾಣಿಕರು ನನ್ನ ಆಟೋದಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದಾರೆ. ನನಗೆ ಇದರಲ್ಲಿ ಬಾಂಬ್ ಇರಬಹುದು ಎಂಬ ಅನುಮಾನ ಎಂದು ಹೇಳಿದ್ದಾನೆ.

ಇದನ್ನೂ ಓದಿ:ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಜೀವ ಬಿಟ್ಟ ಮೂವರು ಬಾಣಂತಿಯರು.. ಅನಾಹುತಕ್ಕೆ ಕಾರಣವಾಯ್ತಾ ಆ ಔಷಧಿ..?

publive-image

ಯಾವಾಗ ಆಟೋ ಡ್ರೈವರ್ ಹೀಗೆ ಹೇಳಿದನೋ ಪೊಲೀಸರು ಕೂಡ ಒಂದು ಕ್ಷಣ ಗಾಬರಿಯಾಗಿದ್ದಾರೆ. ಕೂಡಲೇ ಆಟೋವನ್ನು ಜಯನಗರ ಪೊಲೀಸ್ ಠಾಣೆಯಿಂದ ಎಂಇಎಸ್​ ಗ್ರೌಂಡ್​​ಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ನೋಡಿದರೆ ಆಟೋದ ಹಿಂದಿನ ಸೀಟ್​ನಲ್ಲಿ ಎರಡು ಚೀಲಗಳು ಇರುವುದು ಪತ್ತೆಯಾಗಿದೆ. ಒಂದು ಕ್ಷಣ ಅಲ್ಲಿದ್ದ ಪೊಲೀಸರಿಗೂ ಢವಢವ ಶುರುವಾಗಿದೆ ಕೂಡಲೇ ಬಾಂಬ್​ ಸ್ಕ್ವಾಡ್​ನ್ನು ಸ್ಥಳಕ್ಕೆ ಕರೆಸಿದ್ದಾರೆ ಪೊಲೀಸರು. ಒಂದೊಂದು ಕ್ಷಣವನ್ನು ಗಾಬರಿಯಲ್ಲಿಯೇ ಕಳೆದ ಪೊಲೀಸರು ಏನಿರಬಹುದು ಏನಿರಬಹುದು ಎಂದು ಆತಂಕಕ್ಕೆ ಒಳಗಾಗಿದ್ದರು.

Advertisment

ಇದನ್ನೂ ಓದಿ:ಗಂಡು ಮಕ್ಕಳಿಗೂ ಫ್ರೀ ಬಸ್ ಸಿಗುತ್ತಾ? ಡಿಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಸುಳಿವು; ಹೇಳಿದ್ದೇನು?

publive-image

ಕೊನೆಗೆ ಸ್ಥಳಕ್ಕೆ ಬಂದ ಬಾಂಬ್ ಹಾಗೂ ಡಾಗ್​ ಸ್ಕ್ವಾಡ್​ ಪರಿಶೀಲನೆ ಮಾಡಿ ನೋಡಿದ್ದಾರೆ. ಬ್ಯಾಗ್​ನಲ್ಲಿ ಬಾಂಬ್​ ಇರುವುದು ಪತ್ತೆಯಾಗಿಲ್ಲ.

publive-image

ಬಳಿಕ ಕೊಂಚ ನಿರಾಳರಾದ ಪೊಲೀಸರು ಬ್ಯಾಗ್ ತೆಗೆದು ಅದನ್ನು ಬಿಚ್ಚಿ ನೋಡಿದಾಗ ಬ್ಯಾಗ್​ನಲ್ಲಿ ಮಿಕ್ಸಿ ಹಾಗೂ ಡ್ರಿಲ್ಲಿಂಗ್ ಮಶೀನ್​ ಒಳಗೆ ಬಳಸುವ ಆರ್ಮಿಚರ್​ ಇರುವುದು ತಿಳಿದು ಬಂದಿದ್ದು. ಪೊಲೀಸರು ಹಾಗೂ ಆಟೋ ಡ್ರೈವರ್​ ಒಂದು ಕ್ಷಣ ನಿಟ್ಟುಸಿರು ಬಿಟ್ಟಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment