newsfirstkannada.com

ಉಕ್ಕಿನ ಕೋಟೆಯಾಗಿ ಬದಲಾದ ದೆಹಲಿ; G20 ಶೃಂಗಸಭೆಗೆ ಸಜ್ಜಾದ ಟಾಪ್‌ 10 ಫೋಟೋ ಇಲ್ಲಿವೆ ನೋಡಿ

Share :

03-09-2023

  G20 ಶೃಂಗಸಭೆಗಾಗಿ 1,30,000 ಭದ್ರತಾ ಸಿಬ್ಬಂದಿಗಳ ನಿಯೋಜನೆ

  ಬರೋಬ್ಬರಿ 18 ಕೋಟಿ ವೆಚ್ಚದಲ್ಲಿ 20 ಬುಲೆಟ್ ಪ್ರೂಫ್ ಕಾರುಗಳು

  ವಾರಕ್ಕೂ ಮೊದಲೇ ಭದ್ರತಾ ಪಡೆಗಳಿಂದ ರಕ್ಷಣಾ ತಾಲೀಮು ಆರಂಭ

ನವದೆಹಲಿ: ಇಡೀ ಜಗತ್ತಿನ ಗಮನ ಸೆಳೆದಿರುವ G20 ಶೃಂಗಸಭೆಗೆ ರಾಷ್ಟ್ರ ರಾಜಧಾನಿ ನವದೆಹಲಿ ಸಜ್ಜಾಗಿ ನಿಂತಿದೆ. ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ G20 ಶೃಂಗಸಭೆ ನಡೆಯಲಿದೆ. ದೆಹಲಿಗೆ ವಿವಿಧ ರಾಷ್ಟ್ರದ ಗಣ್ಯರು ಹಾಗೂ ಪ್ರತಿನಿಧಿಗಳು ಮತ್ತು G20 ಆಹ್ವಾನಿತರು ಆಗಮಿಸುತ್ತಿದ್ದಾರೆ. G20 ಶೃಂಗಸಭೆಯು ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಭಾರತ್ ಮಂಟಪದಲ್ಲಿ ಪ್ರಾರಂಭವಾಗುತ್ತದೆ.

ಈ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್, ಕೆನಡಾದ ಪಿಎಂ ಜಸ್ಟಿನ್ ಟ್ರುಡೊ, ಜಪಾನ್ ಪಿಎಂ ಫ್ಯೂಮಿಯೊ ಕಿಶಿಡಾ ಮತ್ತು ಸೌದಿ ಅರೇಬಿಯಾದ ಕಿಂಗ್ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ G20 ಶೃಂಗಸಭೆಯ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಇದರ ಜೊತೆಗೆ ದೆಹಲಿ ಸರ್ಕಾರವು ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. G20 ಶೃಂಗಸಭೆಗೆ ಬರುವ ಗಣ್ಯರಿಗೆ ಅವರ ಹೆಜ್ಜೆ ಹೆಜ್ಜೆಗೂ ಪೊಲೀಸ್​ ಅಧಿಕಾರಿಗಳು ಸರ್ಪಗಾವಲು ಹಾಕಲಾಗಿದೆ. ಇದಕ್ಕಾಗಿ 130,000 ಭದ್ರತಾ ಸಿಬ್ಬಂದಿಗಳು ಕಮಾಂಡೋಗಳನ್ನು ನಿಯೋಜಿಸಲಾಗಿದೆ.

G20 ಶೃಂಗಸಭೆಯ ಭದ್ರತಾ ವ್ಯವಸ್ಥೆಯ ವಿವರಗಳು ಇಲ್ಲಿವೆ

G20 ಶೃಂಗಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ 80,000 ದೆಹಲಿ ಪೊಲೀಸರು ಸೇರಿದಂತೆ ಸುಮಾರು 130,000 ಭದ್ರತಾ ಸಿಬ್ಬಂದಿಗಳು ರಾಷ್ಟ್ರ ರಾಜಧಾನಿಯನ್ನು ರಕ್ಷಣೆ ಮಾಡಲಿದ್ದಾರೆ. ಹೀಗಾಗಿ ಸಭೆಗೆ ಒಂದು ವಾರದ ಮುನ್ನವೇ ಭದ್ರತಾ ಪಡೆಗಳು, ಪೊಲೀಸ್​ ಅಧಿಕಾರಿಗಳು ಹಾಗೂ ಕಮಾಂಡರ್ಸ್​ ರಿಹರ್ಸಲ್​ ಮಾಡುತ್ತಿದ್ದಾರೆ.

G20 ಶೃಂಗಸಭೆಯಲ್ಲಿ ಸುಮಾರು 45,000 ದೆಹಲಿ ಪೊಲೀಸರು ಮತ್ತು ಕೇಂದ್ರ ಪಡೆಗಳ ಸಿಬ್ಬಂದಿಗಳು ಇರಲಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಪೊಲೀಸ್​ ಅಧಿಕಾರಿಗಳು ಖಾಕಿಯನ್ನು ಧರಿಸುವುದಿಲ್ಲ, ಆದರೆ ನೀಲಿ ಬಣ್ಣದ ವಸ್ತ್ರವನ್ನು ಧರಿಸಿರುತ್ತಾರೆ. 45,000 ಮಂದಿಯ ಪೈಕಿ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಸ್ಥಳದಲ್ಲಿ ಕಮಾಂಡೋಗಳು ಭದ್ರತಾ ಅಧಿಕಾರಿಗಳಂತೆ ಕಾರ್ಯನಿರ್ವಹಿಸುತ್ತಾರೆ. ಇದರ ಮೂಲಕ ಭಾರತಕ್ಕೆ ಬಂದ ಅತಿಥಿಗಳನ್ನು ರಕ್ಷಿಸಲು ಸಹಾಯ ಮಾಡುತ್ತಾರೆ.

ಭಾರತೀಯ ವಾಯುಪಡೆಯು ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸಮಗ್ರ ಏರೋಸ್ಪೇಸ್ ರಕ್ಷಣೆಗಾಗಿ ಸಮಗ್ರ ಕ್ರಮಗಳನ್ನು ನಿಯೋಜಿಸುತ್ತದೆ. ಹೀಗಾಗಿ ಎಲ್ಲ ರೀತಿಯಲ್ಲೂ ತಯಾರಿ ನಡೆಸುತ್ತಿದೆ.

ಭಾರತೀಯ ಸೇನೆಯು ದೆಹಲಿ ಪೊಲೀಸ್ ಮತ್ತು ದೊಡ್ಡ ಅರೆಸೇನಾ ಪಡೆಗಳೊಂದಿಗೆ ಡ್ರೋನ್ ವ್ಯವಸ್ಥೆಗಳನ್ನು ನಿಯೋಜಿಸುತ್ತದೆ. ಇದರ ಜತೆಗೆ ಸುಮಾರು 400 ಅಗ್ನಿಶಾಮಕ ಸಿಬ್ಬಂದಿ ಕೂಡ ಕಾರ್ಯ ನಿರ್ವಹಿಸುತ್ತಾರೆ.

ಬೇರೆ ಬೇರೆ ರಾಷ್ಟ್ರದಿಂದ ಬರುವ ಗಣ್ಯರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋಗಲು ದೆಹಲಿ ಸರ್ಕಾರವು ಸುಮಾರು 18 ಕೋಟಿ ವೆಚ್ಚದಲ್ಲಿ 20 ಬುಲೆಟ್ ಪ್ರೂಫ್ ಲಿಮೋಸಿನ್‌ಗಳನ್ನು ಗುತ್ತಿಗೆಗೆ ನೀಡಿದೆ.

ವಾರಾಂತ್ಯದ ಶೃಂಗಸಭೆಯಲ್ಲಿ ಅಂದರೆ ಸೆಪ್ಟೆಂಬರ್ 10ರಂದು ನವದೆಹಲಿಯ ಗಡಿಗಳಲ್ಲಿ ಸರಿಯಾದ ಕ್ರಮದಲ್ಲಿ ವಿಶೇಷವಾಗಿ ಪೊಲೀಸ್​​ ಕಾವಲನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ ನಗರಕ್ಕೆ ಬೇರೆ ಕಡೆಯಿಂದ ಬರುವ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ಶೃಂಗಸಭೆಯ ಸ್ಥಳದಲ್ಲಿ ಅಲ್ಲಲ್ಲಿ ಭದ್ರತಾ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗುತ್ತಿದೆ. ಬಹು ವಿಸ್ತಾರವಾದ ಮತ್ತು ನವೀಕರಿಸಿದ ಪ್ರಗತಿ ಮೈದಾನವನ್ನು ರಚಿಸಲಾಗಿದೆ. US ಅಧ್ಯಕ್ಷ ಜೋ ಬಿಡೆನ್ ಉಳಿಯುವ ITC ಮೌರ್ಯ ಹೋಟೆಲ್‌ನಂತಹ ಪ್ರಮುಖ ಹೋಟೆಲ್‌ಗಳಲ್ಲಿ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಮುಖ್ಯವಾಗಿ AI ಸಂಶೋಧನಾ ಸಂಸ್ಥೆಯು ದೆಹಲಿಯ ಗಡಿಗಳನ್ನು ಮೇಲ್ವಿಚಾರಣೆ ಮಾಡುವ ಎಲ್ಲಾ CCTV ಗಳಲ್ಲಿ ಸಾಫ್ಟ್‌ವೇರ್ ಅನ್ನು ಸ್ಥಾಪಿಸಿದೆ. ಇದು ಎಲ್ಲರ ಚಲನವಲನ ಸೆರೆ ಹಿಡಿಯುತ್ತದೆ. ಮತ್ತು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನು ತಡೆಯಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

ಇನ್ನು, G20 ಶೃಂಗಸಭೆಗೆ ನಡೆಯುದಕ್ಕೆ ಒಂದು ವಾರ ಬಾಕಿ ಇದ್ದು. ಇದರ ಮಧ್ಯೆ ನವದೆಹಲಿಯ ರಸ್ತೆ ಗೋಡೆಗಳ ಮೇಲೆ ಚಿತ್ರ ಚಿತ್ತಾರಗಳು ಮೂಡಿವೆ. ಈ ಸಭೆಗೆ ಬರುವಂತಹ ಅಥಿತಿಗಳ ಮನಸ್ಸಿಗೆ ಖುಷಿಯಾಗಿರಲೆಂದು ಈ ರೀತಿಯ ನವಿಲಿನ ಕಲರ್​​ ಕಲರ್​ ಚಿತ್ರಗಳನ್ನು ಬಿಡಿಸಿದ್ದಾರೆ.

ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಜರ್ಮನಿಯ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಈ ಸಭೆಯಲ್ಲಿ ವಿಶ್ವಸಂಸ್ಥೆ, ಅಂತರಾಷ್ಟ್ರೀಯ ಹಣಕಾಸು ನಿಧಿ, ವಿಶ್ವಬ್ಯಾಂಕ್, ವಿಶ್ವ ವ್ಯಾಪಾರ ಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಸಹ ಉಪಸ್ಥಿತರಿರುವರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಕ್ಕಿನ ಕೋಟೆಯಾಗಿ ಬದಲಾದ ದೆಹಲಿ; G20 ಶೃಂಗಸಭೆಗೆ ಸಜ್ಜಾದ ಟಾಪ್‌ 10 ಫೋಟೋ ಇಲ್ಲಿವೆ ನೋಡಿ

https://newsfirstlive.com/wp-content/uploads/2023/09/pm-modi.jpg

Load More