ಟ್ರಾಫಿಕ್ ಜಾಂ ಹಿನ್ನೆಲೆ ಶಾಲಾ ಸಮಯ ಬದಲಾವಣೆ
ಸಮಯ ಕಡಿಮೆ ಮಾಡಲು ಮುಂದಾದ ಶಿಕ್ಷಣ ಇಲಾಖೆ
ಹೈಕೋರ್ಟ್ ಸಲಹೆ ಮೇರೆಗೆ ಸಮಯ ಬದಲಾವಣೆ ಪ್ಲಾನ್
ಬೆಂಗಳೂರು: ಆಫೀಸ್ ಟೈಮ್.. ಮಕ್ಕಳ ಸ್ಕೂಲ್ ಟೈಮ್ ಎರಡು ಒಂದೇ ಆದ್ರೆ ಮುಗಿದೋಯ್ತು. ನಗರದ ರಸ್ತೆಗಳೆಲ್ಲಾ ಜಾಂ ಜಾಂ ಜಾಂ. ಇದ್ರಿಂದ ಟ್ರಾಫಿಕ್ ಪೊಲೀಸರು ಹೈರಾಣಾಗಿ ಹೋಗ್ತಿದ್ರು. ಇದ್ರಿಂದ ಶಿಕ್ಷಣ ಇಲಾಖೆ ಶಾಲಾ ಸಮಯವನ್ನ ಬದಲಾಯಿಸೋ ಪ್ಲಾನ್ನಲ್ಲೂ ಇತ್ತು. ಹೀಗಿರುವಾಗಲೇ ಅಪಸ್ವರವೊಂದು ಕೇಳಿಬಂದಿದೆ.
ಬೆಳಕಾಯ್ತು ಅಂದ್ರೆ ಹಾಲು ಪೇಪರ್ನವ್ರ ಬಳಿಕ ರಸ್ತೆಗಿಳಿಯೋದೇ ಸ್ಕೂಲ್ ಬಸ್ಗಳು. ಇದೇ ಟೈಮಲ್ಲಿ ಕೆಲಸಕ್ಕೆ ಹೋಗೋರು ಕೂಡಾ ಒಟ್ಟೊಟ್ಟಿಗೆ ರಸ್ತೆಗಿಳಿತಾರೆ. ಇದ್ರಿಂದ ಮುಖ್ಯ ರಸ್ತೆಗಳು ಮಾತ್ರವಲ್ಲ ಗಲ್ಲಿ ಗಲ್ಲಿ ಯಲ್ಲೂ ಟ್ರಾಫಿಕ್. ಹೀಗಾಗಿ ಶಾಲಾ ಸಮಯ ಬದಲಾವಣೆ ಮಾಡ್ಬೇಕು ಅಂತ ಹೈಕೋರ್ಟ್ ಸೂಚನೆ ನೀಡಿತ್ತು. ಇದೀಗ ಈ ವಿಚಾರಕ್ಕೆ ಕ್ಲೈಮ್ಯಾಕ್ಸ್ ಕೊಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಇಲಾಖೆ ನಿರ್ಧಾರಕ್ಕೆ ಬರುವ ಮುನ್ನವೇ ಖಾಸಗಿ ಶಾಲೆಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.
ಸದ್ಯ ರಾಜ್ಯಾದ್ಯಂತ ಬಹುತೇಕ ಶಾಲೆಗಳಲ್ಲಿ ಬೆಳಗ್ಗೆ 8.45 ರಿಂದ 3.30 ರವರೆಗೆ ತರಗತಿಗಳು ನಡೆಯುತ್ತವೆ. ಈ ಸಮಯವನ್ನು ಅರ್ಧ ತಾಸು ಇಳಿಕೆ ಮಾಡಿದರೆ ಹೇಗೆ ಎಂಬ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಆಲೋಚನೆ ಮಾಡಿ ಖಾಸಗಿ ಶಾಲಾ ಒಕ್ಕೂಟದ ಜೊತೆ ಸಭೆ ನಡೆಸಲು ನಿರ್ಧಾರ ಮಾಡಿತ್ತು. ಆದ್ರೆ ಸಭೆ ಕರೆಯೋ ಮುನ್ನವೇ ಒಕ್ಕೂಟ ಈ ನಿರ್ಧಾರದಿಂದ ಮಕ್ಕಳಿಗೆ ಸಮಸ್ಯೆ ಆಗುತ್ತೆ ಅಂತ ತಿಳಿಸಿದೆ
ಖಾಸಗಿ ಶಾಲಾ ಒಕ್ಕೂಟ ಹೇಳೋದೇನು?
ಸಮಯ ಬೇಗ ಆದ್ರೆ ಮಕ್ಕಳು ಬೆಳಗ್ಗೆ ಬೇಗ ಏಳಬೇಕು. ಮಕ್ಕಳ ದೈಹಿಕ ಚಟುವಟಿಕೆಗೆ ಕಡಿಮೆ ಕಾಲಾವಕಾಶ ಸಿಗುತ್ತದೆ. ಕಡಿಮೆ ನಿದ್ದೆಯಿಂದ ಆರೋಗ್ಯ ಸಮಸ್ಯೆಯಾಗಬಹುದು. ನಗರದ ಪ್ರಮುಖ ಟ್ರಾಫಿಕ್ ಇರುವ ಏರಿಯಗಳಲ್ಲಿ ಶಾಲೆಗಳನ್ನ ಬೇಗ ಶುರು ಮಾಡಲಿ. ಅಂದ್ರೆ ಎಂಜಿ ರೋಡ್ನಂಥಾ ಭಾಗದಲ್ಲಿ ಶಾಲೆ ಬೇಗ ಆರಂಭ ಮಾಡಲಿ. ಹೊರ ವಲಯದ ರಸ್ತೆಗಳಲ್ಲಿ ಬೇಗ ಆರಂಭ ಮಾಡೋ ಅವಶ್ಯಕತೆ ಇಲ್ಲ. ಕಲಿಕಾ ಅವಧಿ ಕಡಿತ ಗೊಳಿಸದೇ ಶಾಲೆ ಬೇಗ ಆರಂಭ ಮಾಡಲಿ ಅನ್ನೋದು ಖಾಸಗಿ ಒಕ್ಕೂಟಗಳ ಅಭಿಪ್ರಾಯ.
ಖಾಸಗಿ ಶಾಲೆಗಳ ಒಕ್ಕೂಟ ಹೇಳೋದ್ರಲ್ಲೂ ಅರ್ಥವಿದೆ. ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳೋ ಮೊದಲು ಇವರ ಅಭಿಪ್ರಾಯವನ್ನು ಪಡೆಯೋದು ಒಳ್ಳೇದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ