newsfirstkannada.com

ಮಗುವಿನ ಮೇಲೆಯೇ ಸ್ಕೂಲ್​ ಬಸ್​ ಹತ್ತಿಸಿದ ಚಾಲಕ.. ಅಸಲಿಗೆ ಆಗಿದ್ದೇನು..?

Share :

10-11-2023

  ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಜಾಗರೂಕರಾಗಿ ಇರಬೇಕು

  ಸ್ವಲ್ಪ ಯಾಮಾರಿದ್ರೂ ಭೀಕರ ಅಪಘಾತಗಳು ಸಂಭವಿಸುತ್ತವೆ..!

  ಅವಸರದಲ್ಲಿ ಚಾಲಕನೊಬ್ಬ ಮಗುವಿನ ಮೇಲೆ ವಾಹನ ಹತ್ತಿಸಿದ

ಮೈಸೂರು: ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವಾಗ ಜಾಗರೂಕರಾಗಿರಬೇಕು.. ಸ್ವಲ್ಪ ಯಾಮಾರಿದ್ರೂ ಅಪಘಾತಗಳು ಸಂಭವಿಸುತ್ತವೆ. ಈಗ ಇಂಥದ್ದೇ ಘಟನೆ ಒಂದು ನಡೆದಿದ್ದು, ಅವಸರದಲ್ಲಿ ಚಾಲಕನೊಬ್ಬ ಮಗುವಿನ ಮೇಲೆ ವಾಹನ ಹತ್ತಿಸಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ನಡೆದಿದೆ.

ರಸ್ತೆಯಲ್ಲಿ ಶಾಲಾ ವಾಹನವೊಂದು ಬಂದು ನಿಂತಿದೆ. ಶಾಲಾ ಮಕ್ಕಳು ವಾಹನದಿಂದ ಇಳಿಯುತ್ತಿದ್ದಾರೆ. ಒಬ್ಬ ಬಾಲಕಿ ವಾಹನದಿಂದ ಇಳಿದು ರಸ್ತೆ ದಾಟಲು ಮುಂದಾಗಿದ್ದಾಳೆ. ದೃಶ್ಯ‌ ಎಂಬ ಮಗು ವಾಹನದಿಂದ ಇಳಿದು ಮನೆಗೆ ಹೋಗಲು ರಸ್ತೆ ದಾಟಲು ಮುಂದಾಗಿದ್ದಾಳೆ. ಅದನು ಗಮನಿಸದ ಚಾಲಕ ವಾಹನವನ್ನು ಮುಂದಕ್ಕೆ ತಂದಿದ್ದಾನೆ. ರಸ್ತೆ ಮಧ್ಯದಲ್ಲಿ ಹೋಗುತ್ತಿದ್ದ ಮಗುವಿನ ಮೇಲೆ ವಾಹನ ಹತ್ತಿಸಿದ್ದಾನೆ.

ವಾಹನ ಡಿಕ್ಕಿ ಹೊಡೆದ ಪರಿಣಾಮ ಗಾಯಗಳಾಗಿದ್ದು, ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗುವಿನ ಮೇಲೆಯೇ ಸ್ಕೂಲ್​ ಬಸ್​ ಹತ್ತಿಸಿದ ಚಾಲಕ.. ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/11/Accident-6.jpg

Load More