newsfirstkannada.com

×

ಕುಮಾರಸ್ವಾಮಿ ಬಗ್ಗೆ ADGP ಚಂದ್ರಶೇಖರ್‌ ಕಿಡಿ; ಹಿರಿಯ ಅಂಕಣಕಾರ ಗಿರೀಶ್ ಲಿಂಗಣ್ಣ ತೀವ್ರ ಖಂಡನೆ

Share :

Published September 29, 2024 at 9:10pm

Update September 29, 2024 at 9:28pm

    IPS ಅಧಿಕಾರಿ ವಿರುದ್ಧ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಸಮರ

    ಕೆಸರು.. ಕೊಳಕು.. ಆರೋಪಿ.. ಆರೋಪಿಯೇ ಎಂಬ ಪತ್ರಬಾಣಕ್ಕೆ ಕಿಡಿ

    ಎಡಿಜಿಪಿ ಎಂ. ಚಂದ್ರಶೇಖರ್‌ ಪದ ಬಳಕೆಗೆ ಜೆಡಿಎಸ್ ಖಡಕ್ ಸವಾಲು

ಇದು ಕರ್ನಾಟಕದಲ್ಲಿ ಹಿಂದೆಂದೂ ನಡೆಯದಂತಹ ಜಟಾಪಟಿ. ಎಂದೂ ಕಂಡು ಕೇಳರಿಯದ ನೇರಾನೇರ ಯುದ್ಧ. ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಹೊತ್ತಿಸಿದ ಕಿಡಿಗೆ ಲೋಕಾಯುಕ್ತ ಎಸ್‌ಐಟಿ ಎಡಿಜಿಪಿ ಎಂ. ಚಂದ್ರಶೇಖರ್‌ ತುಪ್ಪ ಸುರಿದಿದ್ದಾರೆ. ಕೇಂದ್ರ ಸಚಿವರು ಹಾಗೂ ಪೊಲೀಸ್ ಅಧಿಕಾರಿ ನಡುವಿನ ಮಹಾಯುದ್ಧ ಕೇಂದ್ರ ಗೃಹ ಇಲಾಖೆಯನ್ನ ತಲುಪಿದೆ. ಜೊತೆಗೆ ದಳಪತಿಯನ್ನ ಮತ್ತೆ ನಿಗಿನಿಗಿ ಕೆಂಡವಾಗಿಸಿದೆ.

ಇದನ್ನೂ ಓದಿ: ಕುಮಾರಸ್ವಾಮಿಗೆ ಟಕ್ಕರ್ ಕೊಟ್ಟ ADGP; ಯಾರು ಈ ಐಪಿಎಸ್​ ಅಧಿಕಾರಿ ಚಂದ್ರಶೇಖರ್..? 

ಸೆಪ್ಟೆಂಬರ್ 27ರಂದು ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ಗಂಗೇನಹಳ್ಳಿ ಅಕ್ರಮ ಡಿನೋಟಿಫಿಕೇಷನ್‌ ಕೇಸ್‌ನಲ್ಲಿ ವಿಚಾರಣೆ ಎದುರಿಸಿ ಬಂದಿದ್ರು. ತಮ್ಮ ವಿಚಾರಣೆ ವೇಳೆ ಏನಾಯ್ತು ಅಂತ ವಿವರಿಸಿದ್ದರು. ಆಗ ಬಂದಿದ್ದೇ ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಎಂ. ಚಂದ್ರಶೇಖರ್ ಅವರ ಹೆಸರು. ಇವರು ಅಲ್ಲಿ ಆಸ್ತಿ ಮಾಡಿದ್ದಾರೆ. ಅಕ್ರಮವಾಗಿ ಅಪಾರ್ಟ್‌ಮೆಂಟ್ ಕಟ್ತಿದ್ದಾರೆ ಅಂತ ಐಪಿಎಸ್ ಅಧಿಕಾರಿ ವಿರುದ್ಧ ದಳಪತಿ ಭ್ರಷ್ಟಾಚಾರದ ಬಾಣ ಬಿಟ್ರು. ಜೊತೆಗೆ ಪ್ರಾಸಿಕ್ಯೂಷನ್ ವಿಚಾರ ಲೀಕ್ ಮಾಡಿರೋ ವಿಚಾರಕ್ಕೆ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಇದು ಇಲ್ಲಿಗೆ ಮುಗಿದೋಯ್ತು ಅಂತ ಎಲ್ರೂ ಭಾವಿಸಿದ್ರು. ಆಗ್ಲೇ ಬಂತು ನೋಡಿ ಚಂದ್ರಶೇಖರ್ ಅವರ ಹಂದಿ, ಕುಸ್ತಿ.. ಕೆಸರು.. ಕೊಳಕು.. ಆರೋಪಿ.. ಆರೋಪಿಯೇ ಎಂಬ ಪತ್ರಬಾಣ.

ಜಾರ್ಜ್ ಬರ್ನಾರ್ಡ್ ಷಾ ಅವರ ಬರವಣಿಗೆಯನ್ನ ಬಳಸಿ ಹೆಚ್‌ಡಿಕೆಯನ್ನ ಚಂದ್ರಶೇಖರ್ ಅತಿ ಕಠೋರವಾಗಿ ಛೇಡಿಸಿದ್ದಾರೆ. ಬಹುಶಃ ಒಬ್ಬ ಪೊಲೀಸ್ ಅಧಿಕಾರಿ ಕೇಂದ್ರ ಸಚಿವರಿಗೆ ಈ ಮಟ್ಟಿಗೆ ಟಾಂಗ್ ಕೊಟ್ಟಿರೋದು ಇದೇ ಮೊದಲು ಅನ್ಸುತ್ತೆ. ಇದನ್ನೆಲ್ಲಾ ನೋಡಿ ಕುಮಾರಸ್ವಾಮಿಯವ್ರು ನಿಗಿ ನಿಗಿ ಕೆಂಡವಾಗಿ ಬಿಟ್ಟಿದ್ದಾರೆ. ಅಕ್ರಮಗಳ ದಾಖಲೆ ಬಗ್ಗೆ ಸೀದಾ ಕೇಂದ್ರ ಗೃಹ ಇಲಾಖೆ ಗಮನಕ್ಕೆ ತಂದಿದ್ದಾರೆ. ಹೆಚ್​ಡಿಕೆ ಮನವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಅಂತ ತಿಳಿದು ಬಂದಿದೆ.  ‘

ಇದನ್ನೂ ಓದಿ: ಕುಮಾರಸ್ವಾಮಿ ಆರೋಪಕ್ಕೆ ಎಡಿಜಿಪಿ​ ಕೌಂಟರ್; ಗಂಗೇನಹಳ್ಳಿ ಕೇಸ್​ಗೆ ಹೊಸ ತಿರುವು..! 

ಹಿರಿಯ ಅಂಕಣಕಾರ ಗಿರೀಶ್ ಲಿಂಗಣ್ಣ ಖಂಡನೆ!

ಹಿರಿಯ ಅಂಕಣಕಾರರು, ಬರಹಗಾರರಾದ ಗಿರೀಶ್ ಲಿಂಗಣ್ಣ ಅವರು ಎಡಿಜಿಪಿ ಎಂ. ಚಂದ್ರಶೇಖರ್‌ ಪತ್ರದಲ್ಲಿ ಬಳಸಿರೋ ಪದ ಬಳಕೆಯನ್ನು ಖಂಡಿಸಿದ್ದಾರೆ. ಅಧಿಕೃತ ಸಂವಹನದಲ್ಲಿ ಕೇಂದ್ರ ಸಚಿವರೊಬ್ಬರನ್ನು ಹಿರಿಯ ಪೊಲೀಸ್ ಅಧಿಕಾರಿ ಹಂದಿಗೆ ಹೋಲಿಸಿದ್ದನ್ನು ಟೀಕಿಸಿದ್ದಾರೆ. ಕಾನೂನು ಪ್ರಕ್ರಿಯೆ ಏನೇ ಇದ್ದರೂ, ಅಧಿಕಾರದ ಹುದ್ದೆಯಲ್ಲಿ ಇರುವವರು ಇತರರ ಕುರಿತು ಮಾತನಾಡುವಾಗ ತಮ್ಮ ಭಾಷೆಯ ಕುರಿತು ಗಮನ ಹರಿಸಬೇಕು, ಆ ಮೂಲಕ ಸಾರ್ವಜನಿಕರ ನಂಬಿಕೆ ಮತ್ತು ಹುದ್ದೆಯ ಗೌರವ ಉಳಿಸಿಕೊಳ್ಳಬೇಕು ಎಂದು ಗಿರೀಶ್ ಲಿಂಗಣ್ಣ ಹೇಳಿದ್ದಾರೆ.

ADGPಗೆ ಜೆಡಿಎಸ್ ಖಡಕ್ ಸವಾಲು!

ADGP ಚಂದ್ರಶೇಖರ್ ಅವರ ಪದ ಬಳಕೆಗೆ ಜೆಡಿಎಸ್ ಪಕ್ಷ ಕೂಡ ಟಾಂಗ್ ಕೊಟ್ಟಿದೆ. ಸಾಮಾಜಿಕ ಜಾಲತಾಣ Xನಲ್ಲಿ ಟ್ವೀಟ್‌ ಮಾಡಿರುವ ಜೆಡಿಎಸ್, ಕಳ್ಳನ ಮನಸ್ಸು ಹುಳ್ಳಳ್ಳಗೆ ಎಂದಿದೆ. ಅಲ್ಲದೇ ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಅವರೇ ನಿಮ್ಮ ಮೇಲಿನ ಆರೋಪಗಳು ನಿಜವಲ್ಲವಾದರೇ, ಕಾನೂನಿನಡಿಯಲ್ಲಿ ಉತ್ತರ ನೀಡಬಹುದಿತ್ತು. ಅದನ್ನು ಬಿಟ್ಟು ನೀವೊಬ್ಬ ಐಪಿಎಸ್ ಅಧಿಕಾರಿ ಎಂಬುದನ್ನು ಮರೆತು, ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ವಿರುದ್ಧ ಹತಾಶೆ, ಸಿಟ್ಟು, ಆಕ್ರೋಶದಿಂದ ಕೀಳು ಮಟ್ಟದ, ಅವಹೇಳನಕಾರಿ ಪದಗಳನ್ನು ಬಳಸಿ ಉತ್ತರಿಸಿದ್ದೀರಿ.

ನಿಮ್ಮ ಅಕ್ರಮ, ಭ್ರಷ್ಟಾಚಾರಗಳನ್ಮು ದಾಖಲೆಗಳ ಸಮೇತ ಮಾಧ್ಯಮಗಳ ಮುಂದೆ ಬಯಲು ಮಾಡಿದ್ದು ಅಪರಾಧವೇ? ಅದಕ್ಕೆ ಕೇಂದ್ರ ಸಚಿವರ ಕುರಿತು ನೀವು ಕೀಳು ಮಟ್ಟದ ಪದ ಬಳಸಿರುವುದು ಅಕ್ಷಮ್ಯ. ನೀವೊಬ್ಬ ಐಪಿಎಸ್ ಅಧಿಕಾರಿಯಾಗಿರಲು ಅನರ್ಹ.

ಭೂ ವ್ಯವಹಾರವೊಂದರಲ್ಲಿ 20 ಕೋಟಿಗೆ ಬೇಡಿಕೆ ಇಟ್ಟಿದ್ದ ಕಡು ಭ್ರಷ್ಟ ಅಧಿಕಾರಿ ನೀವೇ ಅಲ್ಲವೇ? ಈ ಸಂಬಂಧ ನಿಮ್ಮ ವಿರುದ್ಧ ಇನ್ಸ್ ಪೆಕ್ಟರ್ ಒಬ್ಬರು ದೂರು ನೀಡಿದ್ದಾರೆ. ಬೆಂಗಳೂರಿನಲ್ಲಿ ನಿಮ್ಮ ಪತ್ನಿ ಹೆಸರಿನಲ್ಲಿ ರಾಜಕಾಲುವೆ ಮೇಲೆ ನಿರ್ಮಿಸುತ್ತಿರುವ ಬಹು ಮಹಡಿಯ ವಾಣಿಜ್ಯ ಕಟ್ಟಡವನ್ನು ಎಷ್ಟು ಕೋಟಿ ಲಂಚ ಪಡೆದು ಕಟ್ಟುತ್ತಿದ್ದೀರಿ ತಿಳಿಸುವಿರಾ? ಕೆರೆಯನ್ನು ಒತ್ತುವರಿ ಮಾಡಿಕೊಂಡಿರುವ ಅಕ್ರಮಗಳ ಬಗ್ಗೆಯೂ ತನಿಖೆ ನಡೆಯಬೇಕಲ್ಲವೇ?

ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿಯಾಗಿರುವ ಎಂ. ಚಂದ್ರಶೇಖರ್ ಓರ್ವ ಭ್ರಷ್ಟ ಅಧಿಕಾರಿ ಈತನ ವಿರುದ್ಧ ಹಲವು ದೂರುಗಳು ದಾಖಲಾಗಿದ್ದು ಆರೋಪ ಪಟ್ಟಿ ಕೂಡ ಸಲ್ಲಿಕೆಯಾಗಿವೆ. ಹಲವು ಅಪರಾಧ ಮಾಡಿರುವ ಇಂತಹ ಕಳಂಕಿತ ಅಧಿಕಾರಿಗಳಿಂದ ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ತನಿಖೆ ಅಸಾಧ್ಯ…ಮಾನ್ಯ ಗೃಹ ಸಚಿವ‌ ಡಾ.ಜಿ ಪರಮೇಶ್ವರ್ ಅವರೇ, ಕೇಂದ್ರ ಸಚಿವರಾದ ಹೆಚ್‌.ಡಿ ಕುಮಾರಸ್ವಾಮಿ ಅವರ ಬಗ್ಗೆ ಕೀಳು ಮಟ್ಟದ ಪದ ಬಳಸಿರುವ ಈ ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮ ಜರುಗಿಸಿ. ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಅವರ ಅಕ್ರಮಗಳ ಬಗ್ಗೆಯೂ ಸರ್ಕಾರ ಸೂಕ್ತ ತನಿಖೆ ನಡೆಸಬೇಕು. ಕೇಂದ್ರ ಗೃಹ ಸಚಿವಾಲಯ ಈ IPS ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಮಾರಸ್ವಾಮಿ ಬಗ್ಗೆ ADGP ಚಂದ್ರಶೇಖರ್‌ ಕಿಡಿ; ಹಿರಿಯ ಅಂಕಣಕಾರ ಗಿರೀಶ್ ಲಿಂಗಣ್ಣ ತೀವ್ರ ಖಂಡನೆ

https://newsfirstlive.com/wp-content/uploads/2024/09/HDK-IPS-Officer-And-Girish-linganna.jpg

Load More