newsfirstkannada.com

BREAKING; ತೆಲುಗು ಹಿರಿಯ ನಟ ಚಂದ್ರಮೋಹನ್​ ಹೃದಯಾಘಾತಕ್ಕೆ ನಿಧನ​

Share :

11-11-2023

    82 ವರ್ಷದ ಹಿರಿಯ ನಟ ಚಂದ್ರ ಮೋಹನ್​ ಸಾವು

    ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ನಿಧನ

    ನಟನ ನಿಧನಕ್ಕೆ ತೆಲುಗು ಚಿತ್ರರಂಗದ ಗಣ್ಯರ ಸಂತಾಪ

ತೆಲುಗು ಹಿರಿಯ ನಟ ಚಂದ್ರ ಮೋಹನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 82 ವರ್ಷದ ನಟ ಚಂದ್ರ ಮೋಹನ್ ಅವರು ಇಂದು ಬೆಳಗ್ಗೆ 9.45ಕ್ಕೆ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು.

ಇನ್ನು, ನಟನ ಅಗಲಿಕೆಯ ವಿಷಯ ತಿಳಿಯುತ್ತಿದ್ದಂತೆ ತೆಲುಗು ಚಿತ್ರರಂಗದ ಹಲವಾರು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ನಟ ಚಂದ್ರ ಮೋಹನ್ ಅವರು ಪತ್ನಿ ಜಲಂಧರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸೋಮವಾರಂದು ಹೈದರಾಬಾದ್‌ನಲ್ಲಿ ನಟನ ಅಂತಿಮ ವಿಧಿವಿಧಾನಗಳು ನಡೆಯಲಿವೆ.

ಇನ್ನೂ ಹಿರಿಯ ನಟ ಚಂದ್ರ ಮೋಹನ್ ಸಾವಿನ ವಿಷಯ ತಿಳಿಯುತ್ತಿದ್ದಂತೆ ನಟ ಜೂನಿಯರ್ ಎನ್‌ಟಿಆರ್ ಕೂಡ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹಲವು ದಶಕಗಳಿಂದ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮ್ಮದೇ ಆದ ವಿಶೇಷ ಮನ್ನಣೆಯನ್ನು ಗಳಿಸಿದ ಚಂದ್ರಮೋಹನ್ ಅವರ ಅಕಾಲಿಕ ಮರಣವನ್ನು ಕಂಡು ತುಂಬಾ ದುಃಖವಾಗಿದೆ. ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪಗಳು ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ. 

– ನಟ ಜೂನಿಯರ್ ಎನ್​ಟಿಆರ್ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING; ತೆಲುಗು ಹಿರಿಯ ನಟ ಚಂದ್ರಮೋಹನ್​ ಹೃದಯಾಘಾತಕ್ಕೆ ನಿಧನ​

https://newsfirstlive.com/wp-content/uploads/2023/11/death-2023-11-11T110810.772.jpg

Load More