ಬೆಂಗಳೂರಲ್ಲಿ ಮಿತಿಮೀರಿದ ಪುಡಿರೌಡಿಗಳ ಹಾವಳಿ
ಎಂಎಲ್ಎ ಲೇಔಟ್ನಲ್ಲೇ ಯಾರಿಗೂ ಇಲ್ಲ ಸೇಫ್ಟಿ
ಸೆಕ್ಯೂರಿಟಿ ಗಾರ್ಡ್ಗೆ ಚಾಕುವಿನಿಂದ ತೀವ್ರ ಹಲ್ಲೆ..!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪುಡಿರೌಡಿಗಳ ಹಾವಳಿ ಮಿತಿಮೀರಿದೆ. ಕಳ್ಳರ ಹಾವಳಿ ತಡೆಗೆ ಸೆಕ್ಯೂರಿಟಿಗಳನ್ನ ನೇಮಕ ಮಾಡಿದರೆ, ಅವರ ಜೀವಕ್ಕೂ ಯಾವುದೇ ಸೇಫ್ಟಿ ಇಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಎಂದು ಕೂತಿದ್ದರೂ ಪುಡಿರೌಡಿಗಳು ಬಂದು ಹಲ್ಲೆ ನಡೆಸುತ್ತಾರೆ. ಈ ರೀತಿಯ ಎಷ್ಟೋ ಕೇಸುಗಳು ಬೆಳಕಿಗೆ ಬಂದಿವೆ.
ಈಗ ಇಂಥದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ. ಪುಡಿರೌಡಿಯೋರ್ವ ಬಂದವನೇ ಏಕಾಏಕಿ ಸೆಕ್ಯೂರಿಟಿ ಗಾರ್ಡ್ ಆಲ್ಬರ್ಟ್ ಮೇಲೆ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಮುಖದ ಮೇಲೆ ಮಾರ್ಕ್ ಹಾಕಿ ಎಸ್ಕೇಪ್ ಆಗಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಮತ್ತೆಲ್ಲೂ ಅಲ್ಲ, ಬದಲಿಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮನೆ ಸಮೀಪವೇ.
ಯೆಸ್, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆರ್ಟಿ ನಗರದ MLA ಲೇಔಟ್ನಲ್ಲೇ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ಸೆಕ್ಯೂರಿಟಿ ಗಾರ್ಡ್ ಮುಖಕ್ಕೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆ ಸಂಬಂಧ ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.