newsfirstkannada.com

ಹಿರಿಯ ಆಟಗಾರರಿಗೆ ವಯಸ್ಸಾಯಿತು.. ಭವಿಷ್ಯದ ಟೀಮ್​ ಇಂಡಿಯಾದ ಪ್ಲೇಯರ್ಸ್​ ಯಾಱರು?

Share :

20-06-2023

    ಟೆಸ್ಟ್​ನಲ್ಲಿ ಸೋಲು, ಟ್ಯಾಲೆಂಟೆಡ್​ ಆಟಗಾರರಿಗೆ ಸಿಗುತ್ತಿದೆಯಾ ತರಬೇತಿ?

    ಸ್ಟಾರ್​ಗಳಿಗೆಲ್ಲ ವಯಸ್ಸಾಯಿತು, ಭವಿಷ್ಯದ ಪ್ಲೇಯರ್ಸ್​ಗಾಗಿ ಹುಡುಕಾಟ

    ಭವಿಷ್ಯದ ತಂಡ ರೂಪಿಸಲು ಬಿಸಿಸಿಐ ಪ್ಲಾನ್, ತಂಡದಲ್ಲಿ​ ಬದಲಾವಣೆ ಸಾಧ್ಯತೆ

ಟೀಮ್​ ಇಂಡಿಯಾದಲ್ಲಿ ಬದಲಾವಣೆ. ದಿನವೂ ಇದೇ ಸುದ್ದಿ ಸದ್ದು ಮಾಡ್ತಿದೆ. ಆದ್ರೆ, ಒಂದು ವೇಳೆ ಬದಲಾವಣೆಗೆ ಮುಂದಾದ್ರೆ, ಸೀನಿಯರ್​​​ಗಳನ್ನ ರಿಪ್ಲೇಸ್​ ಮಾಡೋ ಆಟಗಾರರು ಇದ್ದಾರಾ?. ಭವಿಷ್ಯದ ತಂಡ ರೂಪಿಸೋಕೆ ಬಿಸಿಸಿಐ ಪ್ಲಾನ್​ ಏನಿದೆ.? ಈ ಪ್ರಶ್ನೆಗೆ ಉತ್ತರವೇ ಇಲ್ಲ. ಯಾಕಂದ್ರೆ, ಬಿಸಿಸಿಐ ಬಾಸ್​​ಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಂಡೇ ಇಲ್ಲ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಸೋಲು ಟೀಮ್​ ಇಂಡಿಯಾವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಕೋಚ್​​ ರಾಹುಲ್​ ದ್ರಾವಿಡ್​​ -ಕ್ಯಾಪ್ಟನ್​​ ರೋಹಿತ್​ ಶರ್ಮಾರ ಸಾಮರ್ಥ್ಯದಿಂದ ಹಿಡಿದು, ಹಿರಿಯ ಆಟಗಾರರ ಅಗತ್ಯತೆ ತಂಡಕ್ಕೆ ಇದ್ಯಾ ಎಂಬ ಡಿಬೆಟ್​ಗಳು ನಡೀತಾ ಇವೆ. ಈಗಾಗಲೇ 10 ವರ್ಷದಿಂದ ಐಸಿಸಿ ಟ್ರೋಫಿ ಗೆದ್ದಿಲ್ಲ ಅನ್ನೋ ಕಳಪೆ ಸಾಧನೆಯಿಂದ ವಿಶ್ವದ ಶ್ರೀಮಂತ ಕ್ರಿಕೆಟ್​ ಸಂಸ್ಥೆ ಬಿಸಿಸಿಐ, ಕ್ರಿಕೆಟ್​ ಲೋಕದಲ್ಲಿ ತಲೆತಗ್ಗಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ರೂ ಬಿಸಿಸಿಐ ಎಚ್ಚೆತ್ತುಕೊಂಡಂತೆ ಕಾಣ್ತಿಲ್ಲ..

ಸ್ಟಾರ್​ಗಳಿಗೆಲ್ಲ ವಯಸ್ಸಾಯ್ತು.., ಭವಿಷ್ಯ ಮುಂದೇನು.?
ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಸೇರಿದಂತೆ ಟೀಮ್​ ಇಂಡಿಯಾ ಹಲ ಸ್ಟಾರ್​ಗಳ ವಯಸ್ಸು 32ರ ಗಡಿ ದಾಟಿದೆ. ಇನ್ನೂ, ಎಷ್ಟು ವರ್ಷ ಸ್ಟಾರ್​​ ಗಿರಿಯನ್ನೇ ನಂಬಿಕೊಂಡು ಇರೋಕಾಗುತ್ತೆ. ತಂಡದಲ್ಲಿರೋ ಈ ಸೀನಿಯರ್​ಗಳಿಗೆಲ್ಲ ಎಲ್ಲೆಡೆ ಆಡಿದ ಅನುಭವವಿದೆ. ಸರಾಗವಾಗಿ ರನ್​ಗಳಿಸಿದ್ದಾರೆ. ವಿಕೆಟ್ ಬೇಟೆಯಾಡಿದ್ದಾರೆ. ಹೋರಾಡಿ ಹಲ ಪಂದ್ಯಗಳನ್ನೂ ಗೆಲ್ಲಿಸಿಕೊಟ್ಟಿದ್ದಾರೆ. ಎಲ್ಲ ಸರಿ.. ಹಾಗಂತ ಭವಿಷ್ಯದ ಬಗ್ಗೆ ಯೋಚಿಸದೇ ಸುಮ್ಮನೇ ಕೂರೋಕಾಗುತ್ತಾ?. ಇವರೆಲ್ಲರನ್ನ ರಿಪ್ಲೇಸ್​ ಮಾಡಬಹುದಾದದ ಯುವ ಆಟಗಾರರನ್ನ ಹುಡುಕಬೇಕಲ್ವಾ?.

ಟೀಮ್​ ಇಂಡಿಯಾದಲ್ಲಿ ಬದಲಾವಣೆಗೆ ಇದೇ ಬೆಸ್ಟ್​ ಟೈಂ.!
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಸೋತ ಬಳಿಕ ಬದಲಾವಣೆಯ ಬಗ್ಗೆ ಮಾತುಗಳು ಕೇಳಿ ಬರ್ತಿವೆ. ಮುಂಬರೋ ವೆಸ್ಟ್​ ಇಂಡೀಸ್​ ಸರಣಿಯಲ್ಲೇ ತಂಡದಲ್ಲಿ ಭಾರಿ ಬದಲಾವಣೆ ಆಗುತ್ತೆ ಎಂಬ ಉಹಾಪೋಹ ಹರಿದಾಡ್ತಿದೆ. ಹಾಗಾದ್ರೆ, ಸೀನಿಯರ್​​ಗಳನ್ನ ರಿಪ್ಲೇಸ್​ ಮಾಡೋ ಸಮರ್ಥ ಆಟಗಾರರು ಯಾರಪ್ಪ ಇದ್ದಾರೆ ಎಂದು ಹುಡುಕಿದ್ರೆ, ಉತ್ತರವೇ ಸಿಗಲ್ಲ. ಹಾಗಿದೆ ಸದ್ಯದ ಪರಿಸ್ಥಿತಿ. ಐಪಿಎಲ್​ ಟೂರ್ನಿ, ರಣಜಿ ಟೂರ್ನಿ ಸೇರಿದಂತೆ ಹಲವು ಕಡೆ ಸಾಲಿಡ್​ ಪರ್ಫಾಮೆನ್ಸ್​ ನೀಡಿರೋ ಯುವ ಆಟಗಾರರ ಲಿಸ್ಟೇ ಇದೆ. ಆದ್ರೆ, ಇವರೆಲ್ಲ ಇಂಟರ್​ನ್ಯಾಷನಲ್​ ಲೆವೆಲ್​ನಲ್ಲಿ ಪರ್ಫಾಮ್​ ಮಾಡ್ತಾರಾ ಅನ್ನೋ ಪ್ರಶ್ನೆಗೆ ಉತ್ತರವೇ ಇಲ್ಲ.

ಭವಿಷ್ಯದ ಭಾರತ ತಂಡದ ನಿರ್ಮಾಣಕ್ಕೆ ಪ್ಲಾನ್​ ಏನು.?
ಡೊಮೆಸ್ಟಿಕ್​ ಸರ್ಕ್ಯೂಟ್​ನಲ್ಲಿ ಟ್ಯಾಲೆಂಟೆಡ್​ ಪ್ಲೇಯರ್ಸ್​ಗಳ ದಂಡೇ ಇದೆ. ಆದ್ರೆ, ಏಕಾಏಕಿ ಇಂಟರ್​ನ್ಯಾಷನಲ್​ ಲೆವೆಲ್​ಗೆ ಕರೆದುಕೊಂಡು ಬಂದರೆ ಅವರ ಕರಿಯರ್​ಗೆ ಫುಲ್​ ಸ್ಟಾಫ್​ ಬೀಳೋ ಸಾಧ್ಯತೆಯೇ ಜಾಸ್ತಿ. ಐಪಿಎಲ್​ನಿಂದ ಟೀಮ್​ ಇಂಡಿಯಾಗೆ ಎಂಟ್ರಿಕೊಟ್ಟ ವೆಂಕಟೇಶ್​ ಅಯ್ಯರ್, ಪರ್ಫಾಮ್​ ಮಾಡೋಕಾಗದೇ ಒದ್ದಾಡಿದ್ರು. ವೇಗಿ ಟಿ.ನಟರಾಜನ್​ ಇಂಜುರಿ ಮ್ಯಾನೇಜ್ ಮಾಡೋಕಾಗದೇ ಹಿನ್ನಡೆ ಅನುಭವಿಸಿದ್ರು. ವರುಣ್ ಚಕ್ರವರ್ತಿ ತಂಡದಿಂದ ಹೊರಬಿದ್ದಿದ್ದು ಇಂದಿಗೂ ಮಿಸ್ಟ್ರಿಯಾಗಿದೆ. ಹುಡುಕ್ತಾ ಹೋದ್ರೆ ಇನ್ನೂ ಹಲ ಉದಾಹರಣೆಗಳಿವೆ. ಹೀಗಾಗಿ ಆಟಗಾರರ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಎಚ್ಚೆತ್ತುಕೊಳ್ಳಬೇಕಿದೆ.

  • ಭವಿಷ್ಯದ ಟೀಮ್​ ಇಂಡಿಯಾಗೆ ಪ್ಲಾನ್
    ಐಪಿಎಲ್​, ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಆಡಿದ ಆಟಗಾರರ ಆಯ್ಕೆ
    ಟ್ಯಾಲೆಂಟೆಡ್​ ಯುವ ಆಟಗಾರರಿಗೆ ಸೂಕ್ತವಾದ ಮಾರ್ಗದರ್ಶನ
    ಟೂರ್​​ ಗೇಮ್​ಗಳಿಗೆ ಕಳಿಸಿ, ಫಾರಿನ್​ ಕಂಡೀಷನ್ಸ್​ನಲ್ಲಿ ಆಟ
    ಮೆಂಟಲ್​ ಫಿಟ್​ನೆಸ್​, ಫಿಸಿಕಲ್​ ಫಿಟ್​ನೆಸ್​ಗೆ​ ನಿರ್ದಿಷ್ಟ ಮಾನದಂಡ

ಇಂಜುರಿ ಫ್ರಿಯಾಗಿರಿಸಿಕೊಳ್ಳಲು ಸ್ಪಷ್ಟವಾದ ಯೋಜನೆ
ಭವಿಷ್ಯದ ತಂಡ ಕಟ್ಟಲು ಬಿಸಿಸಿಐ ಈಗಲಾದ್ರೂ ಮಹತ್ವದ ಪ್ಲಾನ್​ ರೂಪಿಸಬೇಕಿದೆ. ಐಪಿಎಲ್​, ಡೊಮೆಸ್ಟಿಕ್​ ಕ್ರಿಕೆಟ್​ ಎಲ್ಲಾದ್ರೂ ಸರಿ. ಟೀಮ್​ ಇಂಡಿಯಾ ಪರ ಆಡಬಲ್ಲ ಸಮರ್ಥ ಆಟಗಾರರನ್ನು ಗುರುತಿಸಬೇಕಿದೆ. ಆ ಆಟಗಾರರನ್ನು ಹೆಚ್ಚು ಹೆಚ್ಚು ಟೂರ್​​ ಗೇಮ್​ಗಳಿಗೆ ಕಳಿಸಿ, ಫಾರಿನ್​ ಕಂಡೀಷನ್ಸ್​ಗಳಲ್ಲಿ ಆಡಿಸಬೇಕು. ಮೆಂಟಲ್ ಫಿಟ್​ನೆಸ್​​​, ಫಿಸಿಕಲ್​ ಫಿಟ್​ನೆಸ್​ಗೆ ನಿರ್ದಿಷ್ಟ ಮಾನದಂಡಗಳನ್ನ ರೂಪಿಸಿ ಆಟಗಾರರನ್ನ ಇಂಜುರಿ ಪ್ರೀ ಮಾಡಿಕೊಳ್ಳಲು ಸ್ಪಷ್ಟ ಪ್ಲ್ಯಾನ್​ ರೂಪಿಸಬೇಕಿದೆ.

ಟೀಮ್​ ಇಂಡಿಯಾದಲ್ಲೂ ಡೈರೆಕ್ಟರ್​ ಹುದ್ದೆ ಸೃಷ್ಟಿಯಾದ್ರೆ ಬೆಸ್ಟ್​.!
ಪ್ರಮುಖ ವಿದೇಶಿ ತಂಡಗಳಲ್ಲಿ ಡೈರೆಕ್ಟರ್​ ಎಂಬ ಹುದ್ದೆಯಿದೆ. ಫ್ಯೂಚರ್​ ತಂಡವನ್ನ ರೂಪಿಸುವಲ್ಲಿ ಈ ಹುದ್ದೆಯಲ್ಲಿರೋವ್ರು ಪ್ರಮುಖ ಪಾತ್ರ ನಿರ್ವಹಿಸ್ತಾರೆ. ಟೀಮ್​ ಇಂಡಿಯಾದಲ್ಲೂ ಇಂತಾ ಹುದ್ದೆಯ ಸೃಷ್ಟಿ ಮಾಡುವ ಅಗತ್ಯತೆಯಿದೆ. ಸಮರ್ಥರನ್ನ ಈ ಹುದ್ದೆಗೆ ತಂದು ಕೂರಿಸಿ ಭವಿಷ್ಯದ ತಂಡವನ್ನ ಕಟ್ಟಲು ಸ್ಪಷ್ಟ ಬ್ಲ್ಯೂ ಪ್ರಿಂಟ್​​ ರೂಪಿಸಿ, ಅಂದುಕೊಂಡ ಪ್ಲ್ಯಾನ್​​ಗಳನ್ನ ಕಾರ್ಯ ರೂಪಕ್ಕೆ ಇಳಿಸಬೇಕು. ಹಾಗಾದ್ರೆ, ಪ್ಯೂಚರ್​ ತಂಡವನ್ನ ಕಟ್ಟೋದು ಕಷ್ಟದ ಕೆಲಸ ಅಲ್ಲವೇ ಅಲ್ಲ.

ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಗೆ ಇನ್ನು 4 ತಿಂಗಳುಗಳು ಮಾತ್ರ ಬಾಕಿ ಉಳಿದಿವೆ. ಅಷ್ಟರೊಳಗೆ ತಂಡದಲ್ಲಿ ಭಾರೀ ಬದಲಾವಣೆ ಮಾಡೋದು ಅನುಮಾನ. ಆದ್ರೆ, ಆ ಬಳಿಕ ಬದಲಾವಣೆ ಆಗೋದಂತೂ ಪಕ್ಕಾ. ಅಷ್ಟರೊಳಗೆ ಬಿಸಿಸಿಐ, ಯಂಗ್​ ಟ್ಯಾಲೆಂಟ್​​​ ಹಂಟ್​ ಮಾಡೋಕೆ ಎಲ್ಲ ಕ್ರಮಗಳನ್ನ ಕೈಗೊಳ್ಳಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಿರಿಯ ಆಟಗಾರರಿಗೆ ವಯಸ್ಸಾಯಿತು.. ಭವಿಷ್ಯದ ಟೀಮ್​ ಇಂಡಿಯಾದ ಪ್ಲೇಯರ್ಸ್​ ಯಾಱರು?

https://newsfirstlive.com/wp-content/uploads/2023/06/VENKATESH_IYAR_IPL.jpg

Load More