newsfirstkannada.com

ಲೇಡಿಸ್‌ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡಿಂಗ್​ ಕೇಸ್​ಗೆ ಟ್ವಿಸ್ಟ್; ಏನಿದು ಹೊಸ ಆರೋಪ?

Share :

26-07-2023

    ಕರಾವಳಿಯಲ್ಲಿ ವಿಡಿಯೋ ರೆಕಾರ್ಡಿಂಗ್‌ ಸಂಚಲನ

    ಖಾಸಗಿ ಕಾಲೇಜಿನಲ್ಲಿ ನಡೆದಿದ್ದ ಘಟನೆಗೆ ಟ್ವಿಸ್ಟ್..!

    ಪೊಲೀಸರ​ ವಿರುದ್ಧ ಬಿಜೆಪಿ ನಾಯಕರ ಆರೋಪ

​ಉಡುಪಿ: ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕಟ್ಟಿಕೊಡುವ ವಿದ್ಯಾ ದೇಗುಲದಲ್ಲಿ ನಡೆದ ಘಟನೆ ಈಗ ರಾಜಕೀಯ ಕೆಸರೆರಚಾಟಕ್ಕೆ ಮುನ್ನುಡಿ ಬರೆದಿದೆ. ಕರಾವಳಿಯಲ್ಲಿ ಎದ್ದ ವಿಡಿಯೋ ರೆಕಾರ್ಡಿಂಗ್​ ಅಲೆಯೊಂದು ಸುನಾಮಿಯಾಗುವ ಸೂಚನೆ ನೀಡಿದೆ. ರಾಜ್ಯ ಸರ್ಕಾರದ ಮೇಲೆ ಕೇಸರಿ ಸೇನೆ ಮುಗಿ ಬೀಳಲು ಕಾರಣವಾಗಿದೆ.

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರೂ ಎಂಬ ಮಾತಿದೆ. ಸದ್ಯ ಕರಾವಳಿ ಭಾಗದಲ್ಲಿ ರಾಜ್ಯ ಕಾಂಗ್ರೆಸ್​ ಸರ್ಕಾರ ಇದೇ ಮೊಂಡುತನ ಮೆರೆದಿದೆ ಅನ್ನೋ ಆರೋಪವನ್ನು ಬಿಜೆಪಿ ಮಾಡಿದೆ. ತಪ್ಪಿತಸ್ಥರನ್ನು ವಿಚಾರಣೆ ನಡೆಸಿ ಸತ್ಯವನ್ನು ಬಯಲಿಗೆ ಎಳೆಯಬೇಕಾದ ಕೆಲಸ ಮಾಡಬೇಕಿದ್ದ ಪೊಲೀಸರೇ ದಿಕ್ಕು ತಪ್ಪಿದ್ದಾರೆ. ಇವರೇ ಸತ್ಯವನ್ನು ಮರೆಮಾಚೋ ಕೆಲಸ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಕರಾವಳಿಯಲ್ಲಿ ವಿಡಿಯೋ ರೆಕಾರ್ಡಿಂಗ್‌ ಪ್ರಕರಣದ ಸಂಚಲನ

ಉಡುಪಿ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಒಂದು ಕೋಮಿನ ಯುವತಿಯರು ಮತ್ತೊಂದು ಕೋಮಿನ ಯುವತಿಯರ ವಿಡಿಯೋಗಳನ್ನ ರೆಕಾರ್ಡ್​ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹಲವರು ಈ ಘಟನೆಗೆ ವಿರೋಧವನ್ನು ಕೂಡ ಮಾಡಿದ್ರು. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವೂ ವ್ಯಕ್ತವಾಗಿದೆ. ಈಗ ಕೇಸ್​ ತನಿಖೆ ನಡೆಸಬೇಕಾದ ಪೊಲೀಸರೇ ಏನು ಆಗಿಲ್ಲ ಎನ್ನುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಪೊಲೀಸರ​ ವಿರುದ್ಧ ಬಿಜೆಪಿ ನಾಯಕರ ಗಂಭೀರ ಆರೋಪ

ವಿಡಿಯೋ ರೆಕಾರ್ಡಿಂಗ್ ಘಟನೆ ಖಂಡಿಸಿ ಉಡುಪಿ ಮೂಲದ ಯುವತಿಯೊಬ್ಬರು ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಸುಳ್ಳು ಸುದ್ದಿ ಹರಡಿ ಸಮಾಜದ ಸ್ವಾಸ್ತ್ಯ ಹಾಳು ಮಾಲಾಗುತ್ತಿದೆ ಎಂದು ಪೊಲೀಸರು ಯುವತಿ ಮನೆಗೆ ವಿಚಾರಣೆಗಾಗಿ ಹೋಗಿದ್ದಾರೆ. ಇನ್ನೂ ಈ ವಿಚಾರಕ್ಕೆ ಆಕ್ಷೇಪ ಎತ್ತಿರುವ ಬಿಜೆಪಿ, ಪೊಲೀಸರು ಯುವತಿ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಕಿಡಿಕಾರಿದೆ.

ತಮಾಷೆಗಾಗಿ ವಿಡಿಯೋ ಮಾಡಿದ್ದಾರೆ ಎಂದ ಕಾಲೇಜು ನಿರ್ದೇಶಕಿ

ವಿಡಿಯೋ ರೆಕಾರ್ಡಿಂಗ್ ಘಟನೆ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿದ ಕಾಲೇಜು ಆಡಳಿತ ಮಂಡಳಿ, ಮೂವರು ವಿದ್ಯಾರ್ಥಿಗಳು ತಮಾಷೆಗಾಗಿ ವೀಡಿಯೋ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಮಕ್ಕಳು ತಪ್ಪೊಪ್ಪಿಗೆ ಕೊಟ್ಟ ನಂತರವೂ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

ಸದ್ಯ ವಿಡಿಯೋ ಮಾಡಿದ ವಿದ್ಯಾರ್ಥಿನಿಯರನ್ನ ಅಮಾನತು ಮಾಡಲಾಗಿದೆ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಟ್ನಲ್ಲಿ ಉಡುಪಿಯಲ್ಲಿ ಎದ್ದ ವಿಡಿಯೋ ರೆಕಾರ್ಡಿಂಗ್​​ ಅಲೆ ರಾಜ್ಯ ರಾಜಕೀಯದಲ್ಲಿ ದಿಢೀರ್‌ ಸುನಾಮಿ ಎಬ್ಬಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೇಡಿಸ್‌ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡಿಂಗ್​ ಕೇಸ್​ಗೆ ಟ್ವಿಸ್ಟ್; ಏನಿದು ಹೊಸ ಆರೋಪ?

https://newsfirstlive.com/wp-content/uploads/2023/07/1238.jpg

Load More