ವಿಶ್ವಕಪ್ ತಂಡದಲ್ಲಿ ಯಾರಿಗೆ ಚಾನ್ಸ್?
ಇಂಪ್ರೆಸ್ ಮಾಡಿದ ಇಶಾನ್ ಕಿಶನ್ ಕಥೆ ಏನು?
ಕುಲ್ದೀಪ್ ಯಾದವ್ಗೆ ಚಾನ್ಸ್ ಸಿಗುತ್ತಾ?
ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ಸೆಲೆಕ್ಷನ್ ಸದ್ಯ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಯಾರನ್ನ ಸೆಲೆಕ್ಟ್ ಮಾಡಬೇಕು? ಯಾರನ್ನ ಬಿಡಬೇಕು ಅನ್ನೋದು ಬಿಡಿಸಲಾಗದ ಪ್ರಶ್ನೆಯಾಗಿದೆ. ಇರೋ ಸಮಸ್ಯೆಗೇ ಪರಿಹಾರ ಸಿಕ್ಕಿಲ್ಲ. ಇದೀಗ ಯಂಗ್ಸ್ಟರ್ಗಳ ಆಟ ಹೊಸ ಗೊಂದಲ ಸೃಷ್ಟಿಸಿದೆ. ಕ್ಯಾಪ್ಟನ್-ಕೋಚ್ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಏಕದಿನ ವಿಶ್ವಕಪ್ ಮಹಾಸಮರಕ್ಕೆ ಕೆಲವೇ ದಿನಗಳು ಬಾಕಿ. ವಿಶ್ವದ ಎಲ್ಲಾ ತಂಡಗಳ ಸಿದ್ಧತೆ ಪ್ರತಿಷ್ಟೆಯ ಕದನಕ್ಕೆ ಜೋರಾಗಿದೆ. ಒಂದೆಜ್ಜೆ ಮುಂದೆ ಹೋಗಿರುವ ಆಸ್ಟ್ರೇಲಿಯಾ ಸಂಭಾವ್ಯ ತಂಡವನ್ನೇ ಆಯ್ಕೆ ಮಾಡಿದೆ. ಆದ್ರೆ, ಟೀಮ್ ಇಂಡಿಯಾಗೆ ಸೆಲೆಕ್ಷನ್ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಕೋಚ್-ಕ್ಯಾಪ್ಟನ್ಗೆ ಹೆಚ್ಚಾಗ್ತಿದೆ ತಲೆಬಿಸಿ
ಕೆ.ಎಲ್.ರಾಹುಲ್, ಜಸ್ಪ್ರಿತ್ ಬೂಮ್ರಾ, ಶ್ರೇಯಸ್ ಅಯ್ಯರ್ ಇವರೆಲ್ಲರ ಫೈನಲ್ ಫಿಟ್ನೆಸ್ ರಿಪೋರ್ಟ್ಗಾಗಿ ಸೆಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಕಾದು ಕುಳಿತಿದೆ. ಈ ಮೂವರ ಲಭ್ಯತೆ, ಅಲಭ್ಯತೆಯ ಬಗ್ಗೆ ಪ್ರಶ್ನೆ ಇರೋವಾಗ್ಲೆ, ಯಂಗ್ಸ್ಟರ್ಸ್ ತಲೆ ನೋವನ್ನ ಇನ್ನಷ್ಟು ಹೆಚ್ಚು ಮಾಡಿದ್ದಾರೆ. ಇವರನ್ನ ಸೆಲೆಕ್ಟ್ ಮಾಡೋದಾ ಅಥವಾ ಡ್ರಾಪ್ ಮಾಡೋದಾ ಅನ್ನೋ ಪ್ರಶ್ನೆಗೆ ಕ್ಯಾಪ್ಟನ್-ಕೋಚ್ ಬಳಿ ಉತ್ತರವಿಲ್ಲ.
ಇಂಪ್ರೆಸ್ ಮಾಡಿದ ಇಶಾನ್ ಕಿಶನ್ ಕಥೆ ಏನು?
ಆರಂಭದಲ್ಲಿ ವಿಶ್ವಕಪ್ಗೆ ಮ್ಯಾನೇಜ್ಮೆಂಟ್ ಬ್ಲೂ ಪ್ರಿಂಟ್ ರೆಡಿ ಮಾಡಿದಾಗ ಇಶಾನ್ ಕಿಶನ್ ಸ್ಟ್ರಾಂಡ್ ಬೈ ಲಿಸ್ಟ್ನಲ್ಲಿದ್ರು. ಆದ್ರೆ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಇಂಪ್ರೆಸ್ಸೀವ್ ಪ್ರದರ್ಶನ ನೀಡಿದ ಮೇಲೆ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿದೆ. ಏಕದಿನ ಫಾರ್ಮೆಟ್ನಲ್ಲಿ ಸಾಲಿಡ್ ರೆಕಾರ್ಡ್ ಹೊಂದಿರುವ ಕಿಶನ್, ವಿಶ್ವಕಪ್ ತಂಡದ ಬಾಗಿಲು ಬಡಿಯುತ್ತಿದ್ದಾರೆ.
ಕುಲ್ದೀಪ್ ಯಾದವ್ಗೆ ಚಾನ್ಸ್ ಸಿಗುತ್ತಾ.?
ವಿಶ್ವಕಪ್ ತಂಡಕ್ಕೆ ಸ್ಪಿನ್ನರ್ಗಳ ಆಯ್ಕೆ ದೊಡ್ಡ ತಲೆ ನೋವಾಗಿದೆ. ಆಲ್ರೌಂಡರ್ ರವೀಂದ್ರ ಜಡೇಜಾಗೆ ಒಂದು ಸ್ಲಾಟ್ ಫಿಕ್ಸ್. ಇನ್ನುಳಿದ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಯುಜುವೇಂದ್ರ ಚಹಲ್, ಅಕ್ಷರ್ ಪಟೇಲ್ ಜೊತೆಗೆ ಕುಲ್ದೀಪ್ ಯಾದವ್ ಕೂಡ ರೇಸ್ಗೆ ಎಂಟ್ರಿ ಕೊಟ್ಟಿದ್ದಾರೆ. ವಿಂಡೀಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿರೋ ಕುಲ್ದೀಪ್ ಸ್ಥಾನ ಸಿಗುತ್ತಾ ಅನ್ನೋದು ಸದ್ಯದ ಪ್ರಶ್ನೆಯಾಗಿದೆ.
ರೇಸ್ಗೆ ಎಂಟ್ರಿ ಕೊಟ್ಟ ತಿಲಕ್ ವರ್ಮಾ
ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಬೊಂಬಾಟ್ ಪ್ರದರ್ಶನ ನೀಡಿರುವ ತಿಲಕ್ ವರ್ಮಾ ಕೂಡ ಆಯ್ಕೆಯ ರೇಸ್ಗಿಳಿದಿದ್ದಾರೆ. ಡೆಬ್ಯೂ ಸಿರೀಸ್ನಲ್ಲೇ ತಿಲಕ್ ಅನುಭವಿಗಳೂ ನಾಚುವಂತಹ ಪರ್ಫಾಮೆನ್ಸ್ ನೀಡಿದ್ದಾರೆ. ಮಿಡಲ್ ಆರ್ಡರ್ಗೆ ಕಾಡ್ತಿರೋ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಕೊರತೆಯನ್ನ ನೀಗಿಸುವ ಸಾಮರ್ಥ್ಯ ತಿಲಕ್ಗಿರೋದ್ರಿಂದ ಚಾನ್ಸ್ ನೀಡ್ಬೇಕಾ? ಬೇಡ್ವಾ? ಎಂಬ ಪ್ರಶ್ನೆ ಕೋಚ್-ಕ್ಯಾಪ್ಟನ್ ರನ್ನ ಕಾಡ್ತಿದೆ.
ವೇಗಿ ಮುಖೇಶ್ ಕುಮಾರ್ಗೆ ಸ್ಥಾನ ಸಿಗುತ್ತಾ..?
ಟೀಮ್ ಇಂಡಿಯಾಗೆ ಸೆಲೆಕ್ಟ್ ಆದ ಮೊದಲ ಟೂರ್ನಲ್ಲೇ ಮೂರೂ ಫಾರ್ಮೆಟ್ಗೆ ಡೆಬ್ಯೂ ಮಾಡಿರೋ ಮುಖೇಶ್ ಕುಮಾರ್ ಕೂಡ ವಿಶ್ವಕಪ್ ಆಡೋ ಕನಸು ಕಾಣ್ತಿದ್ದಾರೆ. ಕೆರಿಬಿಯನ್ ನಾಡಲ್ಲಿ ನೀಡಿರುವ ಪರ್ಫಾಮೆನ್ಸ್ ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ರನ್ನೂ ಇಂಪ್ರೆಸ್ ಮಾಡಿದೆ. ಮುಖೇಶ್ಗೆ ಸ್ಥಾನ ನೀಡಿದ್ರೆ ಯಾರಿಗೆ ಕೊಕ್ ಕೊಡೋದು ಅನ್ನೋದೇ ಸದ್ಯದ ಪ್ರಶ್ನೆಯಾಗಿದೆ.
ಜಯದೇವ್ ಉನಾದ್ಕತ್ ಕೂಡ ರೇಸ್ನಲ್ಲಿ..!
ಕಮ್ಬ್ಯಾಕ್ ಕಿಂಗ್ ಜಯದೇವ್ ಉನಾದ್ಕತ್ ಕೂಡ ವಿಶ್ವಕಪ್ ಪ್ಲಾನ್ಗೆ ಎಂಟ್ರಿ ಕೊಟ್ಟಿದ್ದಾರೆ. ಎಡಗೈ ವೇಗಿ ಅನ್ನೋದು ಒಂದು ಅಡ್ವಾಂಟೇಜ್ ಆದ್ರೆ, ಡೊಮೆಸ್ಟಿಕ್ ಸರ್ಕ್ಯೂಟ್ನಲ್ಲಿ ಹೆಚ್ಚು ಪಂದ್ಯವನ್ನಾಡಿರುವ ಉನಾದ್ಕತ್ಗೆ ಪಿಚ್ ಹಾಗೂ ಪ್ಲೇಯಿಂಗ್ ಕಂಡೀಷನ್ಸ್ ಬಗ್ಗೆ ಪಕ್ಕಾ ಮಾಹಿತಿಯಿದೆ. ಇದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗೋದ್ರಲ್ಲಿ ಅನುಮಾನವೇ ಇಲ್ಲ..
ಇಷ್ಟು ದಿನ ಸೂರ್ಯ ಕುಮಾರ್ ಯಾದವ್ VS ಸಂಜು ಸ್ಯಾಮ್ಸನ್ ಯಾರಿಗೆ ಚಾನ್ಸ್ ನೀಡಬೇಕು ಅನ್ನೋ ಗೊಂದಲ ಮಾತ್ರವಿತ್ತು. ಇದೀಗ ಯಂಗ್ಸ್ಟರ್ಸ್ ಎಂಟ್ರಿ ಆಯ್ಕೆ ಸಮಸ್ಯೆಯನ್ನ ಮತ್ತಷ್ಟು ಹೆಚ್ಚಿಸಿದೆ. ಅಳೆದು ತೂಗಿ ಲೆಕ್ಕಾಚಾರ ಹಾಕಿ ಸೆಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಯಾರಿಗೆ ಮಣೆ ಹಾಕ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ವರದಿ: ವಸಂತ್ ಮಳವತ್ತಿ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್