newsfirstkannada.com

WATCH: ಆನ್‌ಲೈನ್‌ನಲ್ಲಿ ರೊಮ್ಯಾನ್ಸ್‌ ಮಾಡಿ ಸಿಕ್ಕಿಬಿದ್ದ ಸೀಮಾ, ಸಚಿನ್ ಜೋಡಿ; ವಿಡಿಯೋ ಫುಲ್ ವೈರಲ್!

Share :

04-09-2023

    ಪಬ್‌ಜಿ ಪ್ರಿಯಕರಿನಿಗಾಗಿ ಪಾಕಿಸ್ತಾನ ಬಿಟ್ಟು ಬಂದಿರುವ ಸೀಮಾ

    ಅರೆ.. ನೀವು ಕ್ಯಾಮೆರಾದ ಮುಂದೆ ಇದ್ದೀರಾ ಎಂದ ನ್ಯೂಸ್‌ ಆ್ಯಂಕರ್

    ಬಿಗ್‌ಬಾಸ್, ಕಪಿಲ್ ಶರ್ಮಾ ಶೋನಿಂದಲೂ ಸೀಮಾಗೆ ಭರ್ಜರಿ ಆಫರ್

ಪಬ್‌ಜಿ ಪ್ರಿಯಕರಿನಿಗಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದ ಸೀಮಾ ಹೈದರ್ ಪದೆ ಪದೇ ಸುದ್ದಿಯಾಗುತ್ತಲೇ ಇದ್ದಾರೆ. ಸಚಿನ್ ಜೊತೆ ಖುಷಿಯಾಗಿ ಕಾಲ ಕಳೆಯುತ್ತಿರೋ ಸೀಮಾ ದಿನಕಳೆದಂತೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಸಖತ್‌ ಡ್ಯಾನ್ಸ್‌, ರೀಲ್ಸ್ ಮಾಡೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಫ್ಯಾನ್ಸ್‌ಗಳನ್ನು ಸಂಪಾದಿಸಿಕೊಂಡಿದ್ದಾರೆ. ಸಚಿನ್, ಸೀಮಾ ಜೋಡಿಯ ಮತ್ತೊಂದು ವಿಡಿಯೋ ಇದೀಗ ವೈರಲ್ ಆಗಿದೆ.

ಪ್ರೀತಿಗಾಗಿ ದೇಶವನ್ನೇ ಬಿಟ್ಟು ಬಂದ ಸೀಮಾ ಹೈದರ್‌ಗೆ ಸಚಿನ್‌ ಮೇಲೆ ಸಿಕ್ಕಾಪಟ್ಟೆ ಲವ್‌ ಇದೆ. ಈ ಪ್ರೇಮ ಪುರಾಣ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇವರಿಬ್ಬರ ಪ್ರೀತಿ ಎಷ್ಟಿದೆ ಅಂದ್ರೆ ಆನ್‌ಸ್ಕ್ರೀನ್‌ನಲ್ಲೇ ರೊಮ್ಯಾನ್ಸ್‌ ಮಾಡಲು ಹೋಗಿ ಈಗ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಪಾಕ್​ನಿಂದ ಭಾರತಕ್ಕೆ ಬಂದ ಸೀಮಾ​ ಹೈದರ್‌ಗೆ ಒಂದಲ್ಲ ಎರಡು ಬಿಗ್​ ಆಫರ್​​; ಏನದು?

ಸೀಮಾ ಹೈದರ್ ಹಾಗೂ ಸಚಿನ್‌ ಮೀನಾ ಅವರನ್ನು ಹಲವಾರು ಸುದ್ದಿ ಮಾಧ್ಯಮಗಳು ಸಂದರ್ಶನ ಮಾಡಿವೆ. ಇತ್ತೀಚೆಗೆ ನಡೆಯುತ್ತಿದ್ದ ನೇರ ಸಂದರ್ಶನದಲ್ಲಿ ಸೀಮಾ, ಸಚಿನ್ ಜೋಡಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಒಟ್ಟಿಗೆ ಲೈವ್ ಕ್ಯಾಮೆರಾದಲ್ಲಿ ಇರುವಾಗಲೇ ಸಚಿನ್, ಸೀಮಾ ಹೈದರ್‌ಗೆ ಕಿಸ್‌ ಮಾಡಲು ಹೋಗಿದ್ದಾರೆ. ಇದನ್ನು ನೋಡಿದ ನ್ಯೂಸ್ ಆ್ಯಂಕರ್, ಅರೆ ಸಚಿನ್ ಜೀ.. ನೀವು ಕ್ಯಾಮೆರಾದ ಮುಂದೆ ಇದ್ದೀರಾ. ನೀವು ಮಾಡುತ್ತಿರುವುದನ್ನ ನೇರ ಪ್ರಸಾರದಲ್ಲಿ ತೋರಿಸಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. ತಕ್ಷಣವೇ ಸೀಮಾ ಹೈದರ್, ಸಚಿನ್ ಅವರನ್ನು ತಡೆದಿದ್ದಾರೆ. ಸೀಮಾ, ಸಚಿನ್ ಜೋಡಿಯ ಈ ರೊಮ್ಯಾನ್ಸ್‌ ವಿಡಿಯೋ ಇದೀಗ ವೈರಲ್ ಆಗಿದೆ.

ಇದೇ ಸಂದರ್ಶನದಲ್ಲಿ ಭಾಗಿಯಾಗಿದ್ದ ಸೀಮಾ ಹೈದರ್ ಪರ ವಕೀಲರು ಸಚಿನ್, ಸೀಮಾ ಜೋಡಿ ಎಷ್ಟು ಅನೋನ್ಯವಾಗಿದೆ ಅನ್ನೋದಕ್ಕೆ ಇದೇ ಸಾಕ್ಷಿ. ಕ್ಯಾಮೆರಾ ಮುಂದೆ ಅಥವಾ ಹಿಂದೆ ಅವರು ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಸೀಮಾ ಹೈದರ್ ಅವರನ್ನ ಟ್ರೋಲ್ ಮಾಡಿದ್ದಾರೆ. ಸಚಿನ್ ತುಂಬಾ ನಾಟಿಯಾಗಿದ್ದಾರೆ ಅಂತಾ ಕಾಲೆಳೆಯುತ್ತಿದ್ದಾರೆ.

ಸೀಮಾ, ಸಚಿನ್‌ಗೆ ಭರ್ಜರಿ ಆಫರ್‌ಗಳು

ಹೀಗೆ ಸೀಮಾ, ಸಚಿನ್ ಜೋಡಿ ಒಂದಲ್ಲ ಒಂದು ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ. ಇದರಿಂದ ಸೀಮಾ ಹೈದರ್ ಸಖತ್ ಫೇಮಸ್ ಆಗಿದ್ದು, ಟಿವಿ ಹಾಗೂ ಸಿನಿಮಾ ಕ್ಷೇತ್ರಗಳಿಂದ ಭರ್ಜರಿ ಆಫರ್‌ಗಲು ಬರುತ್ತಿವೆಯಂತೆ. ಇತ್ತೀಚೆಗೆ ಬಿಗ್‌ಬಾಸ್ ಹಾಗೂ ಕಪಿಲ್ ಶರ್ಮಾ ಶೋನಿಂದ ಆಫರ್ ಬಂದಿದೆ ಎಂದಿದ್ದ ಸೀಮಾ ಹೈದರ್ ಹೇಳಿದ್ದರು. ಪಾಕಿಸ್ತಾನದಿಂದ ಬಂದ ಸೀಮಾಗೆ ಇನ್ನೂ ಕಾನೂನಿನ ತೊಡಕುಗಳಿವೆ. ಹೀಗಾಗಿ ರಿಯಾಲಿಟಿ ಶೋಗಳಿಗೆ ಸದ್ಯಕ್ಕೆ ಹೋಗಲು ಸಾಧ್ಯವಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಆನ್‌ಲೈನ್‌ನಲ್ಲಿ ರೊಮ್ಯಾನ್ಸ್‌ ಮಾಡಿ ಸಿಕ್ಕಿಬಿದ್ದ ಸೀಮಾ, ಸಚಿನ್ ಜೋಡಿ; ವಿಡಿಯೋ ಫುಲ್ ವೈರಲ್!

https://newsfirstlive.com/wp-content/uploads/2023/09/Seema-Haider-1.jpg

Load More