Advertisment

ವರುಣ್ ಆರಾಧ್ಯ ಬೆದರಿಕೆ ಕೇಸ್‌ಗೆ ಹೊಸ ಟ್ವಿಸ್ಟ್.. ಮಾಜಿ ಪ್ರೇಯಸಿ ಬಗ್ಗೆ ಏನಂದ್ರು ಗೊತ್ತಾ?

author-image
admin
Updated On
ವರುಣ್ ಆರಾಧ್ಯ ಬೆದರಿಕೆ ಕೇಸ್‌ಗೆ ಹೊಸ ಟ್ವಿಸ್ಟ್.. ಮಾಜಿ ಪ್ರೇಯಸಿ ಬಗ್ಗೆ ಏನಂದ್ರು ಗೊತ್ತಾ?
Advertisment
  • ನನ್ನ ಬಳಿಯೂ ಪ್ರೂಫ್‌ ಇದೆ ಎಂದು ಸ್ಕ್ರೀನ್ ಶಾಟ್‌ ಪೋಸ್ಟ್ ಮಾಡಿದ ಯುವತಿ
  • ವರುಣ್‌ ಚಾಟ್‌ ಮಾಡಿದ್ದ ಸ್ಕ್ರೀನ್‌ ಶಾಟ್‌ ಶೇರ್ ಮಾಡಿ ಸಖತ್ ಟಾಂಗ್‌!
  • ಆರೋಪಕ್ಕೆ ನ್ಯೂಸ್‌ ಫಸ್ಟ್‌ಗೆ ಸೀರಿಯಲ್ ನಟ ವರುಣ್ ಆರಾಧ್ಯ ಹೇಳಿದ್ದೇನು?

ಬೆಂಗಳೂರು: ಇತ್ತೀಚೆಗೆ ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ಯ ಮೇಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಕೇಳಿ ಬಂದಿತ್ತು. ಪೊಲೀಸ್ ಠಾಣೆ ಮೆಟ್ಟಿಲೇರಿದ ಈ ಕೇಸ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಬಳಿಕ ಪೊಲೀಸ್ ಠಾಣೆಯಲ್ಲೇ ಇಬ್ಬರ ಮಧ್ಯೆ ಕಾಂಪ್ರಮೈಸ್ ಆಗಿತ್ತು. ಇದೀಗ ವರುಣ್ ಆರಾಧ್ಯ ಬೆದರಿಕೆ ಕೇಸ್‌ಗೆ ಮಾಜಿ ಪ್ರೇಯಸಿಯೇ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.

Advertisment

ವರುಣ್ ಆರಾಧ್ಯ ವಿರುದ್ಧ ಆರೋಪ ಮಾಡಿರುವ ಮಾಜಿ ಪ್ರೇಯಸಿ ಸೋಷಿಯಲ್ ಮೀಡಿಯಾದಲ್ಲಿ ವರುಣ್‌ ಆರಾಧ್ಯ ಚಾಟ್‌ ಮಾಡಿದ್ದ ಸ್ಕ್ರೀನ್‌ ಶಾಟ್‌ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆದುಕೊಳ್ತಿದೆ ವರುಣ್ ಆರಾಧ್ಯ ಕೇಸ್​.. FIRನಲ್ಲಿ ಇರೋದು ಬಿಟ್ಟು ಬೇರೆಯೇ ಕಥೆ ಸೃಷ್ಟಿ 

ವರುಣ್‌ ಆರಾಧ್ಯ ಸಂದರ್ಶನ ನೀಡಿದ ಬಳಿಕ ಆ ಯುವತಿ ಪೋಸ್ಟ್ ಮಾಡಿದ್ದು ತಿರಗೇಟು ಕೊಟ್ಟಿದ್ದಾರೆ. ಸಂದರ್ಶನದಲ್ಲಿ ಕುಳಿತುಕೊಂಡು ಏನೇನೋ ಮಾತನಾಡುವುದು ಸರಿಯಾ. ನನ್ನ ಬಳಿಯೂ ಪ್ರೂಫ್‌ ಇದೆ ಎಂದು ಸ್ಕ್ರೀನ್ ಶಾಟ್‌ ಪೋಸ್ಟ್ ಮಾಡಿದ್ದಾರೆ.

Advertisment

publive-image

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಚಾಟ್‌ನಲ್ಲಿ ವರುಣ್ ಆರಾಧ್ಯ ಅವರು ಅಸಹ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಸ್ಕ್ರೀನ್ ಶಾಟ್ ಫೋಸ್ಟ್‌ನಲ್ಲಿ ಯುವತಿಗೆ ನಿಂದನೆ ಹಾಗೂ ಅತ್ಯಾಚಾ*ರ ಎಸಗುವುದಾಗಿಯೂ ಬೆದರಿಕೆ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ.

publive-image

ವರುಣ್ ಆರಾಧ್ಯ ಹೇಳೋದೇನು?
ಮಾಜಿ ಪ್ರೇಯಸಿ ಮಾಡಿರುವ ಈ ಆರೋಪದ ಬಳಿಕ ನ್ಯೂಸ್‌ ಫಸ್ಟ್‌ಗೆ ಸೀರಿಯಲ್ ನಟ ವರುಣ್ ಆರಾಧ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನನಗೆ ಮಾತನಾಡುವುದಕ್ಕೆ ಇಷ್ಟವಿಲ್ಲ. ಈ ಘಟನೆಗಳ ಬಗ್ಗೆ ಮೌನವಹಿಸುವುದು ಸರಿ ಎನಿಸುತ್ತಿದೆ.

ಇದನ್ನೂ ಓದಿ: ವರುಣ್ ಆರಾಧ್ಯ ಮತ್ತು ಮಾಜಿ ಪ್ರೇಯಸಿಯ ಕತೆಯಲ್ಲಿ ಬಿಗ್​​ ಟ್ವಿಸ್ಟ್​​! ಇನ್​​ಸ್ಟಾಗ್ರಾಂನಲ್ಲಿ ಹೀಗೊಂದು ಪೋಸ್ಟ್​ 

Advertisment

ಪೊಲೀಸ್ ಸ್ಟೇಷನ್‌ಗೆ ದೂರು ನೀಡಿದ ನಂತರ ಕಾಂಪ್ರಮೈಸ್ ಆಗಿದೆ. ನಾನು ಸೈಲೆಂಟ್ ಆಗಿದ್ದೇನೆ. ಇನ್ಮುಂದೆ ಈ ಬಗ್ಗೆ ಮಾತನಾಡಬಾರ್ದು ಎಂದು ಡಿಸೈಡ್ ಮಾಡಿದ್ದೇನೆ ಎಂದು ವರುಣ್ ಹೇಳಿದ್ದಾರೆ. ಕಳೆದ 4 ವರ್ಷಗಳ ಹಿಂದೆ ಇಬ್ಬರು ಒಟ್ಟಿಗೆ ಯೂಟ್ಯೂಬ್‌ ಶುರು ಮಾಡಿದ್ವಿ. ನನ್ನ ಅಕೌಂಟ್ ಇಲ್ಲದಿದ್ದ ಕಾರಣ ಅವರ ಅಕೌಂಟ್‌ ಅನ್ನೇ ಯೂಟ್ಯೂಬ್‌ಗೆ ಆ್ಯಡ್ ಮಾಡಿದ್ವಿ. ನಾಲ್ಕು ವರ್ಷಗಳಿಂದ ದುಡಿದ 22 ಲಕ್ಷ ರೂಪಾಯಿ ಹಣ ಅವರ ಬಳಿಯಿದೆ. ನನಗೆ ಇಲ್ಲಿಯವರೆಗೂ ನನ್ನ ಪಾಲಿನ ಹಣ ಕೊಟ್ಟಿಲ್ಲ. ಕೊಡುತ್ತೇನೆ ಎಂದು ಹೇಳಿದ್ದಾರೆ, ಆದರೂ ಇನ್ನೂ ಕೊಟ್ಟಿಲ್ಲ. ಈ ಬಗ್ಗೆ ಏನು ಮಾಡುವುದು ನನಗೆ ತಿಳಿಯುತ್ತಿಲ್ಲ ಎಂದು ಸೀರಿಯಲ್ ನಟ ವರುಣ್‌ ಆರಾಧ್ಯ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment