newsfirstkannada.com

ಕ್ರಿಮಿನಲ್ಸ್​ ಹೆಡೆಮುರಿ ಕಟ್ಟಲು ಮುಂದಾದ ಮೋದಿ ಸರ್ಕಾರ; ಅಧಿವೇಶನದ ಮಹತ್ವದ ನಿರ್ಧಾರ

Share :

12-08-2023

  ಅಪರಾಧಗಳಿಗೆ ಕೈ ಹಾಕುವ ಕ್ರಿಮಿ‌ಗಳಿಗೆ ಎಚ್ಚರಿಕೆ!

  ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ ತಡೆಯಲು ಕ್ರಮ

  ದೇಶದ್ರೋಹ ಕಾನೂನು ರದ್ದು ಮಾಡಿದ ಸರ್ಕಾರ

ಮಣಿಪುರ ಕಿಚ್ಚಿನಲ್ಲೇ ಮುಳುಗಿ ಹೋಗಿದ್ದ ಮುಂಗಾರು ಅಧಿವೇಶನ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ. ಬ್ರಿಟೀಷರು ಮಾಡಿದ್ದ ದೇಶದ ಕಾನೂನು ವ್ಯವಸ್ಥೆಗಳಿಗೆ ಮಹತ್ವದ ತಿರುವು ಸಿಕ್ಕಿದೆ. ಶತಮಾನಗಳಷ್ಟು ಹಳೆಯದಾದ ಆಂಗ್ಲರ ಕಾಲದ ಕಾನೂನು ಕಟ್ಟಳೆಗಳಿಗೆ ಮೋದಿ ಸರ್ಕಾರ ಅಂತ್ಯ ಹಾಡಿದೆ.

ಭಾರತದ ಕಾನೂನು ಸುವ್ಯವಸ್ಥೆಗಳಿಗೆ ಹೊಸ ಸ್ಪರ್ಶ ನೀಡುವ ಮೂಲಕ ಅಪರಾಧ ಕೃತ್ಯಕ್ಕೆ ಕೈ ಹಾಕುವ ಕ್ರಿಮಿನಲ್‌ಗಳಿಗೆ ಕೇಂದ್ರ ಖಡಕ್ ಸಂದೇಶ ರವಾನಿಸಿದೆ. ಬ್ರಿಟೀಷರು ಭಾರತದಿಂದ ತೊಲಗಿ 76 ವರ್ಷಗಳೇ ಕಳೆದು ಹೋಗಿದೆ. ಆದರೂ ಆಂಗ್ಲರು ಹಾಕಿದ್ದ ಆಲದ ಮರದ ರೆಂಬೆಗಳಿಗೆ ಭಾರತ ಜೋತು ಬಿದ್ದಿತ್ತು. ದೇಶದ ಅದೆಷ್ಟೋ ಕಾನೂನು ವ್ಯವಸ್ಥೆ ಸುಮಾರು 150 ವರ್ಷಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನೇ ಪಾಲಿಸಿಕೊಂಡು ಬಂದಿತ್ತು. ಇದೀಗ ದೇಶದ ಕ್ರಿಮಿನಲ್ ಕಾನೂನುಗಳಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಮಾರ್ಪಾಡು ಮಾಡಿದೆ.

ಸಂಸತ್‌ ಅಧಿವೇಶನದ ಅಂತ್ಯದಲ್ಲಿ ಮಹತ್ವದ ನಿರ್ಧಾರ
ದೇಶದ ಕ್ರಿಮಿನಲ್ ಕಾನೂನಿಗೆ ಕೇಂದ್ರ ಸರ್ಕಾರ ತಿದ್ದುಪಡಿ

ಇವತ್ತಿಗೆ 17ನೇ ಲೋಕಸಭೆಯ 12ನೇ ಅಧಿವೇಶನ ಮುಕ್ತಾಯವಾಗಿದೆ. ಬರೀ ಮಣಿಪುರದ ಕಿಚ್ಚು, ಕೋಲಾಹಲಕ್ಕೆ ಸಾಕ್ಷಿಯಾಗಿದ್ದ ಕೆಳಮನೆಯಲ್ಲಿ ಕೊನೆಯ ದಿನದಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಮಸೂದೆಗಳನ್ನ ಮಂಡಿಸಿದ್ದಾರೆ. ಭಾರತದ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಸಮಗ್ರವಾಗಿ ಪರಿಷ್ಕರಿಸುವ ಉದ್ದೇಶದಿಂದ ಮೂರು ಹೊಸ ಮಸೂದೆಗಳನ್ನ ಕೇಂದ್ರ ಗೃಹಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಮೂರು ಕ್ರಿಮಿನಲ್ ಕಾನೂನುಗಳಿಗೆ ಮಹತ್ವದ ತಿದ್ದುಪಡಿ ಮಾಡಿ ಕೆಳಮನೆಯಲ್ಲಿ ಹೊಸ ಮಸೂದೆಗಳನ್ನ ಮಂಡನೆ ಮಾಡಿದ್ದಾರೆ.

1860ರಲ್ಲಿ ಜಾರಿಯಾಗಿದ್ದ 160 ವರ್ಷಗಳಿಗೂ ಹೆಚ್ಚು ಕಾಲ ದೇಶದ ಅಪರಾಧ ನ್ಯಾಯ ವ್ಯವಸ್ಥೆಯ ಮೂಲವಾಗಿದ್ದ ಐಪಿಸಿ ಅಂದ್ರೆ ಇಂಡಿಯನ್ ಪೀನಲ್ ಕೋಡ್‌ಗೆ ತಿದ್ದುಪಡಿ ಮಾಡಲಾಗಿದೆ. ಇದೀಗ ಭಾರತೀಯ ನ್ಯಾಯ ಸಂಹಿತಾ ಮಸೂದೆಯಾಗಿ ಬದಲಾಯಿಸಲಾಗಿದೆ. 1973ರಲ್ಲಿ ಜಾರಿಯಾಗಿದ್ದ ಸಿಆರ್‌ಪಿಸಿ ಅಂದ್ರೆ ಕ್ರಿಮಿನಲ್ ಪ್ರೊಸಿಜರ್ ಕೋಡ್‌ಗೂ ತಿದ್ದುಪಡಿ ತರಲಾಗಿದೆ. ಇದೀಗ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ ಅಂತಾ ಬದಲಾಯಿಸಿ ಕೇಂದ್ರ ಸರ್ಕಾರದ ಲೋಕಸಭೆಯಲ್ಲಿ ಬಿಲ್ ಮಂಡಿಸಿದೆ.

ಇನ್ನೂ, 1872ರಲ್ಲಿ ಜಾರಿಯಾಗಿದ್ದ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್‌ ಅನ್ನು ಭಾರತೀಯ ಸಾಕ್ಷ್ಯ ಮಸೂದೆ ಅಂತಾ ಪರಿಷ್ಕರಣೆ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಇನ್ನೂ ಈ ಕಾನೂನುಗಳ ಬದಲಾವಣೆ ಕೇವಲ ಶಿಕ್ಷೆ ನೀಡುವ ಗುರಿಯಲ್ಲ. ಬದಲಿಗೆ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳನ್ನ ಪರಿಹರಿಸಲು ಈ ಪರಿಷ್ಕೃತ ಮಸೂದೆ ಮಂಡನೆಯ ಪ್ರಮುಖ ಉದ್ದೇಶ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಮೂಲಕ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ವಿಶೇಷ ಕಾಳಜಿ ತೋರಿಸಲಾಗಿದೆ. ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಬಗೆಗಿನ ಚಿಂತನೆಯಾಗಿದೆ. ಪೊಲೀಸರ ಅಧಿಕಾರ ದುರುಪಯೋಗ ತಡೆಯೋದಾಗಿದೆ. ಇದರ ಅಡಿಯಲ್ಲಿ ರಾಜದ್ರೋಹ ಕಾಯ್ದೆಯನ್ನ ತೆಗೆಯುತ್ತಿದ್ದೇವೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಗುಂಪು ಗಲಭೆಯನ್ನ ತಡೆಯೋದಕ್ಕೆ ಕ್ರಮ ಕೈಗೊಂಡಿದ್ದೇವೆ.

ದೇಶದ್ರೋಹ ಕಾನೂನು ರದ್ದು ಮಾಡಲು ನಿರ್ಧಾರ

ಭಾರೀ ವಿವಾದಕ್ಕೆ, ಚರ್ಚೆಗೆ ಗ್ರಾಸವಾಗಿದ್ದ ದೇಶದ್ರೋಹ ಕಾನೂನನ್ನು ರದ್ದು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬ್ರಿಟಿಷ್ ಕಾಲದ ದೇಶದ್ರೋಹದ ಕಾಯ್ದೆಯಲ್ಲಿ ಐಪಿಸಿ ಸೆಕ್ಷನ್ 124(a) ಅಡಿ ಅಪರಾಧಗಳಿಗೆ ಶಿಕ್ಷೆ ವಿಧಿಸಲಾಗುತ್ತಿತ್ತು. ಇದೀಗ ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 150 ಸೇರ್ಪಡೆ ಮಾಡಲಾಗುತ್ತಿದೆ. ಈ ಪ್ರಕಾರ ದೇಶದ ಸಾರ್ವಭೌಮತ್ವ, ಐಕ್ಯತೆ, ಸಮಗ್ರತೆಗೆ ಧಕ್ಕೆ ತಂದರೆ, ಸೆಕ್ಷನ್ 150ರ ಅಡಿ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಒಟ್ಟಾರೆ, ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಇಷ್ಟು ದಿನ ಬ್ರಿಟಿಷರು ಮಾಡಿದ್ದ ಕಾನೂನಿನಂತೆ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಭಾರತದ ಸ್ವಾತಂತ್ರ್ಯ ಮಹೋತ್ಸವದ ಅಮೃತ ಘಳಿಗೆಯಲ್ಲಿ 3 ಕಾನೂನುಗಳನ್ನ ಪರಿಷ್ಕರಣೆ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಹೊಸ ಯುಗ ಆರಂಭವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ರಿಮಿನಲ್ಸ್​ ಹೆಡೆಮುರಿ ಕಟ್ಟಲು ಮುಂದಾದ ಮೋದಿ ಸರ್ಕಾರ; ಅಧಿವೇಶನದ ಮಹತ್ವದ ನಿರ್ಧಾರ

https://newsfirstlive.com/wp-content/uploads/2023/08/amith-sha-1.jpg

Load More