ಆಟೋ ಚಾಲಕ ಅಂಗಡಿಗೆ ಹೋಗಿದ್ದಾಗ ಇಬ್ಬರು ಮಕ್ಕಳು ಮಿಸ್ಸಿಂಗ್
ಯುವತಿ ಬಳಿ ನಮಗೆ ಭಯ ಅಗ್ತಿದೆ ಎಂದು ಹೇಳಿದ ಮಕ್ಕಳು
ವಿವಿ ಪುರಂ ಪೊಲೀಸರು ಮಾಡಿದ ಕೆಲಸಕ್ಕೆ ಹ್ಯಾಟ್ಸ್ಅಪ್
ಶಾಲೆಯಿಂದ ಆಟೋ ಹತ್ತುವಾಗ ಇಬ್ಬರು ಮಕ್ಕಳು ಮಿಸ್ಸಿಂಗ್ ಆದ ಘಟನೆ ಸ್ಯಾಟಲೈಟ್ ಬಸ್ಸ್ಟ್ಯಾಂಡ್ ಬಳಿ ನಡೆದಿದೆ. ನಾಪತ್ತೆಯಾದ ಮಕ್ಕಳನ್ನ ಪೊಲೀಸರು ಸಿನಿಮೀಯ ರೀತಿಯಲ್ಲಿ ಪತ್ತೆಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ.
ಏನಿದು ಘಟನೆ?
ಆಟೋ ಚಾಲಕ ಅಂಗಡಿಗೆ ಹೋಗಿದ್ದಾಗ ಇಬ್ಬರು ಮಕ್ಕಳು ಮಿಸ್ಸಿಂಗ್ ಆಗಿದ್ದಾರೆ. ಚಾಲಕ ರಿಕ್ಷಾದ ಬಳಿ ಬರೋದ್ರೊಳಗೆ ಮಕ್ಕಳು ಸ್ವಲ್ಪ ದೂರ ನಡೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿಂದ ವಾಪಸ್ಸು ಬರೋದಕ್ಕೆ ಗೊತ್ತಾಗದೇ ದಾರಿ ತಪ್ಪಿ ಸಾಕಷ್ಟು ಕಡೆ ಸುತ್ತಾಡಿದ್ದಾರೆ. ಕೊನೆಗೆ ದಾರಿಯಲ್ಲಿ ಹೋಗ್ತಿದ್ದ ಓರ್ವ ಯುವತಿ ಬಳಿ ಮಕ್ಕಳು ನಮಗೆ ಭಯ ಅಗ್ತಿದೆ ಎಂದು ಹೇಳಿದ್ದಾರೆ.
ಮಿಸ್ಸಿಂಗ್ ಆದ ಇಬ್ಬರಲ್ಲಿ ಒಬ್ಬ 5 ವರ್ಷದವನಾಗಿದ್ದು, ನನ್ನ ತಂದೆ ಪೋನ್ ನಂಬರ್ ನನಗೆ ಗೊತ್ತು ಎಂದು ಯುವತಿ ಬಳಿ ಹೇಳಿದ್ದಾಳೆ. ಬಳಿಕ ಯುವತಿಯ ಕೈಯಿಂದ ತಂದೆಗೆ ಪೋನ್ ಮಾಡಿಸಿದ್ದಾನೆ. ಕಾಲ್ ಮಾಡಿದ ಯುವತಿ ನಿಮ್ಮ ಮಕ್ಕಳು ಸ್ಯಾಟ್ ಲೈಟ್ ಬಸ್ಸ್ಟ್ಯಾಂಡ್ ಹತ್ತಿರ ಇದ್ದಾರೆ ಎಂದು ಮಾಹಿತಿ ನೀಡಿದ್ದಾಳೆ. ಬಳಿಕ ಕರೆ ಕಟ್ ಮಾಡಿದ್ದಾಳೆ.
ಇನ್ನು ಯುವತಿಯ ಕರೆ ಸ್ವೀಕರಿಸಿದಂತೆ ಭಯಗೊಂಡ ತಂದೆ ತಕ್ಷಣ ವಿವಿಪುರಂ ಪೊಲೀಸ್ ಠಾಣೆಗೆ ಬಂದು ವಿಚಾರ ತಿಳಿಸಿದ್ದಾರೆ. ಮೊಬೈಲ್ಗೆ ಬಂದ ನಂಬರ್ ಪಡೆದು ಪೊಲೀಸರು ಟವರ್ ಲೊಕೇಶನ್ ಮೂಲಕ ವಿಳಾಸ ಪತ್ತೆ ಹಚ್ಚಿದ್ದಾರೆ.
ತಕ್ಷಣ 20 ಜನ ಸಿಬ್ಬಂದಿ ಮಕ್ಕಳಿಗಾಗಿ ಸ್ಯಾಟ್ ಲೈಟ್ ಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಕೇವಲ 3 ಗಂಟೆಯೊಳಗೆ ವಿವಿಪುರಂ ಪೊಲೀಸರು ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಇನ್ನು ಮಕ್ಕಳು ಕರೆ ಬಂದ 1 ಕಿ.ಮೀ ದೂರದಲ್ಲಿ ಇಬ್ಬರು ನಿಂತಿದ್ದರು. ಬಳಿಕ ಮಕ್ಕಳನ್ನ ಕರೆ ತಂದು ಪೊಲೀಸರು ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ