ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿತಾ ಧರ್ಮದ ಅಮಲು?
ಮಕ್ಕಳಿಗೆ ಇಸ್ಲಾಂ ಧಾರ್ಮಿಕ ಶಿಕ್ಷಣ ನೀಡ್ತಿರುವ ಆರೋಪ
ಅನುಮತಿಯಿಲ್ಲದೆ ಅನಾಥಾಶ್ರಮದಲ್ಲಿ ಇಸ್ಲಾಂ ಧಾರ್ಮಿಕ ಶಿಕ್ಷಣ!
ಬೆಂಗಳೂರು: ಶಿಕ್ಷಣ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು.. ಎಲ್ಲಾ ಮಕ್ಕಳು ಅಕ್ಷರಜ್ಞಾನ ಪಡೆಯಲು ಅರ್ಹರು. ಹಾಗಂತ ಶಿಕ್ಷಣದ ನೆಪದಲ್ಲಿ ಅನುಮತಿ ಇಲ್ಲದೇ ಧಾರ್ಮಿಕ ಶಿಕ್ಷಣ ನೀಡೋದು ಕಾನೂನು ಬಾಹಿರ.. ಇದೀಗ ಬೆಂಗಳೂರಿನ ಅನಾಥಾಶ್ರಮದ ವಿರುದ್ಧ ಇಂಥಾ ಆರೋಪ ಕೇಳಿಬಂದಿದೆ. ಅನುಮತಿ ಇಲ್ಲದೇ ಇಸ್ಲಾಂ ಧಾರ್ಮಿಕ ಶಿಕ್ಷಣ ನೀಡ್ತಿರೋದು ಮೇಲ್ನೋಟಕ್ಕೆ ದೃಢಪಟ್ಟಿದೆ.
ಸಿಲಿಕಾನ್ ಸಿಟಿಯ ಅನಾಥಾಶ್ರಮದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಿರೋ ಆರೋಪ ಕೇಳಿಬಂದಿದೆ. ಇಸ್ಲಾಂ ಧಾರ್ಮಿಕ ಶಿಕ್ಷಣ ನೀಡುತ್ತಾ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಅನುಮತಿಯಿಲ್ಲದೆ ಅನಾಥಾಶ್ರಮದಲ್ಲಿ ಇಸ್ಲಾಂ ಧಾರ್ಮಿಕ ಶಿಕ್ಷಣ
ಬೆಂಗಳೂರಿನ ಸೈಯದ್ ನಗರದಲ್ಲಿರೋ ದಾರುಲ್ ಉಲೂಮ್ ಸಾಧಿಯಾ ಅನಾಥಾಶ್ರಮದಲ್ಲಿ ಅನುಮತಿ ಇಲ್ಲದೇ ಇಸ್ಲಾಂ ಧಾರ್ಮಿಕ ಶಿಕ್ಷಣ ಬೋಧಿಸುತ್ತಿರೋದು ಬಯಲಾಗಿದೆ. ರಾಷ್ಟ್ರೀಯ ಮಕ್ಕಳ ಆಯೋಗದ ಅಧ್ಯಕ್ಷರ ಭೇಟಿ ವೇಳೆ ಇಸ್ಲಾಂ ಅನಾಥಾಶ್ರಮದ ಅಸಲಿಯತ್ತು ಬಯಲಾಗಿದೆ. ಅನಾಥ ಮಕ್ಕಳನ್ನ ಶಾಲೆಗೆ ಕಳುಹಿಸದೇ ಧಾರ್ಮಿಕ ಶಿಕ್ಷಣದ ಹೆಸರಲ್ಲಿ ಅವರ ಭವಿಷ್ಯಕ್ಕೆ ಮಸಿ ಬಳಿಯಲಾಗ್ತಿರೋ ಕಹಿ ಸತ್ಯ ಬಹಿರಂಗವಾಗಿದೆ. ಅಲ್ಲದೇ ಅನಾಥಾಶ್ರಮದ ಅವ್ಯವಸ್ಥೆಯ ಬಗ್ಗೆಯೂ ರಾಷ್ಟ್ರೀಯ ಮಕ್ಕಳ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೋ ಕಿಡಿಕಾರಿದ್ದಾರೆ.
‘ತಾಲಿಬಾನ್ ರೀತಿ ಜೀವನ’
ಅನಾಥ ಮಕ್ಕಳನ್ನ ಶಾಲೆಗೆ ಕಳುಹಿಸದೇ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಈ ಆಶ್ರಮದಲ್ಲಿ ಮಕ್ಕಳು ತಾಲೀಬಾನ್ ರೀತಿ ಜೀವನ ನಡೆಸ್ತಿದ್ದಾರೆ. ಮೂಲ ಸೌಕರ್ಯವಿಲ್ಲದೇ ಕೊಠಡಿಯಲ್ಲಿ 200 ಮಕ್ಕಳ ವಾಸ್ತವ್ಯ ಹೂಡಿದ್ದಾರೆ. ನಾಲ್ಕು ಮಕ್ಕಳಿರಬೇಕಿದ್ದ ಕೊಠಡಿಯಲ್ಲಿ 8 ಮಕ್ಕಳು ವಾಸಿಸುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಕಾರಿಡಾರ್ನಲ್ಲೇ ಮಕ್ಕಳು ಮಲಗಬೇಕಾದ ಸ್ಥಿತಿ ಇದೆ.. ಅಲ್ಲದೇ ಕೊಠಡಿಯಲ್ಲಿ ಗಾಳಿ, ಬೆಳಕು ಇಲ್ಲ.. ಮಕ್ಕಳನ್ನ ಆಶ್ರಮದ ಹೊರಗಡೆ ಕಳಿಸೋದು ಇಲ್ಲ. ಆಟವಾಡಲು ಸಾಮಗ್ರಿಯಾಗಲಿ, ನೋಡಲು ಟಿವಿಯೂ ಇಲ್ಲ.
-ಪ್ರಿಯಾಂಕ್ ಕಾನೂಂಗೊ, ಅಧ್ಯಕ್ಷ, ರಾ.ಮ.ಆಯೋಗ
ಇನ್ನೂ ಅನಾಥಾಶ್ರಮದಲ್ಲಿರೋ ಮಕ್ಕಳು ಬರೀ ನೆಲದ ಮೇಲ ಮಲಗಿರೋ ದೃಶ್ಯ ಎಂಥವರ ಕರುಳು ಹಿಂಡುವಂತಿದೆ.. ಇದನ್ನೆಲ್ಲಾ ಕಣ್ಣಾರೆ ನೋಡಿದ ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಗ್ ಕಾನೂಂಗೊ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇದೆಲ್ಲಾ ರಾಜಕೀಯ ಸೃಷ್ಟಿ ಎಂದ ಡಿಸಿಎಂ ಡಿಕೆಶಿ
ಅನುಮತಿ ಇಲ್ಲದೇ ಇಸ್ಲಾಂ ಧಾರ್ಮಿಕ ಶಿಕ್ಷಣ ನೀಡ್ತಿರೋ ಆರೋಪಕ್ಕೆ ಡಿಸಿಎಂ ಡಿಕೆಶಿವಕುಮಾರ್, ಇದೆಲ್ಲಾ ಎಲೆಕ್ಷನ್ ವೇಳೆ ಹೀಗೆಲ್ಲಾ ರಾಜಕೀಯವಾಗಿ ಸೃಷ್ಟಿ ಮಾಡ್ತಿದ್ದಾರೆ ಎಂದಿದ್ದಾರೆ. ಇತ್ತ ಅನಾಥಾಶ್ರಮದ ವಿರುದ್ಧ ಕ್ರಮ ಕೈಗೊಳ್ತೇವೆ ಅಂತ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಒಟ್ಟಾರೆ, ಮಕ್ಕಳಿಗೆ ಶಿಕ್ಷಣ ನೀಡದೇ ಇಸ್ಲಾಂ ಧಾರ್ಮಿಕ ಶಿಕ್ಷಣ ನೀಡೋದು ನಿಜಕ್ಕೂ ಕಾನೂನು ಬಾಹಿರ. ಸರ್ಕಾರ ಈ ಕೂಡಲೇ ಎಚ್ಚೆತ್ತು ಮಕ್ಕಳನ್ನ ಅನಧಿಕೃತ ಬಂಧನದಿಂದ ಬಿಡುಗಡೆಗೊಳಿಸಬೇಕಿದೆ. ಅವರ ಭವಿಷ್ಯವನ್ನ ಉಜ್ವಲಗೊಳಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ