ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ ಸೀಮಾ ಹೈದರ್
ಸೀಮಾ ಹೈದರ್ ಬಾಯಲ್ಲಿ ಭಾರತದ ಉದ್ಘೋಷ
76ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಸೀಮಾ
ಪಾಕ್ನಿಂದ ಭಾರತಕ್ಕೆ ಬಂದ ಸೀಮಾ ಹೈದರ್ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಮತ್ತು ತನ್ನ ಮುದ್ದಾದ ಮಕ್ಕಳ ಜೊತೆಗೆ ‘‘ಪಾಕಿಸ್ತಾನಕ್ಕೆ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್’’ ಎಂದು ಹೇಳಿದ್ದಾರೆ.
ಪಬ್ಜಿ ಪ್ರಿಯನಿಗಾಗಿ ಸೀಮಾ ಹೈದರ್ ಭಾರತಕ್ಕೆ ಬಂದ ವಿಚಾರ ಗೊತ್ತೇ ಇದೆ. ಸಚಿನ್ ಮೇಲಿನ ಪ್ರೀತಿಗಾಗಿ ಪಾಕಿಸ್ತಾನದಿಂದ ತನ್ನ ಮಕ್ಕಳನ್ನು ಕರೆದುಕೊಂಡು ಸೀಮಾ ಭಾರತಕ್ಕೆ ಬಂದಿದ್ದಾರೆ. ಆ ಬಳಿಕ ಸಚಿನ್ನನ್ನು ವಿವಾಹವಾಗಿದ್ದಾರೆ. ಆದರೆ ಪಾಕ್ನಿಂದ ಬಂದ ಸೀಮಾ ಬಗ್ಗೆ ಹಲವು ಅನುಮಾನಗಳು ಮೂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
सीमा हैदर ने लगाए पाकिस्तान मुर्दाबाद के नारे, लगाए हिंदुस्तान जिंदाबाद के नारे
Seema Haider | #SeemaHaider pic.twitter.com/CYsOk5HGxE
— Pratyush singh (@Pratyus08912874) August 14, 2023
ಸಿನಿಮಾದಲ್ಲಿ ನಟಿಸಿದಂತೆ ಆಕ್ಷೇಪ
ಮತ್ತೊಂದೆಡೆ ಸೀಮಾ ಹೈದರ್ಗೆ ಬಾಲಿವುಡ್ ಸಿನಿಮಾದಲ್ಲಿ ನಟಸುವ ಅವಕಾಶವು ಸಿಕ್ಕಿದೆ. ಗಡಿ ದಾಟಿ ಬಂದ ಸೀಮಾಳನ್ನು ಬಾಲಿವುಡ್ ನಿರ್ದೇಶಕ ಜಯಂತ್ ಸಿಂಗ್, ಭರತ್ ಸಿಂಗ್ ಅವರು ಭೇಟಿ ಮಾಡಿ, ತಮ್ಮ ಸಿನಿಮಾದಲ್ಲಿ ಅಭಿನಯಿಸುವಂತೆ ಕೇಳಿಕೊಂಡಿದ್ದರು. ಬಳಿಕ ಖುಷಿಯಲ್ಲಿ ನಿರ್ದೇಶಕರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿರುವ ಸೀಮಾ ಹೈದರ್ ಧನ್ಯವಾದ ತಿಳಿಸಿದ್ದರು. ಆದರೆ ಸೀಮಾ ಹೈದರ್ ಬಾಲಿವುಡ್ ಸಿನಿಮಾದಲ್ಲಿ ಆ್ಯಕ್ಟಿಂಗ್ ಮಾಡಬಾರದು ಎಂದು ರಾಜ್ ಠಾಕ್ರೆ ಪಕ್ಷದಿಂದ ಎಚ್ಚರಿಕೆ ಬಂದಿದೆ. ಈ ಕುರಿತು ಪ್ರಧಾನ ಕಾರ್ಯದರ್ಶಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷರು ಟ್ವೀಟ್ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ಚಲನಚಿತ್ರೋದ್ಯಮದಲ್ಲಿ ಪಾಕಿಸ್ತಾನಿ ಪ್ರಜೆಗೆ ಯಾವುದೇ ಸ್ಥಾನ ಸಿಗಬಾರದು ಎಂಬ ನಮ್ಮ ನಿಲುವಿನಲ್ಲಿ ನಾವು ದೃಢವಾಗಿದ್ದೇವೆ. ಸೀಮಾ ಹೈದರ್ ಪ್ರಸ್ತುತ ಭಾರತದಲ್ಲಿರುವ ಪಾಕಿಸ್ತಾನಿ ಮಹಿಳೆ. ಆಕೆ ಐಎಸ್‌ಐ ಏಜೆಂಟ್ ಎಂಬ ವರದಿಗಳೂ ಬಂದಿದ್ದವು. ಅದೇ ಸೀಮಾ ಹೈದರ್ ಅವರನ್ನು ನಮ್ಮ ಇಂಡಸ್ಟ್ರಿಯಲ್ಲಿನ ಕೆಲವರು ಅವರ ಖ್ಯಾತಿಗಾಗಿ ನಟಿಯಾಗಿ ಮಾಡುತ್ತಿದ್ದಾರೆ. ದೇಶದ್ರೋಹಿ ನಿರ್ಮಾಪಕರು ಏಕೆ ನಾಚಿಕೆಪಡುವುದಿಲ್ಲ? ಕೂಡಲೇ ನಾಟಕವನ್ನು ನಿಲ್ಲಿಸಬೇಕು ನಿಲ್ಲಿಸಿ, ಇಲ್ಲದಿದ್ದರೆ ಎಂಎನ್‌ಎಸ್ ಮುಷ್ಕರಕ್ಕೆ ಸಿದ್ಧರಾಗಿ ಎಂದು ಸಾರ್ವಜನಿಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅಮಿ ಖೋಪ್ಕರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ