newsfirstkannada.com

ಸಿಕ್ಕ ಸಿಕ್ಕ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸೋ ಮುನ್ನ ಎಚ್ಚರ; ಪೋಷಕರು ಓದಲೇಬೇಕಾದ ಸ್ಟೋರಿ

Share :

Published August 23, 2023 at 6:34am

    ಸಾರಿಗೆ ಇಲಾಖೆ ಅನುಮತಿ ಪಡೆದೇ ಇಲ್ಲ

    ಅನಧಿಕೃತವಾಗಿ ಶಾಲಾ ಮಕ್ಕಳ ಸಾಗಾಟ

    30ಕ್ಕೂ ಹೆಚ್ಚು ಶಾಲಾ ವಾಹನಗಳು ಸೀಜ್​

ಬೆಂಗಳೂರು: ಒಂದು ಅವಕಾಶ ಕೇಳ್ತಿರೋ ಖಾಸಗಿ ಶಾಲಾ ಮಕ್ಕಳನ್ನ ಕರೆದೊಯ್ಯೋ ವಾಹನಗಳ ಚಾಲಕರು. ಅಷ್ಟಕ್ಕೂ ಇವರು ಕಣ್ಣೀರು ಹಾಕುತ್ತಾ ಅವಕಾಶ ಕೇಳೋಕೆ ಕಾರಣ ಆರ್​​ಟಿಓ ಅಧಿಕಾರಿಗಳು ಕೊಟ್ಟ ಸರ್ಪ್ರೈಸ್​​ ವಿಸಿಟ್​.

ಸಾರಿಗೆ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಅನಧಿಕೃತವಾಗಿ ಮಕ್ಕಳನ್ನ ಹೊತ್ತು ಸಾಗುತ್ತಿರುವ ವಾಹನಗಳ ಮೇಲೆ ಆರ್​​ಟಿಓ ಅಧಿಕಾರಿಗಳು ರೈಡ್​ ಮಾಡಿದ್ದಾರೆ. ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಶೋಭ ಸೂಚನೆ ಮೇರೆಗೆ ವಾಹನಗಳನ್ನು ಸೀಜ್​ ಮಾಡಿದ್ದಾರೆ.

ಇನ್ನು ಈ ಸಡನ್​ ರೈಡ್​​ನಿಂದ ಕಂಗೆಟ್ಟ ವಾಹನ ಚಾಲಕರು ನಮಗೊಂದು ಅವಕಾಶ ಕೊಡಿ. ಇನ್ನು ಎರಡ್ಮೂರು ದಿನದಲ್ಲಿ ಪರ್ಮಿಷನ್​ ತಗೋತೀವಿ ಅಂತ ಮನವಿ ಮಾಡಿದ್ರು.

ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ರೈಡ್​ ನಡೆದಿದ್ದು ಸಾಕಷ್ಟು ವಾಹನಗಳನ್ನ ಸೀಜ್​ ಮಾಡಲಾಗಿದೆ. ಈ ಬಗ್ಗೆ ಪೋಷಕರು ಕೂಡಾ ಗಮನ ಹರಿಸಬೇಕು. ಸಿಕ್ಕ ಸಿಕ್ಕ ವಾಹನಗಳಲ್ಲಿ ಮಕ್ಕಳನ್ನ ಶಾಲೆಗೆ ಕಳಿಸಬಾರದು ಅನ್ನೋದನ್ನ ಆಯುಕ್ತರು ಹೇಳ್ತಿದ್ದಾರೆ. ಆದ್ರೆ ಇದನ್ನ ಪೋಷಕರು ಎಷ್ಟರ ಮಟ್ಟಿಗೆ ಪಾಲಿಸ್ತಾರೆ ಅನ್ನೋದೇ ಸದ್ಯದ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಕ್ಕ ಸಿಕ್ಕ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳಿಸೋ ಮುನ್ನ ಎಚ್ಚರ; ಪೋಷಕರು ಓದಲೇಬೇಕಾದ ಸ್ಟೋರಿ

https://newsfirstlive.com/wp-content/uploads/2023/08/School-van.jpg

Load More