ಖಾಕಿ ಮೇಲೆಯೇ ಗಂಭೀರ ಆರೋಪಗಳ ಸುರಿಮಳೆ
ಅಬ್ಬಬ್ಬಾ! ಇನ್ಸ್‌ಪೆಕ್ಟರ್ ಕಾಮ ಪುರಾಣ ಬಿಚ್ಚಿಟ್ಟ ಪತ್ನಿ
ಸ್ಟೋರಿ ಓದಿದ್ರೆ ಇವರು ನಿಜಕ್ಕೂ ಪೊಲೀಸ್ ಅನಿಸುತ್ತೆ!
ಬೆಂಗಳೂರು: ನ್ಯಾಯ ಕೊಡಬೇಕಾದ ಸ್ಥಾನದಲ್ಲಿರೋರು ಆರೋಪಿ ಸ್ಥಾನದಲ್ಲಿ ನಿಂತ್ರೆ ಹೇಗಾಗಬೇಡ? ಅದು ಸಮಾಜಕ್ಕೆ ಒಂದು ಒಳ್ಳೆ ಸಂದೇಶವೂ ಅಲ್ಲ. ಆರೋಪಿತನ ಘನತೆಗೂ ಒಳ್ಳೆದ್ದಲ್ಲ. ಸಿಐಡಿ ಇನ್ಸ್‌ಪೆಕ್ಟರ್‌ವೊಬ್ಬರ ಬಗ್ಗೆ ಪತ್ನಿಯೇ ಗಂಭೀರ ಆರೋಪಗಳನ್ನ ಮಾಡಿದ್ದಾರೆ. ಅವ್ರ ಆರೋಪಗಳು ಹೇಗಿವೆ ಎಂದರೇ, ಆ ಇನ್ಸ್‌ಪೆಕ್ಟರ್ ತಮ್ಮ ವೃತ್ತಿ ಜೀವನದಲ್ಲಿ ಹ್ಯಾಂಡಲ್ ಮಾಡಿದ ಗಂಭೀರ ಸೆಕ್ಷನ್‌ಗಳೆಲ್ಲಾ, ಅವರಿಗೆ ತಿರುಗು ಬಾಣವಾಗುವಂತಿದೆ. ಅಷ್ಟಕ್ಕೂ ಇನ್ಸ್‌ಪೆಕ್ಟರ್ ಪುರಾಣವೇನು ? ಪತ್ನಿಯ ಆರೋಪಗಳೇನು?!
ಖಾಕಿ ಮೇಲೆ ಗಂಭೀರ ಆರೋಪಗಳ ಸುರಿಮಳೆ!
ಕ್ರೈಂ ಇನ್ವೆಷ್ಟಿಗೇಷನ್ ಡಿಪಾರ್ಟ್ಮೆಂಟ್‌ನಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸ್ತಿರೋ ಮಲ್ಲಿಕಾರ್ಜುನ್‌ರ ಮೇಲೆ ಪತ್ನಿಯೇ ಗಂಭೀರ ಆರೋಪಗಳನ್ನ ಮಾಡಿ ಠಾಣೆ ಮೆಟ್ಟಿಲೇರಿದ್ದಾರೆ. ಮದುವೆಯಾಗಿ ತಮಗೆ ಮೋಸ ಮಾಡಿದ್ದಲ್ಲದೆ ಬಟ್ಟೆ ಬದಲಿಸಿದಂತೆ ಹೆಣ್ಣು ಮಕ್ಕಳನ್ನ ಬದಲಿಸಿ ಅನೈತಿಕ ಸಂಬಂಧ ಹೊಂದಿದ್ದಾರೆ ಅಂತಾ ಆರೋಪಿಸಿ ಯಶವಂತಪುರ ಠಾಣೆಗೆ ಪತ್ನಿ ಭವಾನಿ ದೂರು ನೀಡಿದ್ದಾರೆ.
ಇನ್ಸ್‌ಪೆಕ್ಟರ್ ಪತ್ನಿಯ ದೂರಿನ ಪ್ರತಿಯನ್ನ ಓದುತ್ತಿದ್ರೆ, ಇವರು ನಿಜಕ್ಕೂ ಪೊಲೀಸ್ ಇಲಾಖೆಯಲ್ಲಿ ಇದ್ರಾ ಅನ್ನೋ ಸಂದೇಹ ಬರುತ್ತೆ. ಪತ್ನಿಯ ಆರೋಪಗಳು ತೀವ್ರ ಗಂಭೀರ ಸ್ವರೂಪದ್ದು. ಕೇವಲ ಹಿಂಸೆ, ವರದಕ್ಷಿಣೆ ಮಾತ್ರವಲ್ಲ, ಹೆಣ್ಣುಬಾಕ ಅನ್ನೋ ಆರೋಪಗಳು ಇವೆ.
ಅಂದ್ಹಾಗೇ, 2012ರಲ್ಲಿ ಮತ್ತಿಕೆರೆಯಲ್ಲಿ ವಾಸವಾಗಿದ್ದ ಭವಾನಿಯರನ್ನ ಆಗ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಆಗಿದ್ದ ಮಲ್ಲಿಕಾರ್ಜುನ್ ಮದುವೆಯಾಗಿದ್ದರು. ಚಿತ್ರದುರ್ಗದಲ್ಲಿ ಅದ್ಧೂರಿ ಮದುವೆ ಮಾಡಿದ್ದ ಭವಾನಿ ಮನೆ ಕಡೆಯವರು 8 ಲಕ್ಷ ಹಣ, 200ಕ್ಕೂ ಹೆಚ್ಚು ಗ್ರಾಂ ಚಿನ್ನಾಭರಣ ನೀಡಿದ್ರಂತೆ. ಮೊದಲು ಹತ್ತು ಲಕ್ಷ ವರದಕ್ಷಿಣೆ ಬೇಡಿಕೆ ಇಟ್ಟಿದ್ದ ಮಲ್ಲಿಕಾರ್ಜುನ ನಂತರ 8 ಲಕ್ಷ ಈಸ್ಕೊಂಡು ಮದುವೆಗೆ ಒಪ್ಪಿಕೊಂಡಿದ್ದರಂತೆ. ಮದುವೆಯಾದ ಕೆಲ ತಿಂಗಳುಗಳ ನಂತರ ಲಕ್ಷಾಂತರ ರೂಪಾಯಿ ವರದಕ್ಷಿಣೆ ತರೋಕೆ ಕಿರುಕುಳ ಮಾಡ್ತಿದ್ದ ಅಂತಾ ಭವಾನಿ ಆರೋಪಿಸಿದ್ದಾರೆ.
ಅನೈತಿಕ ಸಂಬಂಧ ಆರೋಪ ಮಾಡಿದ್ರು!
ಭವಾನಿ ಗರ್ಭಿಣಿಯಾಗಿದ್ದಾಗ ಈತ ಸರಿಯಾಗಿ ನೋಡಿಕೊಳ್ಳದೇ ಬೇರೆ ಮನೆ ಮಾಡಿಕೊಟ್ಟು, ಅಲ್ಲಿಗೂ ಬಂದಿರಲಿಲ್ಲ ಅಂತಾ ಆರೋಪಿಸಿದ್ದಾರೆ. ಇದೇ ವೇಳೆ, ಮಹಿಳೆಯ ಜೊತೆ ಜೊತೆ ಅನೈತಿಕ ಸಂಬಂಧ ಹೊಂದಿದ್ದರು ಅಂತಾ ಆರೋಪಿಸಿದ್ದಾರೆ. ನಂತರ ಬಸವೇಶ್ವರ ನಗರ ಠಾಣೆ ಎಸ್ಐ ಅಗಿದ್ದಾಗ ಅಲ್ಲಿ ಕಂಪ್ಲೆಂಟ್ ಕೊಡೋಕೆ ಬಂದಿದ್ದ ಮಹಿಳೆಯ ಜೊತೆಯೂ ಸಂಬಂಧ ಹೊಂದಿ ಆಕೆಯನ್ನೇ ಮದುವೆಯಾಗ್ತೀನಿ ಏನು ಮಾಡ್ಕೋತಿಯೋ ಮಾಡ್ಕೋ ಅಂತಾ ಆವಾಜ್ ಹಾಕಿದ್ದರು ಅಂತಾ ಗಂಭೀರ ಆರೋಪ ಮಾಡಿದ್ದಾರೆ.
ಇದಿಷ್ಟೇ ಅಲ್ಲಾ ಆರೋಪಗಳು. ನನ್ನನ್ನ ಮದುವೆ ಮಾಡಿಕೊಂಡು ಸರಿಯಾಗಿ ನೋಡಿಕೊಂಡಿಲ್ಲ. ನನ್ನ ಮಗನನ್ನ ನೋಡಿಕೊಂಡಿಲ್ಲ. ವರದಕ್ಷಿಣೆ ಅಂತಾ ಹತ್ತು ಲಕ್ಷಕ್ಕೂ ಹೆಚ್ಚು ಹಣ ಈಸ್ಕೊಂಡು ಅದನ್ನ ವಾಪಸ್ ಕೊಟ್ಟಿಲ್ಲ ಅಂತಾನೂ ಪತ್ನಿ ಆರೋಪಿಸಿದ್ದಾರೆ. ತನ್ನ ಪತ್ನಿಯ ವಿರುದ್ಧ ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸಿ ಅಂತಾ ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಸದ್ಯ ಸಿಐಡಿಯಲ್ಲಿ ಇನ್ಸ್‌ಪೆಕ್ಟರ್ ಆಗಿರೋ ಮಲ್ಲಿಕಾರ್ಜುನ್ ವಿರುದ್ದ ತನಿಖೆ ಕ್ರಮ ಆಗುತ್ತಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ