newsfirstkannada.com

ಹೇಗಿದೆ ನೋಡಿ ಉಚಿತ ಪ್ರಯಾಣದ ಶಕ್ತಿ ಟಿಕೆಟ್‌; ಮುಖ್ಯಮಂತ್ರಿಯಿಂದ ಮೊದಲ ಟಿಕೆಟ್ ಪಡೆಯೋ ಮಹಿಳೆ ಯಾರು?

Share :

Published June 11, 2023 at 4:37am

Update June 11, 2023 at 4:57am

    ಮಹಿಳೆಯರ ಫ್ರೀ ಬಸ್‌ ಪ್ರಯಾಣಕ್ಕೆ ಕ್ಷಣಗಣನೆ

    ಮೊದಲ ಫ್ರೀ ಶಕ್ತಿ ಟಿಕೆಟ್ ಯಾರಿಗೆ ಗೊತ್ತಾ?

    KSRTC, BMTC ಬಸ್‌ಗಳಲ್ಲಿ ಬೇರೆ ಬೇರೆ ಟಿಕೆಟ್

ಬೆಂಗಳೂರು: ರಾಜ್ಯದ ಮಹಿಳೆಯರು ಉಚಿತ ಬಸ್‌ ಸಂಚಾರ ಮಾಡುವ ಶಕ್ತಿ ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಫ್ರೀ ಶಕ್ತಿ ಯೋಜನೆಯ ಟಿಕೆಟ್ ಕೂಡ ಈಗ ಬಿಡುಗಡೆಯಾಗಿದೆ. KSRTC, BMTC ಬಸ್‌ಗಳಲ್ಲಿ ಉಚಿತವಾಗಿ ಸಂಚಾರ ಮಾಡುವ ಮಹಿಳೆಯರಿಗೆ ಈ ಟಿಕೆಟ್ ನೀಡಲಾಗುತ್ತಿದೆ.

KSRTC ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳಾ ಉಚಿತ ಟಿಕೆಟ್ ಎಂದು ಮುದ್ರಿಸಲಾಗಿದ್ದು, ಕಂಡಕ್ಟರ್ ಮಹಿಳೆ ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಾರೆ ಅನ್ನೋದನ್ನ ಬರೆಯುತ್ತಾರೆ. BMTC ಬಸ್‌ಗಳಲ್ಲಿ ಟಿಕೆಟ್‌ಗಳ ಮೇಲೆ ಮಹಿಳೆಯರಿಗೆ ಉಚಿತ ಅನ್ನೋ ಮುದ್ರೆ ಒತ್ತಲಾಗಿದೆ.

ಇಂದು ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮರಿಗೆ ಈ ಯೋಜನೆಯ ಮೊದಲ ಉಚಿತ ಟಿಕೆಟ್ ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯರಿಂದ ಉಚಿತ ಟಿಕೆಟ್ ಪಡೆಯಲಿರುವ ಮೊದಲ ಮಹಿಳಾ ವಂದಿತಾ ಶರ್ಮಾ ಅವರಾಗಲಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಮೊದಲ ಬಿಎಂಟಿಸಿ ಬಸ್ ಟಿಕೆಟ್ ಪಡೆಯಲಿದ್ದಾರೆ.

ಇನ್ನು ವಿಧಾನಸೌಧದ ಮುಂಭಾಗ ಶಕ್ತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಲಿದ್ದಾರೆ. ಶಕ್ತಿ ಯೋಜನೆಯ ಲೋಗೋ ಬಿಡುಗಡೆ ಮಾಡುವ ಸರ್ಕಾರ, ಶಕ್ತಿ ಯೋಜನೆಯ ಸ್ಮಾರ್ಟ್ ಕಾರ್ಡ್ ಮಾದರಿ ಬಿಡುಗಡೆ ಮಾಡಲಿದೆ. ಐವರು ಮಹಿಳೆಯರಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಕಾರ್ಡ್ ವಿತರಣೆ ಕೂಡ ಮಾಡಲಾಗ್ತಿದೆ. ಬಿಎಂಟಿಸಿ ಬಸ್‌ನಲ್ಲಿ ವಿಧಾನಸೌಧದಿಂದ ಮೆಜೆಸ್ಟಿಕ್‌ಗೆ ಸಿಎಂ, ಡಿಸಿಎಂ, ಸಚಿವರು, ಹಿರಿಯ ಅಧಿಕಾರಿಗಳು ಪ್ರಯಾಣ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹೇಗಿದೆ ನೋಡಿ ಉಚಿತ ಪ್ರಯಾಣದ ಶಕ್ತಿ ಟಿಕೆಟ್‌; ಮುಖ್ಯಮಂತ್ರಿಯಿಂದ ಮೊದಲ ಟಿಕೆಟ್ ಪಡೆಯೋ ಮಹಿಳೆ ಯಾರು?

https://newsfirstlive.com/wp-content/uploads/2023/06/Free-Ticket.jpg

Load More