Advertisment

VIDEO: ತಿರುಪತಿಯಲ್ಲಿ ಮತ್ತೆ ಚಿರತೆ ಭಯ.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ; ಭಾರೀ ಎಚ್ಚರಿಕೆ!

author-image
admin
Updated On
VIDEO: ತಿರುಪತಿಯಲ್ಲಿ ಮತ್ತೆ ಚಿರತೆ ಭಯ.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ; ಭಾರೀ ಎಚ್ಚರಿಕೆ!
Advertisment
  • ಭಕ್ತರು ಕಾಲ್ನಡಿಗೆಯಲ್ಲಿ ತೆರಳುವ ಮಾರ್ಗದಲ್ಲಿ ಚಿರತೆ ಓಡಾಟ
  • ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಕಂಡು ಗಾಬರಿಯಾದ TTD
  • ಚಿರತೆ ಟ್ರ್ಯಾಪ್ ಮಾಡಲು ಕ್ಯಾಮೆರಾಗಳನ್ನು ಅಳವಡಿಸಿದ ಸಿಬ್ಬಂದಿ

ತಿರುಮಲ: ಲಡ್ಡು ಪ್ರಸಾದದಲ್ಲಿ ಪ್ರಾಣಿಯ ಕೊಬ್ಬು ಪತ್ತೆಯಾದ ವಿವಾದದ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ಭಕ್ತರು ಮತ್ತೆ ಗಾಬರಿಯಾಗಿದ್ದಾರೆ. ತಿಮ್ಮಪ್ಪನ ದರ್ಶನಕ್ಕಾಗಿ ಬೆಟ್ಟ ಹತ್ತಿ ಹೋಗುವ ದಾರಿಯಲ್ಲೇ ಚಿರತೆ ಪ್ರತ್ಯಕ್ಷವಾಗಿದ್ದು ಎಲ್ಲರೂ ಭಯ ಭೀತಿಗೊಂಡಿದ್ದಾರೆ.

Advertisment

ತಿರುಮಲ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಅದರ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಆತಂಕಕಾರಿ ವಿಚಾರ ಏನಂದ್ರೆ ತಿರುಮಲ ಬೆಟ್ಟದಲ್ಲಿ ಪ್ರತಿನಿತ್ಯ ಭಕ್ತರು ಕಾಲ್ನಡಿಗೆಯಲ್ಲೇ ದೇವರ ದರ್ಶನಕ್ಕೆ ತೆರಳುತ್ತಾರೆ. ಭಕ್ತರು ತಿರುಪತಿ ಬೆಟ್ಟ ಹತ್ತುವ ಮಾರ್ಗ ಮಧ್ಯೆಯೇ ಈ ಚಿರತೆ ಪ್ರತ್ಯಕ್ಷವಾಗಿದೆ.

ಇದನ್ನೂ ಓದಿ: ‘ನನ್ನ ಮಕ್ಕಳು ಕ್ರಿಶ್ಚಿಯನ್ಸ್​​, ನಾನು ಮತಾಂತರ ಆಗಿದ್ದೇನೆ’- ನಟ ಪವನ್​ ಕಲ್ಯಾಣ್​​ 

ತಿರುಮಲ ಬೆಟ್ಟದಲ್ಲಿ ಸದ್ದು ಮಾಡಿದ ಚಿರತೆ ಬೀದಿ ನಾಯಿಗಳ ಮೇಲೆ ದಾಳಿ ಮಾಡಿದೆ. ಈ ದೃಶ್ಯ ನೋಡಿದ ಭದ್ರತಾ ಸಿಬ್ಬಂದಿ ಕೂಡ ಫುಲ್ ಗಾಬರಿಯಾಗಿದ್ದಾರೆ. ಚಿರತೆ ನೋಡಿದ ಸೆಕ್ಯೂರಿಟಿ ಗಾರ್ಡ್‌ ಕೂಡಲೇ ಕಂಟ್ರೋಲ್ ರೂಮ್‌ಗೆ ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ. ಇದಾದ ನಂತರ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

Advertisment


">September 29, 2024

ರಾತ್ರೋರಾತ್ರಿ ಚಿರತೆ ಬಂದ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಸಿಬ್ಬಂದಿ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ವನ್ಯಮೃಗದ ಚಲನವಲನಗಳ ಮೇಲೆ ನಿಗಾ ಇಡಲಾಗಿದ್ದು, ಭಕ್ತರ ಸುರಕ್ಷತೆಯ ಬಗ್ಗೆಯೂ ಎಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment