newsfirstkannada.com

ಹೆಂಡತಿ ಪ್ರೆಗ್ನೆಂಟಾದ್ರೂ ದಿನ ಕಾಲ್ ಕಾಲಲ್ಲೇ ಒದೆಯುತ್ತಿದ್ದ.. ವರ್ತೂರು ಸಂತೋಷ್​ ಮೇಲೆ ಆರೋಪ!

Share :

14-11-2023

    ಬಿಗ್​ಬಾಸ್​ ಸ್ಪರ್ಧಿ ವರ್ತೂರು ಸಂತೋಷ್​ ಮೇಲೆ ಗಂಭೀರ ಆರೋಪ

    ವರ್ತೂರು ಸಂತೋಷ್​​ ವಿರುದ್ಧ ಮಗಳು ಕೊಟ್ಟ ಮಾವ ಕೆಂಡಾಮಂಡಲ

    ಹೆಂಡತಿ ಪ್ರೆಗ್ನೆಂಟ್​ ಆದ್ರೂ ದಿನಾಲೂ ಹೊಡೆಯುತ್ತಿದ್ದ ಎಂದು ಆಕ್ರೋಶ

ಇತ್ತೀಚೆಗೆ ಹುಲಿ ಉಗುರು ಪೆಂಡೆಂಟ್​​ ಧರಿಸಿದ್ದ ಆರೋಪದ ಮೇರೆಗೆ ಬಿಗ್​​ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧಿಸಲಾಗಿತ್ತು. ಬಳಿಕ ಷರತ್ತುಬದ್ಧ ಜಾಮೀನು ಮೇಲೆ ಮತ್ತೆ ವರ್ತೂರು ಸಂತೋಷ್​​ ಬಿಗ್​ಬಾಸ್​​ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಈ ಮಧ್ಯೆ ತನ್ನ ಮದುವೆ ವಿಚಾರ ಬಹಿರಂಗಗೊಂಡಿದೆ.

ಹೌದು, ವರ್ತೂರು ಸಂತೋಷ್​ ಮದುವೆ ಬಗ್ಗೆ ಮಗಳನ್ನು ಕೊಟ್ಟಿದ್ದ ಮಾವ ಸೋಮನಾಥ್​​ ನ್ಯೂಸ್​ಫಸ್ಟ್​​ ಜತೆ ಎಕ್ಸ್​​ಕ್ಲೂಸಿವ್​​ ಆಗಿ ಮಾತಾಡಿದ್ದಾರೆ. ನನಗೆ ಮದುವೆ ಆಗಿಲ್ಲ ಎಂದು ವರ್ತೂರು ಸಂತೋಷ್​​ ಬಿಗ್​​ಬಾಸ್​​ ಮನೆಯಲ್ಲಿ ಸುಳ್ಳು ಹೇಳಿದ್ದಾರೆ. ಆತನಿಗೆ ಮದುವೆ ಆಗಿದ್ದು, ಮಗು ಕೂಡ ಇದ್ದಾನೆ ಎಂದಿದ್ದಾರೆ.

ಇನ್ನೂ, ಆತ ಒಬ್ಬ ಸುಳ್ಳುಗಾರ. ನನ್ನ ಮಗಳನ್ನು ಪ್ರತಿದಿನ ಹೊಡೆಯುತ್ತಿದ್ದ. ದೊಡ್ಡವರಿಗೆ ತಿಳಿಸಿ ನನ್ನ ಮಗಳನ್ನ ತವರು ಮನೆಗೆ ಕರೆದುಕೊಂಡು ಬಂದ್ವಿ. ದೊಡ್ಡವರಿಗೆಲ್ಲ ತಿಳಿಸಿದ್ದಕ್ಕೆ ನಿಮ್ಮ ಮನೆಗೆ ಕರೆದುಕೊಂಡು ಹೋಗ್ರಿ ಅಂದ್ರು. ಇವಾಗ ಒಂದು ಹೆಣ್ಣು ಮಗು ಆಗಿದೆ. ಪ್ರೆಗ್ನೆಂಟ್ ಆಗಿದ್ದ ನನ್ನ ಮಗಳನ್ನ ಹೊಡೆಯುತ್ತಿದ್ದ ನಾವಿದನ್ನ ನೋಡಿಕೊಂಡು ಇರಬೇಕಿತ್ತಾ? ಎಂದರು.

ನನ್ನ ಮಗಳನ್ನು ಕಾಲು ಒದೆಯುತ್ತಿದ್ದ ಎಂದ ಸೋಮನಾಥ್​​

ಅವರ ಮನೆಯವರು ಕಂಪ್ಲೆಂಟ್ ಕೊಡಬೇಡಿ ಅಂದಿದ್ರು. ಬೇಡ ಅಂತೇಳಿ ನಾವು ಮಗಳನ್ನ ಕರೆದುಕೊಂಡು ಬಂದ್ವಿ. ನಮ್ಮ ಮಗಳ ಕುತ್ತಿಗೆಗೆ ಚಾಕು ಇಟ್ಟಿದ್ದರು ಸಂತೋಷ್. ಮಗಳನ್ನ ತವರಿಗೆ ಕರೆದುಕೊಂಡು ಬಂದು ಎರಡು ವರ್ಷ ಆಯ್ತು. ಇದುವರೆಗೂ ಹೆಂಡ್ತಿ ಮಗಳನ್ನ ನೋಡಲಿಕ್ಕೆ ಬಂದಿಲ್ಲ. ಬಿಗ್ ಬಾಸ್ ಹೋದ್ಮೇಲೆ ಗೊತ್ತಾಗ್ತಿದೆ ಬೇರೆ ಮದುವೆ ಆಗ್ತಾನಂತೆ ಅಂತ. 12 ಸಾವಿರ ಜನ ಮದುವೆ ರಿಸೆಪ್ಷನ್​​ಗೆ ಬಂದಿದ್ರು. MSC ಮಾಡಿರುವ ನನ್ನ ಮಗಳನ್ನ ಮದುವೆ ಮಾಡಿ ಕೊಟ್ಟಿದ್ದು. ಮಣ್ಣಲ್ಲಿ ಕಾಲು ಪಾದ ಇಟ್ಟಿರಲಿಲ್ಲ ನನ್ನ ಮಗಳನ್ನ ಹಾಗೇ ಸಾಕಿದ್ದೆ. ಅಂತ ನನ್ನ ಮಗಳನ್ನ ಕಾಲಲ್ಲಿ ಒದ್ದಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿ ಪ್ರೆಗ್ನೆಂಟಾದ್ರೂ ದಿನ ಕಾಲ್ ಕಾಲಲ್ಲೇ ಒದೆಯುತ್ತಿದ್ದ.. ವರ್ತೂರು ಸಂತೋಷ್​ ಮೇಲೆ ಆರೋಪ!

https://newsfirstlive.com/wp-content/uploads/2023/11/Varthur-Santhosh.jpg

Load More