ಆತಂಕದಲ್ಲಿ 10, 94, 572 ಬಡ ಕುಟುಂಬಗಳು
ಸರ್ಕಾರದ ಬಳಿ ಇದ್ಯಂತೆ ಹೀಗೊಂದು ಪ್ಲಾನ್
ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಕಾರ್ಡ್ಗಳು
ಬೆಂಗಳೂರು: ಸರ್ಕಾರಕ್ಕೆ ಕಾಡಿದ ಅಕ್ಕಿ ಕೊರತೆ ಅನ್ನಭಾಗ್ಯದ ಬದಲು ಧನಭಾಗ್ಯದ ನಿರ್ಧಾರಕ್ಕೆ ಕಾರಣವಾಯ್ತು. ಕೊಟ್ಟ ಮಾತಿನಂತೆ ಕೊಡಬೇಕಾದ 5 ಕೆಜಿ ಅಕ್ಕಿಯ ಬದಲು ಕೆಜಿಗೆ 34 ರೂಪಾಯಿ ಹಾಕಲು ಮುಂದಾಯ್ತು. 1.28 ಕೋಟಿ ಕುಟುಂಬಕ್ಕೆ ಅಕ್ಕಿ ಜೊತೆ ಝಣ ಝಣ ಕಾಂಚಣ ನೀಡಲು ಅಂತಿಮ ತಯಾರಿ ನಡೆಸ್ತಿದೆ. ಆದರ ಜೊತೆಗೆ ಸರ್ಕಾರ ಹೊಸದೊಂದು ತಂತ್ರ ಮಾಡಿದ್ದು, ಯಾರು ಕಳೆದ ತಿಂಗಳು ಅಕ್ಕಿ ಪಡೆದಿಲ್ವೋ ಅಂತವರಿಗೆ ನೀಡುವ ಅನ್ನಭಾಗ್ಯದ ಹಣಕ್ಕೆ ಕೊಕ್ಕೆ ಹಾಕಲು ಚರ್ಚೆ ನಡೆಸ್ತಿದೆ ಎನ್ನಲಾಗಿದೆ.
ರಾಜ್ಯದಲ್ಲಿ 1.28 ಕೋಟಿ ಕುಟುಂಬಗಳ ಬಳಿ ಬಿಪಿಎಲ್ ಕಾರ್ಡ್ ಗಳಿವೆ. ಸುಮಾರು 4.5 ಕೋಟಿ ಜನರು ಉಚಿತ ಅಕ್ಕಿಯ ಫಲಾನುಭವಿಗಳಿದ್ದಾರೆ. ಇವರಿಗೆ ಕೆಜಿಗೆ 34 ರೂಪಾಯಿ ಹಾಕಲು ಸರ್ಕಾರಕ್ಕೆ 733 ಕೋಟಿ ರೂಪಾಯಿ ಹಣ ಬೇಕು. ಆದರೆ ಕೆಲವು ಕುಟುಂಬಗಳು ಅಕ್ಕಿಯನ್ನ ಪಡೆದೇ ಇಲ್ಲ.
ಅಕ್ಕಿ ಪಡೆಯದ ಕುಟುಂಬ
ಹೌದು.. 1 ಕೋಟಿಯ, 28 ಲಕ್ಷದ 23 ಸಾವಿರದ 868 ಮಂದಿ BPL ಕಾರ್ಡ್ ಹೊಂದಿರುವವರು ರಾಜ್ಯದಲ್ಲಿದ್ದಾರೆ. ಇದ್ರಲ್ಲಿ ಕಳೆದ ತಿಂಗಳು ಅಕ್ಕಿಯನ್ನ ಪಡೆದವ್ರು 1 ಕೋಟಿಯ 17 ಲಕ್ಷದ 29 ಸಾವಿರದ 296 ಕಾರ್ಡ್ದಾರರು. ಬರೋಬ್ಬರಿ 10 ಲಕ್ಷದ 94 ಸಾವಿರದ 572 ಕುಟುಂಬಗಳು ಅಕ್ಕಿ ಪಡೆದಿಲ್ಲ. ಕಳೆದ 3 ತಿಂಗಳಿನಿಂದ 5 ಲಕ್ಷದ 37 ಸಾವಿರದ 213 ಬಿಪಿಎಲ್ ಕುಟುಂಬಸ್ಥರು ಅಕ್ಕಿ ಪಡೆದಿಲ್ಲ ಅನ್ನೋ ಮಾಹಿತಿ ಇದೆ.
ಅನ್ನ ಭಾಗ್ಯದ ಅಕ್ಕಿ ಪಡೆಯದ ಈ ಕುಟುಂಬಗಳಿಗೆ ಹಣ ಹಾಕದೇ ಇದ್ರೆ 76 ಕೋಟಿ ರೂಪಾಯಿ ಉಳಿತಾಯವಾಗಲಿದೆ. ಅಕ್ಕಿಯನ್ನೇ ಪಡೆದಿಲ್ಲ ಅಂದ್ರೆ ಅಕ್ಕಿಯ ಬದಲಿಗೆ ನೀಡುವ ಹಣವನ್ನೂ ಅನಗತ್ಯವಾಗಿ ಏಕೆ ಹಾಕಬೇಕು ಅನ್ನೋ ಚಿಂತನೆ ಸರ್ಕಾರದ್ದು. ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಸದ್ದಿಲ್ಲದೆ ಸಿದ್ಧತೆಗಳು ನಡೆದಿವೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ