newsfirstkannada.com

ಅಪ್ಪನ ಅಗಲಿಕೆಯ ನೋವಿನಲ್ಲೂ ದೇಶಕ್ಕಾಗಿ ದುಡಿದ ವಿಜ್ಞಾನಿ; ಚಂದ್ರಯಾನ-3 ಕಂಪ್ಲೀಟ್​​ ಹಿಂದಿದೆ ನೂರೆಂಟು ನೋವುಗಳ ಶ್ರಮ..

Share :

24-08-2023

    ತಂದೆಯ ಅಂತ್ಯಕ್ರಿಯೆ ನೆರವೇರಿಸಿ ಕೆಲವೇ ಕ್ಷಣದಲ್ಲಿ ಕೆಲಸಕ್ಕೆ ಹಾಜರ್

    ಮನೆಯಲ್ಲಿ ಸೂತಕದ ಛಾಯೆ ಇದ್ದರೂ ಚಂದ್ರಯಾನ ಕಂಪ್ಲೀಟ್​​ಗೆ ಶ್ರಮ

    ಹೆರಿಗೆಯಾಗಿ ವಿಶ್ರಾಂತಿ ಪಡೆಯದೇ ಕೆಲಸಕ್ಕೆ ಬಂದ ಮಹಿಳಾ ವಿಜ್ಞಾನಿ

ಆಗಸ್ಟ್ 23, 2023 ಭಾರತೀಯ ಬಾಹ್ಯಾಕಾಶ ಕೇತ್ರದ ಬಗ್ಗೆ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ. ಚಂದ್ರಯಾನ-3 ಪ್ರಾಜೆಕ್ಟ್​ನ ಲ್ಯಾಂಡರ್ ವಿಕ್ರಂ ಚಂದ್ರನ ದಕ್ಷಿಣ ಧ್ರುವದಲ್ಲಿ ಸಂಜೆ 6.5ಕ್ಕೆ ಸಾಫ್ಟ್​ ಲ್ಯಾಂಡ್​ ಆಗುತ್ತಿದ್ದಂತೆಯೇ, ಇಸ್ರೋ ಲೋಕ ಸಂಭ್ರಮದಲ್ಲಿ ಮುಳುಗಿತ್ತು. ಕುತೂಹಲದಿಂದ ಕಾದು ಕೂತಿದ್ದ ದೇಶದ ನಾಗರಿಕರು ನಮ್ಮ ವಿಜ್ಞಾನಿಗಳಿಗೆ ಜೈಕಾರ ಕೂಗಿ ಹೆಮ್ಮೆ ವ್ಯಕ್ತಪಡಿಸಿದರು. ಇಡೀ ವಿಶ್ವ ಭಾರತದ ವಿಜ್ಞಾನಿಗಳಿಗೆ ತಲೆಬಾಗಿ, ಅಭಿನಂದನೆಗಳ ಮಹಾಪೂರವೇ ಹರಿದುಬಂತು.

ಈ ಶುಭಾಶಗಳ ಹಿಂದೆ ನಮ್ಮ ವಿಜ್ಞಾನಿಗಳ ಪರಿಶ್ರಮ ಎಷ್ಟಿತ್ತು ಅನ್ನೋ ವಿಚಾರಗಳು ಇದೀಗ ಒಂದೊಂದೆಯಾಗಿ ಹೊರಬರುತ್ತಿವೆ. ​ ಚಂದ್ರಯನದ ಯಶಸ್ಸಿನ ಗುಟ್ಟಿನ ಬಗ್ಗೆ ನ್ಯೂಸ್​ಫಸ್ಟ್, ಇಸ್ರೋ ಡೆಪ್ಯೂಟಿ ಡೈರೆಕ್ಟರ್ ಎಸ್.ವಿ.ಶರ್ಮಾ ಜೊತೆ ಮಾತಕತೆ ನಡೆಸಿತ್ತು. ಈ ವೇಳೆ ಕೆಲವು ವಿಚಾರಗಳ ಬಗ್ಗೆ ನಮ್ಮ ಜೊತೆ ಹಂಚಿಕೊಂಡರು.

ಎಸ್​.ವಿ.ಶರ್ಮಾ ಹೇಳಿದ್ದೇನು?

ಚಂದ್ರಯಾನ-3 ಯಶಸ್ವಿಗೆ ನಮ್ಮ ವಿಜ್ಞಾನಿಗಳು ಹಗಲು ರಾತ್ರಿ ಪಟ್ಟಿದ್ದ ಪರಿಶ್ರಮವೇ ಕಾರಣ. ಚಂದ್ರನ ಮೇಲೆ ಲ್ಯಾಂಡರ್, ಸಾಫ್ಟ್ ಲ್ಯಾಂಡ್ ಆಗಲು ಕಾರಣ ನಾವು ನಡೆಸಿದ ಸಿದ್ಧತೆ ಹಾಗಿತ್ತು. ನಮ್ಮ ಚಂದ್ರಯಾನ 2 ವಿಫಲ ಆಗುತ್ತಿದ್ದಂತೆಯೇ ಚಂದ್ರಯಾನ-3 ಯಶಸ್ಸಿಗಾಗಿ ಶಪಥ ಮಾಡಿದ್ದರು.

ಚಂದ್ರಯಾನ-3ಗೆ ಸ್ವಲ್ಪ ಸಮಯ ತೆಗೆದುಕೊಂಡರೂ ಪರವಾಗಿಲ್ಲ. ಸಾಫ್ಟ್ ಲ್ಯಾಂಡಿಂಗ್ ಮಾಡಲೇಬೇಕು ಅನ್ನೋ ಛಲ ಮೂಡಿತ್ತು. ಅದಕ್ಕಾಗಿ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿದೇವು. ಟೆಕ್ನಿಕಲ್ ಆಗಿಯೂ ನಾವು ಸಾಕಷ್ಟು ಬದಲಾವಣೆ ಮಾಡಿಕೊಂಡೆವು.

ವೈಯಕ್ತಿಕವಾಗಿ ಎದುರಾದ ಸವಾಲುಗಳೇನು..?

ತಾಂತ್ರಿಕ ದೋಷಗಳ ಹೊರತುಪಡಿಸಿಯೂ ನಾವು ಹಲವು ನೋವು, ಸಂಕಷ್ಟಗಳನ್ನು ಎದುರಿಸಬೇಕಾಗಿ ಬಂತು. ಸಾಫ್ಟ್ ಲ್ಯಾಂಡಿಂಗ್​​ಗೆ ​​ ಮೂರು ದಿನ ಬಾಕಿ ಇದ್ದಾಗ ನಮ್ಮ ವಿಜ್ಞಾನಿ ಒಬ್ಬರ ತಂದೆ ವಿಧಿವಶರಾದರು. ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಮರು ಕ್ಷಣವೇ ಚಂದ್ರಯಾನ ಯಶಸ್ಸಿಗೆ ಕೈಜೋಡಿಸಲು ಬಂದರು. ಮತ್ತೊಬ್ಬ ಮಹಿಳಾ ವಿಜ್ಞಾನಿ ಹೆರಿಗೆಯಾಗಿ ಒಂದರೆಡು ವಾರ ಮಾತ್ರ ವಿಶ್ರಾಂತಿ ಪಡೆದು ಕರ್ತವ್ಯಕ್ಕೆ ಹಾಜರಾದರು ಎಂಬ ವಿಚಾರವನ್ನು ಹಂಚಿಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪನ ಅಗಲಿಕೆಯ ನೋವಿನಲ್ಲೂ ದೇಶಕ್ಕಾಗಿ ದುಡಿದ ವಿಜ್ಞಾನಿ; ಚಂದ್ರಯಾನ-3 ಕಂಪ್ಲೀಟ್​​ ಹಿಂದಿದೆ ನೂರೆಂಟು ನೋವುಗಳ ಶ್ರಮ..

https://newsfirstlive.com/wp-content/uploads/2023/08/CHANDRAYAANA-3-3.jpg

Load More