newsfirstkannada.com

ದಲಿತರ ಆಸ್ತಿ ಕಬಳಿಕೆ; ಸಚಿವ ಸುಧಾಕರ್​​ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದ ಸರ್ಕಾರ; ಏನಿದು ಸ್ಟೋರಿ?

Share :

13-09-2023

    ದಲಿತರ ಆಸ್ತಿ ಕಬಳಿಸಿ ದರ್ಪ ತೋರಿದ್ರಾ ಸಚಿವ ಸುಧಾಕರ್​​?

    ಸಚಿವ ಡಿ. ಸುಧಾಕರ್​ ವಿರುದ್ಧ ಲೋಕಾಯುಕ್ತದಲ್ಲಿ ದೂರು..!

    ನ್ಯಾಯಕ್ಕಾಗಿ ನ್ಯೂಸ್​ಫಸ್ಟ್​​ನಲ್ಲಿ ಕಣ್ಣೀರಿಟ್ಟ ಇಡೀ ಕುಟುಂಬ

ಬೆಂಗಳೂರು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದಲಿತ ಕುಟುಂಬದ ವಿರುದ್ಧ ರಾಜ್ಯ ಸರ್ಕಾರದ ಸಚಿವ ಡಿ. ಸುಧಾಕರ್​ ದೌರ್ಜನ್ಯದ ಬಗ್ಗೆ ನ್ಯೂಸ್​ಫಸ್ಟ್​ ಸುದ್ದಿ ಬ್ರೇಕ್‌ ಮಾಡಿತ್ತು. ದಲಿತರ ಆಸ್ತಿ ಕಬಳಿಸಿದ ಆರೋಪದ ಜೊತೆಗೆ ಪುಡಿರೌಡಿಗಳನ್ನ ಬಿಟ್ಟು ದಾಂಧಲೆ ನಡೆಸಿದ ಆರೋಪದಲ್ಲಿ ಎಫ್‌ಐಆರ್‌ ಆಗಿದೆ. ಆದ್ರೆ ನೊಂದ ಕುಟುಂಬಕ್ಕೆ ಮಾತ್ರ ಇದುವರೆಗೂ ನ್ಯಾಯವೇ ಸಿಕ್ಕಿಲ್ಲ.

ದಲಿತರ ಆಸ್ತಿ ಕಬಳಿಸಿ ದರ್ಪ ತೋರಿದ್ರಾ ಸಚಿವ ಡಿ.ಸುಧಾಕರ್​?

ಈ ಕುಟುಂಬದ ಕಣ್ಣೀರ ಕಥೆಯನ್ನು ಕೇಳ್ತಿದ್ರೆ, ನಿಜಕ್ಕೂ ಆಘಾತ ಆಗುತ್ತೆ. ನ್ಯಾಯ ಕೊಡಿಸುವ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ದರ್ಪ ತೋರಿ ಅನ್ಯಾಯ ಮಾಡಿದ್ರೆ ಹೇಗೆ ಹೇಳಿ. ಇಲ್ಲೂ ಕೂಡ ಅದೇ ಆಗಿರೋದು. ಡಿ.ಸುಧಾಕರ್​ ಅವರು, ಸಚಿವರಾದ ಬಳಿಕ, ಅನ್ಯಾಯದ ಮಾರ್ಗದಲ್ಲಿ ದಲಿತರ ಆಸ್ತಿ ಕೈವಶ ಮಾಡಿಕೊಳ್ಳಲು ಪುಡಿ ರೌಡಿಗಳನ್ನು ಬಿಟ್ಟು ದಾಂಧಲೆ ಮಾಡಿಸಿದ್ದಾರೆ ಅನ್ನೋದು ಈ ಕುಟುಂಬದ ಆರೋಪ.

ಯಲಹಂಕ ಗ್ರಾಮದ ಸರ್ವೆ ನಂ108/1ರಲ್ಲಿ ಸುಬ್ಬಮ್ಮ ಕುಟುಂಬಕ್ಕೆ ಸೇರಿದ ಜಾಗವಿದೆ. ಸೆವೆನ್ ಹಿಲ್ಸ್ ಡೆವಲಪರ್ಸ್ & ಟ್ರೇಡರ್ಸ್ ಪಾಲುದಾರ ಡಿ.ಸುಧಾಕರ್ ಅವರು ತಮ್ಮ ಕುಟುಂಬದವರಿಂದ ಮೋಸದಿಂದ ಕ್ರಯ ಮಾಡಿಸಿಕೊಂಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಕೋರ್ಟ್​ನಲ್ಲಿ ಕೇಸ್ ನಡೆಯುತ್ತಿದ್ದರು, ಮಂತ್ರಿಯಾದ ಬಳಿಕ ತನ್ನ ಪ್ರಭಾವ ಬಳಸಿಕೊಂಡು, ಜನರನ್ನು ಕಳಿಸಿ ದೌರ್ಜನ್ಯ ನಡೆಸಿದ್ದಾರೆ ಅನ್ನೋದು ಇವರ ಆರೋಪ. ಈ ಸಂಬಂಧ ಕಳೆದ ಶನಿವಾರ, ಯಲಹಂಕ ಠಾಣೆಯಲ್ಲಿ ಸಚಿವ ಡಿ. ಸುಧಾಕರ್​ ವಿರುದ್ಧ ದೌರ್ಜನ್ಯ, ವಂಚನೆ ಮತ್ತು ಹಲ್ಲೆ ಆರೋಪದಡಿ ಅಟ್ರಾಸಿಟಿ ಆ್ಯಕ್ಟ್ ಅಡಿ ಎಫ್​ಐಆರ್​ ಆಗಿತ್ತು. ಸಚಿವರ ಮೇಲೆ ಎಫ್​ಐಆರ್ ದಾಖಲಾದ ಈ ಸ್ಟೋರಿಯನ್ನು ನಿಮ್ಮ ನ್ಯೂಸ್​ಫಸ್ಟ್​ ಸುದ್ದಿವಾಹಿನಿ ಆಚೆ ಮೊನ್ನೆ ಭಾನುವಾರ ಎಕ್ಸ್​ಪೋಸ್ಟ್​ ಮಾಡಿತ್ತು. ಆದ್ರೆ ಸಚಿವ ಸುಧಾಕರ್​ ವಿರುದ್ಧ ಜಾಮೀನು ರಹಿತ ಪ್ರಕರಣವಾದ್ರೂ ಪೊಲೀಸರು ಮಾತ್ರ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ನ್ಯಾಯಕ್ಕಾಗಿ ಸುಬ್ಬಮ್ಮ ಕುಟುಂಬ ಜೀವಭಯದಲ್ಲೇ ಅಲೆದಾಡುತ್ತಿದೆ. ಈಗ ನ್ಯೂಸ್​ಫಸ್ಟ್​ ಸ್ಟುಡಿಯೋದಲ್ಲೂ ಕೂಡ ನಮಗಾಗಿರುವ ಅನ್ಯಾಯವನ್ನು ಹೇಳಿಕೊಂಡು ಕಣ್ಣೀರಿಟ್ಟಿದೆ.

ತಮ್ಮ ಮೇಲಿನ ಆರೋಪಕ್ಕೆ ಉತ್ತರಿಸಲಾಗದೇ ಪರದಾಟ

ಸಚಿವ ಡಿ.ಸುಧಾಕರ್​ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ತಮ್ಮ ವಿರುದ್ಧ ಆರೋಪಗಳ ಬಗ್ಗೆ ಸಚಿವ ಸುಧಾಕರ್​ ಅವರ ಸ್ಪಷ್ಟನೆಯನ್ನು ಮುಂದಾಯ್ತು. ಈ ವೇಳೆ ನೊಂದ ಕುಟುಂಬದ ಆರೋಪಗಳಿಗೆ ಉತ್ತರಿಸಲಾಗದೇ ಸಚಿವ ಡಿ.ಸುಧಾಕರ್​ ಲೈವ್​ ಕಾರ್ಯಕ್ರಮದ ಮಧ್ಯೆಯೇ ಎದ್ದು ಹೋದ್ರು..

ಸಚಿವ ಡಿ. ಸುಧಾಕರ್​ ವಿರುದ್ಧ ಲೋಕಾಯುಕ್ತಕ್ಕೆ ದೂರು

ದಲಿತರ ಮೇಲೆ ಸಚಿವ ಡಿ. ಸುಧಾಕರ್ ದೌರ್ಜನ್ಯ ಪ್ರಕರಣ ಇದೀಗ ಲೋಕಾಯುಕ್ತ ಅಂಗಳವನ್ನು ತಲುಪಿದೆ. ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಜಮೀನು ಪರಭಾರೆ ಮಾಡಿದ್ದಾರೆ. ಹೀಗಾಗಿ ಡಿ.ಸುಧಾಕರ್ ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಕಾಯ್ದೆಯಡಿ ತನಿಖೆ ನಡೆಸಲು ನೊಂದ ಸುಬ್ಬಮ್ಮ ಕುಟುಂಬ ಲೋಕಾಯುಕ್ತಕ್ಕೆ ದೂರು ನೀಡಿದೆ.

ಒಟ್ಟಾರೆ ಸುಬ್ಬಮ್ಮ ಮತ್ತು ಮಕ್ಕಳು ಸದ್ಯ ಜೀವ ಭಯದಲ್ಲಿದ್ದು, ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರ ಬಳಿ ಅಂಗಲಾಚುತ್ತಿದ್ದಾರೆ. ತನ್ನದೇ ಸಂಪುಟದ ಸಚಿವರೊಬ್ಬರಿಂದ ನಡೆದಿರುವ ಈ ಪ್ರಕರಣದಲ್ಲಿ ಸರ್ಕಾರ ಇವರಿಗೆ ನ್ಯಾಯ ಕೊಡಿಸುತ್ತಾ ಅನ್ನೋದೇ ಸದ್ಯದ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಲಿತರ ಆಸ್ತಿ ಕಬಳಿಕೆ; ಸಚಿವ ಸುಧಾಕರ್​​ ವಿರುದ್ಧ ಇನ್ನೂ ಕ್ರಮ ಕೈಗೊಳ್ಳದ ಸರ್ಕಾರ; ಏನಿದು ಸ್ಟೋರಿ?

https://newsfirstlive.com/wp-content/uploads/2023/09/Minister-Sudhakar-2.jpg

Load More