newsfirstkannada.com

VIDEO: ಅಬ್ಬಾ.. ಶಾಲೆಯಿಂದ ಬಂದು ಕೆಳಗಿಳಿದ ಮಗುವಿನ ಮೇಲೆ ಏಕಾಏಕಿ ವಾಹನ ಹರಿಸಿದ ಚಾಲಕ; ಭಯಾನಕ ದೃಶ್ಯ ಸೆರೆ

Share :

10-11-2023

    ಶಾಲಾ ಮಗುವನ್ನು ಇಳಿಸಿದ ಮೇಲೆ ವಾಹನ ಹರಿಸಿದ ಚಾಲಕ

    ಹುಣಸೂರಿನ ಮಂಜುನಾಥ ಬಡಾವಣೆಯಲ್ಲಿ ಭಯಾನಕ ಘಟನೆ

    ಗಾಯಾಳು ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮೈಸೂರು: ಶಾಲಾ ಬಾಲಕಿ ಮೇಲೆ ಚಾಲಕನೋರ್ವ ಬಸ್ ಹರಿಸಿರೋ ಘಟನೆ ಹುಣಸೂರಿನ ಮಂಜುನಾಥ ಬಡಾವಣೆಯಲ್ಲಿ ನಡೆದಿದೆ. ಈ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯದಲ್ಲಿ ಏನಿದೆ..?

ಶಾಲಾ ವಾಹನ ಚಾಲಕ ಮೊದಲು ಬಸ್​​ನಿಂದ ಇಬ್ಬರು ಮಕ್ಕಳನ್ನು ಇಳಿಸುತ್ತಾನೆ. ಶಾಲಾ ವಾಹನದಿಂದ ಇಳಿದು ಅದೇ ವಾಹನದ ಮುಂಭಾಗದಿಂದ ಬಾಲಕಿ ಮನೆ‌ ಕಡೆ ಹೋಗುವಾಗ ಈ ಘಟನೆ ನಡೆದಿದೆ. ಬಾಲಕಿ ಇಳಿದು ಮನೆ ಕಡೆ ಹೋಗುತ್ತಿದ್ದಂತೆ ಏಕಾಏಕಿ ಚಾಲಕ ಶಾಲಾ ಬಸ್​​ ಅನ್ನು ಚಲಿಸಿಕೊಂಡು ಹೋಗುತ್ತಾನೆ. ನೋಡ ನೋಡುತ್ತಿದ್ದಂತೆ ಬಾಲಕಿಗೆ ಬಸ್​​ ಡಿಕ್ಕಿ ಹೊಡೆಯುತ್ತದೆ. ಇದೇ ವೇಳೆ ಬಾಲಕಿ ಬಸ್​​ ಅಡಿಯಲ್ಲಿ ಬೀಳುತ್ತಾಳೆ. ಇದನ್ನು ನೋಡಿದ ಕೂಡಲೇ ಸ್ಥಳೀಯರು ಬಾಲಕಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಘಟನೆ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಬ್ಬಾ.. ಶಾಲೆಯಿಂದ ಬಂದು ಕೆಳಗಿಳಿದ ಮಗುವಿನ ಮೇಲೆ ಏಕಾಏಕಿ ವಾಹನ ಹರಿಸಿದ ಚಾಲಕ; ಭಯಾನಕ ದೃಶ್ಯ ಸೆರೆ

https://newsfirstlive.com/wp-content/uploads/2023/11/accident-71.jpg

Load More