newsfirstkannada.com

ಶಿಕ್ಷಕಿಯ ಕೈಯಲ್ಲಿದ್ದ ಐಫೋನ್​ ಕದಿಯಲೆತ್ನಿಸಿದ ಖದೀಮರು.. ಆಕೆಯನ್ನ ರಸ್ತೆಯುದ್ದಕ್ಕೂ ಎಳೆದೇ ಬಿಟ್ರು; ಮುಂದೇನಾಯ್ತು?

Share :

14-08-2023

  ಶಿಕ್ಷಕಿಯ ಕೈಯಲ್ಲಿ ಐಫೋನ್​ಗಾಗಿ ಮೂವರಿಂದ ಅಟ್ಯಾಕ್​

  ಆಟೋದಲ್ಲಿದ್ದ ಶಿಕ್ಷಕಿಯನ್ನು ರಸ್ತೆಗೆಳೆದ ಖದೀಮರು

  ಶಿಕ್ಷಕಿಯ ಮುಖ, ಕೈಕಾಲುಗಳಿಗೆ ಗಂಭೀರ ಗಾಯವಾಗಿದೆ

ಶಿಕ್ಷಕಿಯೊಬ್ಬರ ಕೈಯಲ್ಲಿದ್ದ ಐಫೋನ್​ ಕದಿಯಲೆತ್ನಿಸಿದ ಖದೀಮರು ಆಕೆಯನ್ನು ರಸ್ತೆಯುದ್ದಕ್ಕೂ ಎಳೆದೊಯ್ದ ಘಟನೆ ದೆಹಲಿಯಲ್ಲಿ ನಡೆದಿದೆ.

ಇಲ್ಲಿನ ಪ್ರತಿಷ್ಠಿತ ಜ್ಞಾನ ಭಾರತಿ ಶಾಲೆಯ ಶಿಕ್ಷಕಿ ಯೋವಿಕಾ ಚೌಧರಿ ಮಧ್ಯಾಹ್ನ ವೇಳೆ ಮನೆಗೆ ತೆರಳುತ್ತಿದ್ದರು. ಆಟೋದಲ್ಲಿ ಕುಳಿತು ಮನೆಯ ಕಡೆಗೆ ಹೊರಟಿದ್ದರು. ಆದರೆ ಈ ವೇಳೆ ಶಿಕ್ಷಕಿಯ ಕೈಯಲ್ಲಿದ್ದ ಮೊಬೈಲ್​ ಕಂಡ ಮೂವರು ಖದೀಮರು ಬೈಕ್​ನಲ್ಲಿ ಬಂದು ಎಗರಿಸಲು ಮುಂದಾಗಿದ್ದಾರೆ. ಕೂಡಲೇ ಶಿಕ್ಷಕಿ ಎಚ್ಚೆತ್ತುಕೊಂಡಿದ್ದಾರೆ.

ಇಷ್ಟಾದರೂ ಸುಮ್ಮನಾಗದ ಖದೀಮರು ಶಿಕ್ಷಕಿಯ ಬೆನ್ನು ಬಿದ್ದಿದ್ದಾರೆ. ಆಟೋವನ್ನು ಹಿಂಬಾಲಿಸಿಕೊಂಡು ಸುತ್ತವರಿದಿದ್ದಾರೆ. ಐಫೋನ್​ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಶಿಕ್ಷಕಿ ಮಾತ್ರ ಐಫೋನ್​ ತನ್ನ ಕೈಯಿಂದ ಬಿಟ್ಟಿರಲಿಲ್ಲ. ಆದರೆ ಖದೀಮರು ಎಳೆದ ರಭಸಕ್ಕೆ ಶಿಕ್ಷಕಿ ಆಟೋದಿಂದ ರಸ್ತೆಗೆಸೆದಿದ್ದಾರೆ. ಈ ವೇಳೆ ಕೈಯಲ್ಲಿದ್ದ ಐಫೋನ್ ಬಿಟ್ಟು​ ಬಿಟ್ಟಿದ್ದಾರೆ.

ಆಟೋದಿಂದ ರಸ್ತೆಗೆ ಬಿದ್ದ ಶಿಕ್ಷಕಿಯ ಮುಖ, ಕೈಕಾಲುಗಳಿಗೆ ಗಂಭೀರ ಗಾಯವಾಗಿದೆ. ಮ್ಯಾಕ್ಸ್​ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಕುರಿತಾಗಿ ಸಾಕೇತ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿಕ್ಷಕಿಯ ಕೈಯಲ್ಲಿದ್ದ ಐಫೋನ್​ ಕದಿಯಲೆತ್ನಿಸಿದ ಖದೀಮರು.. ಆಕೆಯನ್ನ ರಸ್ತೆಯುದ್ದಕ್ಕೂ ಎಳೆದೇ ಬಿಟ್ರು; ಮುಂದೇನಾಯ್ತು?

https://newsfirstlive.com/wp-content/uploads/2023/08/Delhi.jpg

Load More