newsfirstkannada.com

ಗಂಡನ ಎದುರೇ ಹೆಂಡತಿ ತಲೆ ಮೇಲೆ ಹರಿದ ಶಾಲಾ ಬಸ್‌.. ಭೀಕರ ಅಪಘಾತದಲ್ಲಿ ಕರುಣಾಜನಕ ದೃಶ್ಯ

Share :

17-08-2023

  ಅರ್ಧಕ್ಕೆ ನಿಂತ ಕಾಮಗಾರಿ.. ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ

  ಪತ್ನಿ ಸುಮಂಗಲಾ ಸಾವು, ಶವದೆದುರು ಪತಿ ಶರಣಪ್ಪ ಗೋಳಾಟ

  ಯಮಸ್ವರೂಪಿಯಾಗಿ ಮಾರ್ಪಾಡಾದ ಬೆಂಗಳೂರಿನ ಮಾಗಡಿ ರಸ್ತೆ

ಬೆಂಗಳೂರು: ಗಂಡನ ಕಣ್ ಮುಂದೆಯೇ ಹೆಂಡತಿ ಮೇಲೆ ಖಾಸಗಿ ಶಾಲಾ ಬಸ್​​ ಡಿಕ್ಕಿ ಹೊಡೆದ ಘಟನೆ ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ಸುಮಂಗಲ(58) ಮೃತ ದುರ್ದೈವಿ.

ಮೃತ ಪತ್ನಿ ಪತಿ ಶರಣಪ್ಪ ಜೊತೆಗೆ ಸ್ಕೂಟರ್​ನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿದ್ದ ಕಲ್ಲಿಗೆ ಟಯರ್​​ ಸಿಲುಕಿದೆ. ಟಯರ್​​ ಸಿಲುಕಿದ ಪರಿಣಾಮ ಸ್ಕೂಟರ್ ಮೇಲೆ ಇದ್ದ ದಂಪತಿ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಖಾಸಗಿ ಸ್ಕೂಲ್ ಬಸ್​ ಸುಮಮಂಗಲ ತಲೆ ಮೇಲೆ ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಭೀಕರ ಅಪಘಾತ

ಕಳೆದ ವಾರವಷ್ಟೇ ಇದೇ ರಸ್ತೆಯಲ್ಲಿ ಯುವಕನೊಬ್ಬ ಲಾರಿಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದ. ಇದೀಗ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆ ಮೇಲೆ ಹರಿಸಿದ ಶಾಲೆಯ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ಸಂಬಂಧ ಮಾದನಾಯಕನ ಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಣ್ಣೆದುರೇ ಸಾವಿಗೀಡಾದ ಪತ್ನಿಯನ್ನು ನೋಡಿದ ಪತಿ ಕಣ್ಣೀರು ಹಾಕುತ್ತಿರೋ ಮನಕಲಕುವ ದೃಶ್ಯ ಕರುಣಾಜನಕವಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಗಂಡನ ಎದುರೇ ಹೆಂಡತಿ ತಲೆ ಮೇಲೆ ಹರಿದ ಶಾಲಾ ಬಸ್‌.. ಭೀಕರ ಅಪಘಾತದಲ್ಲಿ ಕರುಣಾಜನಕ ದೃಶ್ಯ

https://newsfirstlive.com/wp-content/uploads/2023/08/bng-accident-2.jpg

Load More