newsfirstkannada.com

ಮಳೆ ಅವಾಂತರಕ್ಕೆ ಮತ್ತೊಂದು ಸಾವು.. ಸೇತುವೆ ದಾಟಲು ಹೋಗಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

Share :

29-07-2023

    ಮೃತದೇಹ ಪತ್ತೆ ಹಚ್ಚಿ ಹೊರತಂದ SDRF ಪಡೆ

    ಡ್ರೋಣ್ ಮೂಲಕ ವಿಶೇಷ ಕಾರ್ಯಾಚರಣೆ

    ಬೀದರ್ ಜಿಲ್ಲೆಯ ಧನ್ನುರು ಗ್ರಾಮದಲ್ಲಿ ಘಟನೆ

ಸೇತುವೆ ದಾಟಲು ಹೋಗಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಎಸ್​​​ಡಿಆರ್​ಎಫ್​​ ಸಿಬ್ಬಂದಿ ಮಲ್ಲಪ್ಪ ಶರಣಪ್ಪ ಕರೆಪನೋರ್ ಮೃತದೇಹವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದ ಧನ್ನುರು ಗ್ರಾಮದ ಮಲ್ಲಪ್ಪ ಸೇತುವೆ ದಾಟುವ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ. ವಿಷಯ ಗೊತ್ತಾಗುತ್ತಿದ್ದಂತೆಯೇ ಮಲ್ಲಪ್ಪ ಶರಣಪ್ಪಗಾಗಿ ಎಸ್‌ಡಿಆರ್‌‌ಎಫ್ ತಂಡ ಶೋಧಕಾರ್ಯಕ್ಕೆ ಇಳಿದಿತ್ತು. ಕೊಚ್ಚಿಹೋಗಿದ್ದ ಯುವಕನ ಪತ್ತೆಗಾಗಿ ಡ್ರೋಣ್ ಕೂಡ ಬಳಸಲಾಗಿತ್ತು.

ಧನ್ನೂರು ಗ್ರಾಮದಿಂದ ಒಂದು‌ ಕಿ.ಮೀ ದೂರದಲ್ಲಿ ‌ಯುವಕನ ಮಲ್ಲಪ್ಪನ ಶವ ಪತ್ತೆಯಾಗಿದೆ. ಡ್ರೋನ್ ಮೂಲಕ‌ ಕಾರ್ಯಾಚರಣೆ ನಡೆಸಿ ಯುವಕನ ಶವವನ್ನು ಎಸ್‌ಡಿ‌ಆರ್‌ಎಫ್ ಪಡೆ ಪತ್ತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಳೆ ಅವಾಂತರಕ್ಕೆ ಮತ್ತೊಂದು ಸಾವು.. ಸೇತುವೆ ದಾಟಲು ಹೋಗಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

https://newsfirstlive.com/wp-content/uploads/2023/07/Manipur-2-3.jpg

Load More