newsfirstkannada.com

ಜೀವ ತೆಗೆಯೋ ಹಕ್ಕು ಯಾರಿಗೂ ಇಲ್ಲ.. ನಟ ದರ್ಶನ್​​ ಬಗ್ಗೆ ಹಿರಿಯ ನಟ ಸುಂದರ್​ ರಾಜ್​ ಬೇಸರ!

Share :

Published June 28, 2024 at 6:07pm

  ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣ

  ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಚಾಲೆಂಜಿಂಗ್​ ಸ್ಟಾರ್​​ ನಟ ದರ್ಶನ್​​​

  ಕೃತ್ಯದ ಬಗ್ಗೆ ಸ್ಯಾಂಡಲ್​ವುಡ್​​ ಹಿರಿಯ ನಟ ಸುಂದರ್ ರಾಜ್ ಬೇಸರ!

ಬೆಂಗಳೂರು: ಕೊಲೆ ಕೇಸ್​​ವೊಂದರಲ್ಲಿ ಚಾಲೆಂಜಿಂಗ್​ ಸ್ಟಾರ್ ದರ್ಶನ್​​ ಅವರು ಜೈಲು ಸೇರಿದ್ದಾರೆ. ನಟ ದರ್ಶನ್​​ ಜೈಲು ಸೇರಿದ ಬೆನ್ನಲ್ಲೇ ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿ ಮಾತಾಡುತ್ತಿದೆ. ಈ ಕೃತ್ಯದ ಬಗ್ಗೆ ಈಗ ಸ್ಯಾಂಡಲ್​ವುಡ್​ನ ಹಿರಿಯ ನಟ ಸುಂದರ್ ರಾಜ್ ಬೇಸರ ಹೊರಹಾಕಿದ್ದಾರೆ.

ಇವತ್ತಿನ ವಿದ್ಯಮಾನಗಳ ಬಗ್ಗೆ ಬಹಳ ನೋವಿದೆ. ಈ ರೀತಿ ಮಾಡಿಕೊಳ್ಳುವುದರಿಂದ ಯಾರಿಗೆ ತೊಂದರೆ? ಅನ್ನೋದರ ಕುರಿತು ಎಲ್ಲರು ಗಂಭೀರವಾಗಿ ಯೋಚನೆ ಮಾಡಬೇಕು. ಐದು ತಿಂಗಳ ಗರ್ಭಿಣಿಗೆ ಸಾಂತ್ವನ ಹೇಳಬಹುದು. ಆದರೆ, ಆ ಮಗುವಿಗೆ ತಂದೆ ವಾಪಸ್​ ಬರ್ತಾನಾ? ಎಂದು ಪ್ರಶ್ನೆ ಕೇಳಿದ್ರು ಸುಂದರ್​ ರಾಜ್​​.

ಯಾವತ್ತೂ ಕೋಪದ ಕೈಗೆ ಬುದ್ದಿ ಕೊಡಬಾರದು. ಇದುವರೆಗೂ ಈ ರೀತಿ ಘಟನೆಗಳು ನಮ್ಮ ಇಂಡಸ್ಟ್ರಿಯಲ್ಲಿ ನಡೆದಿಲ್ಲ. ಈ ಘಟನೆ ನಡೆದಿದ್ದು ದುರಾದೃಷ್ಟ. ಜೀವ ಕೊಡಲು ಆಗಲ್ಲ ಎಂದ ಮೇಲೆ ಜೀವ ತೆಗೆಯೋ ಹಕ್ಕು ಯಾರಿಗೂ ಇಲ್ಲ. ನಮ್ಮ ಸಿನಿಮಾದವ್ರು ಭಾಗಿಯಾಗಿದ್ದಾರೆ ಅನ್ನೋದು ನೋವು. ಪೊಲೀಸ್ರು ನ್ಯಾಯ ಕೊಡಿಸಲು ಹೋರಾಟ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ರೇಣುಕಾಸ್ವಾಮಿ ಕಳುಹಿಸಿದ್ದು ಎಷ್ಟು ಅಶ್ಲೀಲ ಮೆಸೇಜ್‌? 50, 100 ಅಲ್ಲವೇ ಅಲ್ಲ; ಸ್ಫೋಟಕ ಮಾಹಿತಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೀವ ತೆಗೆಯೋ ಹಕ್ಕು ಯಾರಿಗೂ ಇಲ್ಲ.. ನಟ ದರ್ಶನ್​​ ಬಗ್ಗೆ ಹಿರಿಯ ನಟ ಸುಂದರ್​ ರಾಜ್​ ಬೇಸರ!

https://newsfirstlive.com/wp-content/uploads/2024/06/Sundar-Raj-and-Darshan.jpg

Load More