ರೀಲ್ಸ್ ರಾಜಾ-ರಾಣಿ ಲವ್ವಲ್ಲಿ ಟ್ವಿಸ್ಟ್, ಬ್ಲ್ಯಾಕ್‌ಮೇಲ್ ಕೇಸ್!
ಅವಳ ‘ಆ’ ವಿಡಿಯೋ ಕಳುಹಿಸಿ ಧಮ್ಕಿ ಹಾಕಿದನಾ ನಟ?
4 ವರ್ಷದ ಪ್ರೀತಿ ರಾದ್ಧಾಂತದ ಬಳಿಕ ಚೆಂದುಳ್ಳಿ ಚೆಲುವೆ ಕಣ್ಣೀರು
ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಗೆಳತಿ ಗಂಭೀರ ಆರೋಪ ಮಾಡಿದ್ದಾರೆ. ಅಶ್ಲೀಲ ಫೋಟೋ, ವಿಡಿಯೋ ಕಳಿಸಿ ಬ್ಲಾಕ್‌ಮೇಲ್ ಮಾಡ್ತಿದ್ದಾನೆ ಅಂತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಾಗೇ ತಮ್ಮ ಪ್ರೀತಿ ಹೇಗೆ ಹುಟ್ಟಿತ್ತು? ಹೇಗೆ ಬ್ರೇಕಪ್ ಆಯ್ತು? ಅನ್ನೋದನ್ನು ತೆರೆದಿಟ್ಟಿದ್ದಾರೆ. ಆ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಇದನ್ನೂ ಓದಿ: ವರುಣ್ ಆರಾಧ್ಯ ಖಾಸಗಿ ರಹಸ್ಯ ಗೊತ್ತಾಗಿದ್ಹೇಗೆ? ಮಾಜಿ ಪ್ರೇಯಸಿ ಬಿಚ್ಚಿಟ್ಟ ಇಂಚಿಂಚೂ ಮಾಹಿತಿ ಇಲ್ಲಿದೆ
ಸಿನಿಮಾ ಹೀರೋ-ಹೀರೋಯಿನ್ಸ್ನೂ ಮೀರಿಸೋ ರೇಂಜಿಗಿತ್ತು ಇವರಿಬ್ಬರ ಹವಾ. ಇಬ್ಬರಲ್ಲೂ ಅದೆಂಥಾ ಕೆಮಿಸ್ಟ್ರಿ, ಅದೆಂಥಾ ಕೋ ಆರ್ಡಿನೇಷನ್ನು. ಎಲ್ಲರೂ ಕಣ್ಬಿಟ್ಟು ನೋಡಿ, ಇದು ಸೂಪರ್ ಡೂಪರ್ ಜೋಡಿ, ಅಂತಾ ಇವರಿಬ್ಬರನ್ನ ನೋಡ್ತಾ ನೋಡ್ತಾ ಅಂದುಕೊಳ್ತಿದ್ದರು. ಇನ್ಸ್ಟಾ ಪ್ರಪಂಚದಲ್ಲಿ ಈ ಜೋಡಿ ವರ್ಲ್ಡ್ ಫೇಮಸ್ಸು. ಇವ್ರು ಎರಡು ಸ್ಟೆಪ್ ಹಾಕಿ ವಿಡಿಯೋ ಮಾಡಿ ಬಿಟ್ರು ಅಂದ್ರೆ ಲಕ್ಷ ಲಕ್ಷ ವೀವ್ಸ್ ಸಿಗುತ್ತಿತ್ತು.
ಬರೀ ರೀಲ್ಸ್ ಮಾಡೋದಷ್ಟೇ ಅಲ್ಲ ಇಬ್ರೂ ರೀಲ್ಸ್ ಮಾಡ್ತಾ ಮಾಡ್ತಾ ಒಬ್ಬರಿಗೊಬ್ಬರು ಬಿದ್ದೊಗಿದ್ರು. ಅಂದ್ರೆ, ಪ್ರೀತಿ, ಪ್ರೇಮ, ಹಾಳು ಮೂಳು ಅಂತಾ ನಾಲ್ಕು ವರ್ಷಗಳ ಕಾಲ ಸುತ್ತಾಡಿದ್ರು. ಹುಡುಗಿ ಚೆನ್ನಾಗಿದ್ದಾಳೆ, ಹುಡುಗಾನೂ ಹ್ಯಾಂಡ್ಸಮ್ಮು. ಸೀರಿಯಲ್ಲು, ಆಕ್ಟಿಂಗು ಅಂತಾ ಕರಿಯರ್ ಕಟ್ಟಿಕೊಳ್ತಿದ್ದಾನೆ. ಮುಂದೆ ಇಬ್ರೂ ಮದುವೆ ಮಡ್ಕೊಳ್ಳೋದು ಪಕ್ಕಾ ಅಂತಾ ಇವ್ರ ರೀಲ್ಸ್ ಅಭಿಮಾನಿಗಳು ಅಂದುಕೊಂಡಿದ್ರು.
ಇದನ್ನೂ ಓದಿ: ವರುಣ್ ಆರಾಧ್ಯ ಮತ್ತು ಅವಳು.. ಬೆತ್ತಲೆ ಫೋಟೋಗಳನ್ನು ನೋಡಿ ಬೆಚ್ಚಿ ಬಿದ್ದ ರೀಲ್ಸ್ ಸ್ಟಾರ್!
ಈಗ ಇವರಿಬ್ಬರ ರಿಯಲ್ ಲೈಫಲ್ಲಿ ನಡೆದಿರೋ ಕಥೆ ಕೇಳಿ, ಜನ್ರು ಅಯ್ಯೋ ಏನ್ ಗತಿ ಬಂತು ಗುರು ಅಂತಾ ಫೀಲ್ ಆಗೋ ಪರಿಸ್ಥಿತಿ ಬಂದಿದೆ. ಕೆಲವ್ರು ಸೋಷಿಯಲ್ ಮೀಡಿಯಾ ಫ್ರೆಂಡ್ಶಿಪ್ಪು ಮಿತಿಮೀರಿದ್ರೆ ಆಪತ್ತು ಅಂತಾ ಕಮೆಂಟ್ ಮಾಡ್ತಿದ್ದಾರೆ.
ಈ ಸ್ಟೋರಿಯ ಮೇನ್ ಕ್ಯಾರೆಕ್ಟರೇ ಈ ಹುಡುಗಿ. ಈಕೆಯ ಗೌಪ್ಯತೆ ಕಾಪಾಡೋ ಉದ್ದೇಶದಿಂದ ನಾವು ಇವರ ಪರ್ಸನಲ್ ಐಡೆಂಟಿಯನ್ನ ರಿವೀಲ್ ಮಾಡೋ ಹಾಗಿಲ್ಲ. ಹಾಗಾಗಿಯೇ, ಇವರ ಮುಖವನ್ನು ತೋರಿಸುವ ಹಾಗಿಲ್ಲ.
ಇದನ್ನೂ ಓದಿ: ಖಾಸಗಿ ಫೋಟೋ, ಧಮ್ಕಿ, ಪ್ರೀತಿಸಿ ವಂಚನೆ.. ಸೀರಿಯಲ್ ನಟ ವರುಣ್ ಆರಾಧ್ಯ ವಿರುದ್ಧ ಕೇಸ್ ದಾಖಲು

ಸೀರಿಯಲ್ ನಟ ಮಾಡಿದ್ದೇನು? ಅವಳು ಠಾಣೆಗೆ ಹೋಗಿದ್ದೇಕೆ?
ವರುಣ್ ಆರಾಧ್ಯ ಅನ್ನೋ ಈ ಹುಡುಗ ಸೀರಿಯಲ್ ಹಾಗೂ ರೀಲ್ಸ್ ಮೂಲಕ ಮನೆಮಾತಾಗಿದ್ದ. ಆತನ ಜೊತೆ ಜೊತೆಗೆ ಸಾಕಷ್ಟು ರೀಲ್ಸ್ಗಳಲ್ಲಿ ಕಾಣಿಸಿಕೊಂಡಿದ್ದ ಈಕೆ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಫೇಮಸ್. ಇನ್ಸ್ಟಾಗ್ರಾಮ್ ಯೂಸ್ ಮಾಡ್ತಿದ್ದವರು ಯಾರೂ ಇವರಿಬ್ಬರನ್ನ ನೋಡಿಲ್ಲ ಅಂತಾ ಹೇಳೋ ಮಾತೇ ಇಲ್ಲ. ಅಂದ ಹಾಗೇ ರೀಲ್ಸ್ ಮಾಡ್ತಾ ಮಾಡ್ತಾನೇ ವರುಣ್ ಆರಾಧ್ಯಗೆ ಸೀರಿಯಲ್‌ನಲ್ಲಿ ಅವಕಾಶಗಳು ಅರಸಿ ಬಂದಿವೆ.
ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗ್ತಿದ್ದ ಸೀರಿಯಲ್‌ನಲ್ಲಿ ಮುಖ್ಯ ರೋಲ್‌ನಲ್ಲಿ ವರುಣ್ ಌಕ್ಟ್ ಮಾಡಿ ಕಿರುತೆರೆಯಲ್ಲಿ ಫೇಮಸ್ ಕೂಡ ಆಗಿದ್ದ. ಬಟ್, ಇದೀಗ ಇದೇ ನಟನ ವಿರುದ್ಧ ಅವನ ಜೊತೆಗೇ ರೀಲ್ಸ್ ಮಾಡ್ತಿದ್ದ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ ವರುಣ್ ವಿರುದ್ಧ ಘನಘೋರ ಆರೋಪಗಳನ್ನ ಮಾಡಿದ್ದಾರೆ. ನನ್ನ ನಂಬಿಸಿ ಮೋಸ ಮಾಡಿದ ಅಂತಾ ಹೇಳಿರೋ ಈಕೆ ಇನ್ನೂ ಕೆಲ ಬಾಂಬ್ ಹಾಕಿದ್ದಾರೆ.
ಆರೋಪ -01
ಖಾಸಗಿ ಫೋಟೋ, ವಿಡಿಯೋ ಕಳುಹಿಸಿ ಬ್ಲ್ಯಾಕ್‌ಮೇಲ್!
ಇದು ಸೋಷಿಯಲ್ ಮೀಡಿಯಾ ಜಮಾನ ಅನ್ನೋದನ್ನ ನಿಮಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅಂತಹ ದುನಿಯಾದಲ್ಲಿ ಮೊಬೈಲ್ ಚಾರ್ಜಿಂಗ್ಗಿಂತ ಫಾಸ್ಟಾಗಿ ಲವ್ ಆಗಿಬಿಡುತ್ತೆ, ಚಾರ್ಜ್ ಡೌನ್ ಆಗೋವಷ್ಟೇ ವೇಗವಾಗಿ ಬ್ರೇಕಪ್ಪೂ ಆಗ್ಬಿಡುತ್ತೆ. ವರುಣ್ ಆರಾಧ್ಯ ಹಾಗೂ ಈ ಯುವತಿ ಲವ್ ಕೂಡ ಅಂತದ್ದೇ. ರೀಲ್ಸ್ ಮಾಡ್ತಾ ಮಾಡ್ತಾ, ಇಬ್ಬರಿಗೂ ಪ್ರೀತಿ ಶುರುವಾಗಿತ್ತು. ಅದು ನಾಲ್ಕು ವರ್ಷ ಚೆನ್ನಾಗಿಯೇ ಸಾಗಿತ್ತು. ಬಟ್, 2023ರಲ್ಲಿ ಇಬ್ಬರ ಪ್ರೀತಿ ಹಳಸಿ ಹಳಿ ತಪ್ಪಿದೆ.
ಇದನ್ನೂ ಓದಿ: EXCLUSIVE: ಮಾಜಿ ಕಾರ್ಪೊರೇಟರ್ ಮಗನ ಲವ್ ದೋಖಾ.. ಯುವತಿ ಸಾವು; ನ್ಯಾಯಕ್ಕಾಗಿ ತಾಯಿ ಕಣ್ಣೀರು
ಸೂರ್ಯ, ಬೆಳಕು, ಭೂಮಿ ಅಂತಾ ಒಟ್ಟೊಟ್ಟಿಗೆ ಹಾಡ್ತಿದ್ದವರು, ನಾನೊಂದು ತೀರ, ನೀನೊಂದು ತೀರಾ ಅಂತಾ ದೂರ ದೂರ ಆಗಿಬಿಡ್ತಾರೆ. ಬಟ್, ದೂರಾದ ಕಥೆ ಹೀಗೆ ಸಾಗ್ತಿರೋವಾಗಲೇ ಒಂದು ದಿನ ಹುಡುಗಿಗೆ ತನ್ನ ಎಕ್ಸ್ ಬಾಯ್ಫ್ರೆಂಡ್ನಿಂದ ಒಂದು ಸ್ಫೋಟಕ ಮೆಸೇಜ್ ಬರುತ್ತೆ. ಆ ಮೆಸೇಜ್ನ ನೋಡಿ ಅಕ್ಷರಶಃ ಬೆಚ್ಚಿ ಬಿದ್ದಿದ್ದಾಳೆ. ಯಾಕಂದ್ರೆ, ಮೆಸೇಜ್ನಲ್ಲಿದ್ದ ಫೋಟೋಗಳು ತನ್ನದೇ ನಗ್ನ ಫೋಟೋಗಳಾಗಿದ್ವು. ಇಬ್ಬರೂ ಖಾಸಗಿಯಾಗಿದ್ದಾಗ ಸೆರೆ ಹಿಡಿದಿದ್ದ ಹಸಿಬಿಸಿ ಪಿಕ್ಚರ್ಸ್ ಆಗಿದ್ದವು. ಅದನ್ನ ನೋಡಿ ಬೆವತಿದ್ದ ಆಕೆ, ಇದನ್ಯಾಕೆ ಈಗ ಕಳುಹಿಸಿದೆ ಅಂತಾ ವರುಣ್ಗೆ ಪ್ರಶ್ನೆ ಮಾಡಿದ್ಲಂತೆ.. ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಅಂದ್ಲಂತೆ. ಆಗ ಹಳೇ ಪ್ರೇಮಿಯಿಂದ ಅಕ್ಷರಶಃ ಧಮ್ಕಿಯ ಉತ್ತರ ಬಂದಿತ್ತು ಅಂತಾ ದೂರಿನಲ್ಲಿ ಉಲ್ಲೇಖವಾಗಿದೆ.
ಆರೋಪ-02: ಜಾಲತಾಣಕ್ಕೆ ಅಪ್ಲೋಡ್ ಮಾಡೋ ಬೆದರಿಕೆ!
ವರುಣ್ ಆರಾಧ್ಯ ಸ್ಪೂರದ್ರೂಪಿ ನಟನಾಗಿ ಸೀರಿಯಲ್‌ನಲ್ಲಿ ಹೆಸರು ಮಾಡ್ತಿದ್ದ. ಸದ್ಯಕ್ಕೆ ಒಂದೇ ಸೀರಿಯಲ್‌ನಲ್ಲಿ ಅಭಿನಯ ಮಾಡಿದ್ರೂ ಸಾಕಷ್ಟು ಫೇಮ್ ಸಿಕ್ಕಿತ್ತು. ಮತ್ತಷ್ಟು ಸೀರಿಯಲ್ಗಳಿಂದ ಆಫರ್ಸ್ ಬಂದಿತ್ತು. ಇಂತಹ ಟೈಮಲ್ಲೇ ಮಾಜಿ ಗೆಳತಿ ಸಿಡಿಸಿರೋ ಈ ಬಾಂಬ್ ವರುಣ್ ಕರಿಯರನ್ನೇ ಖತಂ ಮಾಡಿದ್ರೂ ಅಚ್ಚರಿಯಿಲ್ಲ. ಅಂದ ಹಾಗೇ, ಯಾವುದೇ ಹೆಣ್ಣು ಕೂಡ, ತಾನು ಖಾಸಗಿಯಾಗಿ ಪ್ರೇಮಿಯ ಜೊತೆಗೆ ಕಳೆದಿದ್ದ ಸಮಯದ ಫೋಟೋ ತನಗೇ ಗೊತ್ತಿಲ್ಲದಂತೆ ಸೆರೆಯಾಗಿರುತ್ತೆ ಅನ್ನೋದನ್ನ ಊಹೆಯನ್ನೂ ಮಾಡಿಕೊಂಡಿರಲ್ಲ. ಹೀಗಾಗಿಯೇ, ಆವತ್ತು ತನ್ನ ಫೋಟೋಗಳನ್ನ, ವಿಡಿಯೋಗಳನ್ನು ಕಳುಹಿಸಿದ್ದು ಯಾಕೆ ಅಂತಾ ಪ್ರಶ್ನೆ ಮಾಡಿದ್ದಳು. ಆಗ ವರುಣ್ ಕೊಟ್ಟ ಆನ್ಸರ್ ಮತ್ತಷ್ಟು ಶಾಕಿಂಗ್ ಆಗಿತ್ತಂತೆ. ನನ್ನ ಬಳಿ ನಿನ್ನ ಇನ್ನಷ್ಟು ಖಾಸಗಿ ವಿಡಿಯೋಗಳಿವೆ. ಅವುಗಳನ್ನೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತೀನಿ. ಅಂತಾ ಬ್ಲ್ಯಾಕ್‌ಮೇಲ್ ವರುಣ್ ಬ್ಲ್ಯಾಕ್‌ಮೇಲ್ ಮಾಡಿದ್ನಂತೆ.
‘ವಾಟ್ಸಾಪ್‌ಗೆ ಖಾಸಗಿ ವಿಡಿಯೋ’
10 ಸೆಪ್ಟೆಂಬರ್ 2023ರಂದು ಆತನ ವಾಟ್ಸಪ್ ನಂಬರ್‌ನಿಂದ ನನ್ನ ವಾಟ್ಸಾಪ್ ನಂಬರ್‌ಗೆ ನನ್ನದೇ ಖಾಸಗಿ ಫೋಟೋ ಬಂದಿದೆ. ಅದನ್ನು ನೋಡಿ ನಾನು ಶಾಕ್ ಆಗಿದ್ದೇನೆ. ಈ ರೀತಿ ಯಾಕೆ ಕಳುಹಿಸುತ್ತಿದ್ದೀಯಾ? ಅಂತಾ ನಾನು ಪ್ರಶ್ನೆ ಮಾಡಿದಾಗ ಆತನು ತನ್ನ ಹತ್ತಿರ ಇನ್ನೂ ಹೆಚ್ಚಿನ ಖಾಸಗಿ ಫೋಟೋ ಮತ್ತು ವಿಡಿಯೋಗಳಿವೆ. ಅವುಗಳನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಅಂತಾ ಬೆದರಿಕೆ ಹಾಕಿದ್ದಾನೆ.
-ಸಂತ್ರಸ್ತೆ
ವರುಣ್ ಕಳುಹಿಸಿದ್ದ ವಿಡಿಯೋಗಳು, ಫೋಟೋಗಳು ಮಾಜಿ ಗೆಳತಿಗೆ ಅಕ್ಷರಶಃ ಮಾನಸಿಕ ಹಿಂಸೆ ನೀಡಿದ್ದವು. ಅವಳ ಸ್ಥಾನದಲ್ಲಿ ಯಾವುದೇ ಹೆಣ್ಣು ಮಗು ಇದ್ದಿದ್ರೂ ಅದನ್ನ ಸಹಿಸಿಕೊಳ್ಳೋದಕ್ಕೆ ಸಾಧ್ಯವೇ ಇರ್ಲಿಲ್ಲ ಅಂದುಕೊಳ್ಳೋಣ. ಆದ್ರೆ, ಇಲ್ಲಿ ವರುಣ್ ಬ್ರೇಕಪ್ ಆದ್ಮೇಲೂ ಮಾಜಿ ಗೆಳತಿಗೆ ಆ ರೀತಿಯ ಫೋಟೋಗಳನ್ನ ಕಳಿಸೋ ಅವಶ್ಯಕಥೆ ಏನಿತ್ತು, ಅನ್ನೋದು ಇನ್ನೂ ಬಯಲಾಗಿಲ್ಲ. ಅದು ಪೊಲೀಸರ ವಿಚಾರಣೆಯಲ್ಲಿಯೇ ಬಯಲಾಗಬೇಕಿದೆ. ಅಷ್ಟಕ್ಕೂ, ಇಂತಹ ಫೋಟೋಗಳನ್ನ ಕಳುಹಿಸಿದ್ಮೇಲೂ ಅದೇಗೆ ಈಕೆ ಒಂದು ವರ್ಷದವರೆಗೂ ಕಂಪ್ಲೇಂಟ್ ಕೊಡದೇ ಸುಮ್ಮನ್ನಿದ್ಲು ಎನ್ನುವ ಪ್ರಶ್ನೆಯೂ ಹುಟ್ಟುತ್ತೆ.
ಆರೋಪ-03: ಮದುವೆಯಾದರೆ ಸಾಯಿಸಿ ಬಿಡ್ತೀನಿ!
ವರುಣ್ ವಿರುದ್ಧ ಮಾಜಿ ಪ್ರೇಯಸಿ ನೀಡಿರೋ ದೂರಿನಲ್ಲಿ ನಟನ ವಿರುದ್ಧ ಗಂಭೀರ ಆರೋಪಿಗಳಿವೆ. ಕೇವಲ ಖಾಸಗಿ ವಿಡಿಯೋಗಳನ್ನ ಲೀಕ್ ಮಾಡ್ತೀನಿ. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತೀನಿ ಅಂತಾ ಬೆದರಿಕೆ ಹಾಕಿದ್ದು ಅಷ್ಟೇ ಅಲ್ಲ, ನೀನು ಮದುವೆಯಾದ್ರೆ ಹುಷಾರ್ ಅಂತಾನೂ ಅವನು ಮೆಸೇಜ್ ಮಾಡಿದ್ದನಂತೆ. ನಿನ್ನನ್ನ ಮಾತ್ರ ಅಲ್ಲ, ನೀನು ಮದುವೆ ಆಗೋ ಹುಡುಗನನ್ನೂ ಸಾಯಿಸಿ ಬಿಡ್ತೀನಿ ಅಂತಾ ಜೀವ ಬೆದರಿಕೆ ಹಾಕಿದ್ನಂತೆ. ಇದಕ್ಕೆ ಹೆದರಿ ಒಂದು ವರ್ಷದವರೆಗೂ ಪೊಲೀಸರಿಗೆ ಯಾವುದೇ ದೂರು ಕೊಡಲಿಲ್ವಂತೆ.
ಇದನ್ನೂ ಓದಿ: ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡಿದ್ದ ಸೀರಿಯಲ್ ನಟ ಕೇಸ್ಗೆ ಬಿಗ್ ಟ್ವಿಸ್ಟ್; ಅಸಲಿಗೆ ಆಗಿದ್ದೇನು?
‘ಪ್ರಾಣ ಬೆದರಿಕೆಗೆ ಹೆದರಿದ್ದೇನೆ!’
ಯಾಕೆ ಫೋಟೋ ವಿಡಿಯೋ ಕಳುಹಿಸಿದ್ದು ಅಂತಾ ಕೇಳಿದಾಗ ನನಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಆಶೀಲವಾಗಿ ನನ್ನ ದೇಹದ ಅಂಗಾಂಗಳ ಬಗ್ಗೆ ನಿಂದಿಸಿದ್ದಾನೆ. ಮುಂದೆ ಮದುವೆಯಾದಲ್ಲಿ ನಿನ್ನನ್ನ ಮತ್ತು ಆತನನ್ನು ಸಾಯಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಮೇಲಿನ ಎಲ್ಲಾ ಘಟನೆಯು ಮೇ 2019ರಿಂದ ಸೆಪ್ಟೆಂಬರ್ 2023ರವರೆಗೆ ನಡೆದಿರುತ್ತದೆ. ಆರೋಪಿಯಾದ ವರುಣ್ ಆರಾಧ್ಯನ ಪ್ರಾಣ ಬೆದರಿಕೆಗೆ ಹೆದರಿ ಇಲ್ಲಿವರೆಗೆ ದೂರು ನೀಡದೇ ಈ ದಿನ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ. ಆದ ಕಾರಣ ವರುಣ್ ಆರಾಧ್ಯನ ಮೇಲೆ ಕಾನೂನು ಅನುಸಾರವಾಗಿ ಕ್ರಮಕೈಗೊಳ್ಳಬೇಕು.
-ಸಂತ್ರಸ್ತೆ
ಇದಿಷ್ಟು ವರುಣ್ ಆರಾಧ್ಯನ ವಿರುದ್ಧ ಸಿಡಿದೆದ್ದಿರುವ ಮಾಜಿ ಗೆಳತಿ ಠಾಣೆ ಮೆಟ್ಟಿಲೇರಿರುವ ಕಥೆ. ಅಷ್ಟಕ್ಕೂ ಆಕೆ ಮಾಡಿರೋ ಗಂಭೀರ ಆರೋಪಗಳನ್ನ ನೋಡಿದ್ರೆ, ವರುಣ್ ಲಾಕ್ ಆಗೇ ಆಗ್ತಾನೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ