newsfirstkannada.com

ಕೇವಲ ಎರಡು ವಾರದಲ್ಲಿ 10ಕ್ಕೂ ಹೆಚ್ಚು ಮಕ್ಕಳು ಸಾವು? ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಂದು ಕೂಸು ಬಲಿ?

Share :

14-09-2023

  ಇಂದಿರಾಗಾಂಧಿ ಆಸ್ಪತ್ರೆಯ ವೈದ್ಯರ ಮೇಲೆ ಆರೋಪ

  ‘ಸರಿಯಾಗಿ ಚಿಕಿತ್ಸೆ ಕೊಡ್ತಿಲ್ಲ.. ಬಡವರಿಗೆ ಅಲ್ಲಿ ಬೆಲೆ ಇಲ್ಲ’

  ಮಗು ಕಳೆದುಕೊಂಡ ಪೋಷಕರಿಂದ ಗಂಭೀರ ಆರೋಪ

ಬೆಂಗಳೂರು: ಎಷ್ಟು ಮುದ್ದಾಗಿದೆ ಈ ಕಂದಮ್ಮ. ಆದ್ರೆ ನೀನ್ಯಾಕೆ ನಿನ್ನ ಹೆತ್ತವರ ಕನಸು ಕಮರಿಸಿಬಿಟ್ಟೆ. ಆಸೆ ನಶಿಸಿ ಬಿಟ್ಟೆ. ಮನೆಯಲ್ಲಿ ಸಂತಸದ ಹೂವಾಗಿ ಬಂದು ಅರಳುವ ಮುನ್ನವೇ ಮುದುಡಿ ಹೋದೆ ಅಂತ ಪೋಷಕರು ಪ್ರಶ್ನೆ ಕೇಳ್ತಿದ್ದಾರೆ. ಬದುಕಿದ್ದರೆ ಈ ಪ್ರಶ್ನೆಗೆಲ್ಲಾ ಉತ್ತರಕೊಡ್ತಿತ್ತೇನೋ ಆದ್ರೆ 2 ತಿಂಗಳ ಈ ಹಸುಗೂಸು ಜಗತ್ತನ್ನ ಸರಿಯಾಗಿ ನೋಡೋ ಮುನ್ನವೇ ಕಣ್ಣು ಮುಚ್ಚಿದೆ‌.

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಎರಡು ತಿಂಗಳ ಕೂಸು..?

ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ.. ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ಇದು. ರಾಜ್ಯ ಹಾಗೂ ಅನ್ಯ ರಾಜ್ಯದ ನೂರಾರು ಮಂದಿ‌ ನಿತ್ಯ ಈ ಆಸ್ಪತ್ರೆಗೆ ಬರ್ತಾರೆ. ಆದ್ರೆ ಇದೇ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಹೆಸರೇ ಇಡದ ಹಸುಗೂಸೊಂದು ಬಲಿಯಾಗಿದೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.

ಆರಂಭದಲ್ಲಿ ಮಗು ನಾರ್ಮಲ್ ಅಂದಿದ್ದ ವೈದ್ಯರು, ನಂತರ ಮಗುವಿಗೆ ಸೀರಿಯಸ್ ಅಂದ್ರಂತೆ. ಈ ವೇಳೆ ಮಗುವಿನ ಮುಖ ನೋಡಲು ಒಮ್ಮೆ ಬಿಡಿ ಎಂದು ಡಾಕ್ಟರ್ ಕಾಲು ಹಿಡಿದ್ರೂ ಬೇಡ್ಕೊಂಡ್ರೂ ಕೂಡ ವೈದ್ಯರ ಮನಸು ಕರಗಿಲ್ಲ. ಹೆತ್ತ ತಾಯಿಗೂ ಮಗುವನ್ನ ತೋರಿಸಿಲ್ಲ ಅನ್ನೋ ಆರೋಪ ಇವರದ್ದು. ಇದೆಲ್ಲಾ ಒಂದ್​ ಕಡೆಯಾದ್ರೆ ಇಲ್ಲಿ ಮತ್ತೊಂದು ಶಾಕಿಂಗ್ ವಿಚಾರವೂ ಇದೆ.

ಬರೋಬ್ಬರಿ 12 ಮಕ್ಕಳು ಸಾವು

ಕಳೆದ ಎರಡೇ ವಾರದಲ್ಲಿ ಇದೇ ಆಸ್ಪತ್ರೆಯ ಒಂದೇ ಐಸಿಯುನಲ್ಲಿಯೇ ಬರೋಬ್ಬರಿ 12 ಮಕ್ಕಳು ಸಾವನ್ನಪ್ಪಿದ್ದಾರೆ ಅಂತ ಇವರು ಆರೋಪಿಸಿದ್ದಾರೆ. ಆದ್ರೆ ಈ ಬಗ್ಗೆ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕರು ಬೇರೇನೇ ಹೇಳ್ತಿದ್ದಾರೆ.

ಇದನ್ನೂ ಓದಿ: BREAKING: ಬಾಲಿವುಡ್​​ ಖ್ಯಾತ ನಟ ರಿಯೊ ಕಪಾಡಿಯಾ ನಿಧನ

ಒಟ್ಟಿನಲ್ಲಿ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಮೇಲೆ ಕೇಳಿ ಬಂದಿರುವ ಆರೋಪ ನಿಜಕ್ಕೂ ಆಘಾತಕಾರಿ. ಆದಷ್ಟು ಬೇಗ ಆರೋಗ್ಯ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆಸ್ಪತ್ರೆಯ ಅಂತರಾಳದಲ್ಲಿ ಅಡಗಿ ಕೂತಿದೆ ಎನ್ನಲಾದ ರಹಸ್ಯವನ್ನ ಹೊರ ತರುವ ಕೆಲಸ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇವಲ ಎರಡು ವಾರದಲ್ಲಿ 10ಕ್ಕೂ ಹೆಚ್ಚು ಮಕ್ಕಳು ಸಾವು? ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಂದು ಕೂಸು ಬಲಿ?

https://newsfirstlive.com/wp-content/uploads/2023/09/Rajiv-Gandhi-Hospital.jpg

Load More