ACP ಬಂಗಲೆಯಲ್ಲಿ ಮಧ್ಯರಾತ್ರಿ 3:30ಕ್ಕೆ ಕೇಳಿಸಿತು ಗುಂಡಿನ ಸದ್ದು
ಶಬ್ಧ ಕೇಳಿ ಓಡೋಡಿ ಬಂದ ಮಗ, ಶೂಟ್ ಮಾಡಿಯೇ ಬಿಟ್ಟರು
ಹಿರಿಯ ಪೊಲೀಸ್ ಅಧಿಕಾರಿ ಹೀಗೆ ಮಾಡಿದ್ದಕ್ಕೆ ಕಾರಣವೇನು?
ಪುಣೆ: ಅಳಿಯ ಮತ್ತು ಹೆಂಡತಿಯನ್ನು ಶೂಟ್ ಮಾಡಿದ ಬಳಿಕ ಅದೇ ಗನ್ನಿಂದ ತಾನು ಗುಂಡು ಹಾರಿಸಿಕೊಂಡು ಹಿರಿಯ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಪುಣೆಯ ಬನೇರಾ ಏರಿಯಾದಲ್ಲಿ ರಾತ್ರಿ 3:30ಕ್ಕೆ ನಡೆದಿದೆ.
ಹೆಂಡತಿ ಮೊನಿ ಗಾಯಕವಾಡ್(44), ಅಳಿಯ ದೀಪಕ್ (35) ಮೃತಪಟ್ಟವರು. ತನ್ನನ್ನು ತಾನೇ ಶೂಟ್ ಮಾಡಿಕೊಂಡ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ (ACP) ಭರತ್ ಗಾಯಕವಾಡ್ ಹಿರಿಯ ಅಧಿಕಾರಿಯಾಗಿದ್ದಾರೆ. ಆದರೆ ಇವರು ಯಾಕೆ ಹೀಗೆ ಮಾಡಿದ್ದಾರೆ ಅಂತ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪುಣೆಯ ಬನೇರಾ ಏರಿಯಾದಲ್ಲಿನ ತಮ್ಮ ಬಂಗಲೆಯಲ್ಲಿ ACP ಭರತ್ ಗಾಯಕವಾಡ್ ಅವರು ಕುಟುಂಬದ ಜೊತೆ ವಾಸವಿದ್ದರು. ಅಮರಾವತಿ ನಗರಕ್ಕೆ ACP ಆಗಿ ನಿಯೋಜನೆ ಆಗಿದ್ದರು. ಹೀಗಾಗಿ ತಮ್ಮ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಸೋಮವಾರ ರಾತ್ರಿ 3:30ಕ್ಕೆ ತನ್ನ ಹೆಂಡತಿಯ ತಲೆಗೆ ಶೂಟ್ ಮಾಡಿದ್ದಾರೆ. ಈ ಸೌಂಡ್ ಕೇಳುತ್ತಿದ್ದಂತೆ ಮಗ ಮತ್ತು ಅಳಿಯ ಓಡೋಡಿ ಬಂದು ಕೋಣೆಯ ಬಾಗಿಲು ಓಪನ್ ಮಾಡಿದ್ದಾರೆ. ತಕ್ಷಣ ಮತ್ತೊಂದು ಗುಂಡು ಅಳಿಯನ ಎದೆಗೆ ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಬಳಿಕ ಮಗನನ್ನು ಬಿಟ್ಟು ತನಗೆ ತಾನೇ ಶೂಟ್ ಮಾಡಿಕೊಂಡು ACP ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ