ಸೆಪ್ಟೆಂಬರ್ 11ರಂದು ಸಿಲಿಕಾನ್ ಸಿಟಿ ಸಂಪೂರ್ಣ ಸ್ತಬ್ಧ
ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಸರ್ಕಾರಿ ಬಸ್ ಬಂದ್
32 ಖಾಸಗಿ ಸಾರಿಗೆ ಸೇವಾ ಸಂಘಗಳಿಂದ ಬೆಂಬಲ
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳು ಸಿಡಿದೆದ್ದಿವೆ. ಸೆಪ್ಟೆಂಬರ್ 11ರಂದು ಬೆಂಗಳೂರು ಬಂದ್ಗೆ ಕರೆ ಕೊಟ್ಟಿವೆ. ಲಕ್ಷಾಂತರ ಖಾಸಗಿ ವಾಹನಗಳು ಮುಷ್ಕರಕ್ಕಿಳಿಯಲಿದ್ದು ರಾಜಧಾನಿ ಸ್ತಬ್ಧ ಆಗುವ ಸಾಧ್ಯತೆ ದಟ್ಟವಾಗಿದೆ. ಒಂದು ಕಡೆ ಓಲಾ, ಊಬರ್, ಱಪಿಡೋ ಬೈಕ್ ಸೇವೆ. ಮತ್ತೊಂದೆಡೆ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಶಕ್ತಿ ಸೇವೆ. ಈ ನಡುವೆ ಖಾಸಗಿ ಸಾರಿಗೆ ಸೊರಗಿದೆ. ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರ ಗಳಿಕೆಗೆ ಖೋತಾ ಬಿದ್ದಿದೆ. ಸರ್ಕಾರದ ನೀತಿಗೆ ಸಿಡಿದೆದ್ದಿರುವ ಖಾಸಗಿ ಸಾರಿಗೆ ಒಕ್ಕೂಟ ದೊಡ್ಡ ಹೋರಾಟಕ್ಕೆ ಕರೆ ಕೊಟ್ಟಿದೆ.
ಸರ್ಕಾರದ ವಿರುದ್ಧ ಸಿಡಿದೆದ್ದ ಖಾಸಗಿ ಸಾರಿಗೆ ಒಕ್ಕೂಟ!
ಸೆಪ್ಟೆಂಬರ್ 11ರಂದು ಬೆಂಗಳೂರು ಬಂದ್ಗೆ ಕರೆ!
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಖಾಸಗಿ ಸಾರಿಗೆ ಒಕ್ಕೂಟ ಸರ್ಕಾರದ ವಿರುದ್ಧ ಸಮರ ಸಾರಿದೆ. ಈಗಾಗಲೇ ಕಳೆದ ಜೂನ್ 27ರಂದು ಬಂದ್ಗೆ ಕರೆಕೊಟ್ಟಿತ್ತು. ಬಳಿಕ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಅದಾದ ಬಳಿಕವೂ ಆಗಸ್ಟ್ 20ರಂದು ಸಭೆ ನಡೆಸಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 30 ಬೇಡಿಕೆಗಳಲ್ಲಿ 28 ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ನಿರ್ಧಾರ ಮಾಡ್ತೀವಿ ಎಂದಿದ್ದರು. ಆದರೆ ಗಡುವು ಮುಗಿದಿದ್ರೂ ಸರ್ಕಾರದ ಕಡೆಯಿಂದ ಸ್ಪಂದನೆ ಸಿಗದ ಕಾರಣ ಸೆಪ್ಟೆಂಬರ್ 11ರಂದು ಬೆಂಗಳೂರು ಬಂದ್ಗೆ ಕರೆ ನೀಡಿವೆ. ಸೆಪ್ಟೆಂಬರ್ 11ರಂದು ಬೆಂಗಳೂರು ಸಂಪೂರ್ಣ ಸ್ತಬ್ಧ ಆಗಲಿದ್ದು ಸೆಪ್ಟೆಂಬರ್10ರ ಭಾನುವಾರ ರಾತ್ರಿ 12 ಗಂಟೆಯಿಂದ ಸೆಪ್ಟೆಂಬರ್ 11ರ ಮಧ್ಯರಾತ್ರಿ 12 ಗಂಟೆವರೆಗೆ ಖಾಸಗಿ ಬಂದ್ ಆಗಲಿದೆ.
ಇನ್ನು ಸೆಪ್ಟೆಂಬರ್ 10ರ ರಾತ್ರಿ ಬೇರೆ ಬೇರೆ ಜಿಲ್ಲೆಗಳಿಗೆ ಹೋಗುವ ಬಸ್ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ, ಆದ್ರೆ ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವ ಬಸ್ಗಳಿಗೆ ಎಂಟ್ರಿ ಇರುವುದಿಲ್ಲ, ಬೆಂಗಳೂರು ನಗರದ ಹೊರವಲಯಗಳಲ್ಲೇ ಖಾಸಗಿ ಬಸ್ಗಳಿಗೆ ತಡೆ ನೀಡಲಾಗುತ್ತೆ. ಆಟೋ ಟ್ಯಾಕ್ಸಿ, ಖಾಸಗಿ ಬಸ್ ಸ್ಕೂಲ್ ಬಸ್ ಎಲ್ಲವೂ ಬಂದ್ ಆಗಲಿವೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಆಟೋ, 3 ಲಕ್ಷಕ್ಕೂ ಹೆಚ್ಚು ಟ್ಯಾಕ್ಸಿಗಳು ಮುಷ್ಕರದಲ್ಲಿ ಭಾಗಿಯಾಗಲಿವೆ. ಜೊತೆ ವಿವಿಧ ಸಂಘಟನೆಗಳು ಹಾಗೂ ಸಂಘಟನೆಗಳು, ಲಕ್ಷಾಂತರ ಖಾಸಗಿ ವಾಹನಗಳು ಭಾಗಿಯಾಗಲಿವೆ.
ಖಾಸಗಿ ಸಾರಿಗೆ ಒಕ್ಕೂಟದ ಬೇಡಿಕೆಗಳು ಏನೇನು..?
ಖಾಸಗಿ ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ ನೀಡಬೇಕು, ಱಪಿಡೋ, ಬೈಕ್ ಟ್ಯಾಕ್ಸಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಅಸಂಘಟಿತ ವಾಹನ ಚಾಲಕರ ಹಾಗೂ ಸಾರಿಗೆ ಅಭಿವೃದ್ಧಿಗಾಗಿ ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಆಟೋ, ಟ್ಯಾಕ್ಸಿ ಚಾಲಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡಬೇಕು. ಖಾಸಗಿ ಸಾರಿಗೆ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಓಲಾ, ಊಬರ್ ಌಪ್ ಆಧಾರಿತ ಸೇವೆಗಳ ಮೇಲೆ ನಿರ್ಬಂಧ ಹೇರಬೇಕು. ಖಾಸಗಿ ಬಸ್ಗಳಿಗೂ ಉಚಿತ ಶಕ್ತಿ ಯೋಜನೆ ಅಡಿ ಸೇವೆ ನೀಡಲು ಅವಕಾಶ ನೀಡಬೇಕು, ಖಾಸಗಿ ವಾಹನಗಳನ್ನೂ ಕೂಡ ಸರ್ಕಾರ ಬಾಡಿಗೆ ಪಡೆಯಬೇಕು. ವೈಟ್ ಬೋರ್ಡ್ ವಾಹನಗಳಲ್ಲೂ ಬಾಡಿಗೆ ಮಾಡಲು ಅವಕಾಶ ನೀಡಬೇಕು.
ಇನ್ನು ಬೆಂಗಳೂರು ಬಂದ್ ಬಗ್ಗೆ ಮಾಹಿತಿ ನೀಡಿರುವ ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಸಾರಿಗೆ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ. ಓಲಾ,ಊಬರ್ ಕಂಪನಿಗಳಿಂದ ಕಮಿಷನ್ ಹೋಗುತ್ತೆ. ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. ಈ ಬಗ್ಗೆ 15 ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡ್ತೀನಿ ಅಂತ ಗುಡುಗಿದ್ದಾರೆ. ಸುಮಾರು 32 ಖಾಸಗಿ ಸಾರಿಗೆ ಸೇವಾ ಸಂಘಗಳು ಸೆಪ್ಟೆಂಬರ್ 11ರಂದು ಬೆಂಗಳೂರು ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಸೆಪ್ಟೆಂಬರ್ 11ರಂದು ಮೆಜೆಸ್ಟಿಕ್ನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ. ಹೊರವಲಯದ ಟೋಲ್ಗಳಲ್ಲಿ ಬೃಹತ್ ಪ್ರತಿಭಟನೆಗೂ ನಿರ್ಧರಿಸಲಾಗಿದೆ. ಆದ್ರೆ ಸರ್ಕಾರ ಮತ್ತೆ ಖಾಸಗಿ ಸಾರಿಗೆ ಒಕ್ಕೂಟಗಳ ಜೊತೆ ಮಾತುಕತೆ ನಡೆಸುತ್ತಾ, ಬೇಡಿಕೆಗಳನ್ನು ಈಡೇರಿಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ