ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ಎಚ್ಚರಿಕೆಯ ಮಾಹಿತಿ
ಗಂಭೀರ ಭದ್ರತಾ ದೋಷಗಳನ್ನು ಪತ್ತೆಹಚ್ಚಿದ CERT-In ಟೀಮ್
ಡೇಟಾ ಕಳ್ಳತನ, ವೈಯಕ್ತಿಕ ಮಾಹಿತಿ ಸೋರಿಕೆಯಾಗಬಹುದು ಎಚ್ಚರ
ನೀವು ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಸುತ್ತಿದ್ದೀರಾ? ಅದರ ಮೂಲಕ ವ್ಯವಹಾರ ನಡೆಸುತ್ತಿದ್ದೀರಾ? ಹಾಗಿದ್ದರೆ ಅಂತವರಿಗಾಗಿ ಮುಖ್ಯವಾದ ಸುದ್ದಿ ಇಲ್ಲಿದೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನಲ್ಲಿ ಕೆಲವು ಗಂಭೀರ ಭದ್ರತಾ ದೋಷಗಳನ್ನು ಪತ್ತೆಹಚ್ಚಿದೆ. ಹೀಗಾಗಿ ಸೈಬರ್ ಸುರಕ್ಷತೆಯ ಬಗ್ಗೆ ಎಚ್ಚರಿಕೆಯನ್ನು ರವಾನಿಸಿದೆ.
12, 12L, 13, 14 ಮತ್ತು 15 ಚಾಲನೆಯಲ್ಲಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಈ ಭದ್ರತಾ ದೋಷಗಳಿಂದ ಅಪಾಯದಲ್ಲಿದೆ ಎಂದು ಎಚ್ಚರಿಸಿದೆ. ಕಂಪ್ಯೂಟರ್ ಅಥವಾ ನಿತ್ಯ ಬಳಕೆಯ ಲ್ಯಾಪ್ಟಾಪ್ಗಳಲ್ಲಿ ದೋಷ ಕಾಣಿಸುವ ಮೊದಲು ಅಪ್ಡೇಟ್ ಮಾಡಿ ಎಂದು ತಿಳಿಸಿದೆ.
ಇದನ್ನೂ ಓದಿ: ಬರೀ 20 ನಿಮಿಷ ಚಾರ್ಜ್ ಮಾಡಿ 200km ಓಡಿಸಿ! ಬೆಂಗಳೂರಿಗರಿಗೆ ಇದು ಹೇಳಿ ಮಾಡಿಸಿದ ಬೈಕ್
ಅದರಲ್ಲೂ ಆಂಡ್ರಾಯ್ಡ್‌ನಲ್ಲಿನ ಈ ಭದ್ರತಾ ನ್ಯೂನತೆಗಳು ಬಳಕೆದಾರರಿಗೆ ಸಮಸ್ಯೆಯಾಗಬಹುದು ಎಂದು ಹೇಳಿದೆ. ಇದು ಸೈಬರ್ ದಾಳಿಕೋರರಿಗೆ ಅನಿಯಂತ್ರಿತ ಕೋಡ್ ಅನ್ನು ಸಿಸ್ಟಮ್‌ಗೆ ಸೇರಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಬಳಕೆದಾರ ಸಂಕಷ್ಟಕ್ಕೆ ಸಿಲುಕಿಕೊಳ್ಳಬಹುದು ಎಂದಿದೆ. CERT-In ಈ ನ್ಯೂನತೆಗಳನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಪರಿಹಾರವನ್ನು ಸಹ ನೀಡಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಆಟಗಾರನೋ? ಅತಿಥಿಯೋ? ಕನ್ಫ್ಯೂಶನ್ನಲ್ಲಿ ಧನ್ರಾಜ್ ಕಣ್ಣೀರು
ಆಂಡ್ರಾಯ್ಡ್‌ನ ಫ್ರೇಮ್‌ವರ್ಕ್, ಸಿಸ್ಟಮ್, ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್‌ಗಳು, ಇಮ್ಯಾಜಿನೇಶನ್ ಟೆಕ್ನಾಲಜೀಸ್ ಕಾಂಪೊನೆಂಟ್‌ಗಳು, ಮೀಡಿಯಾ ಟೆಕ್ ಕಾಂಪೊನೆಂಟ್‌ಗಳು, ಕ್ವಾಲ್ಕಾಮ್ ಕಾಂಪೊನೆಂಟ್‌ಗಳು ಮತ್ತು ಕ್ವಾಲ್ಕಾಮ್ ಕ್ಲೋಸ್ಡ್-ಸೋರ್ಸ್ ಘಟಕಗಳಲ್ಲಿನ ದೋಷಗಳಿಂದಾಗಿ ಈ ಸಮಸ್ಯೆ ಸಂಭವಿಸಿದೆ. ಸೈಬರ್ ಖದೀಮರು ಈ ನ್ಯೂನತೆಗಳಿಂದಾಗಿ ಡೇಟಾ ಕಳ್ಳತನ, ವೈಯಕ್ತಿಕ ಮಾಹಿತಿ ಮತ್ತು ಹಣ ವಂಚಸಿಬಹುದು. ಅಂತಹ ಸಾಧನಗಳನ್ನು ಆದಷ್ಟು ಬೇಗ ನವೀಕರಿಸಲು ಎಂದು ಸಲಹೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ