newsfirstkannada.com

‘ಈ ವಿಶೇಷ ಅಧಿವೇಶನದ ಸಮಯ ಬಹಳ ಚಿಕ್ಕದು.. ಆದರೆ..’ ಕಲಾಪಕ್ಕೂ ಮೊದಲು ಪ್ರಧಾನಿ ಮೋದಿ ಹೇಳಿಕೆ

Share :

18-09-2023

    ಅಧಿವೇಶನಕ್ಕೂ ಮೊದಲೇ ಸಂಸತ್ ಹೊರಗಡೆ ಪ್ರಧಾನಿ ಮಾತು

    ಸರ್ಕಾರವನ್ನ ಕಟ್ಟಿ ಹಾಕಲು ಖರ್ಗೆ ನೇತೃತ್ವದಲ್ಲಿ ವಿಪಕ್ಷಗಳು ಸಭೆ

    ಯಾರು ನೀರಿಕ್ಷಿಸದ ರೀತಿ G20 ಶೃಂಗಸಭೆ ಅದ್ಭುತವಾದ ಯಶಸ್ಸು

ನವದೆಹಲಿ: G20 ಶೃಂಗಸಭೆ ಅದ್ಭುತವಾಗಿ ಯಶಸ್ಸು ಕಂಡಿದ್ದು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. ಇಂದಿನಿಂದ 5 ದಿನಗಳವರೆಗೆ ಸಂಸತ್​ನ​ ವಿಶೇಷ ಅಧಿವೇಶನ ನಡೆಯಲಿದ್ದು ಇದಕ್ಕೂ ಮೊದಲು ಪ್ರಧಾನಿ ಮೋದಿಯವರು ಸಂಸತ್​ನ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದರು.

ಸೆಪ್ಟೆಂಬರ್​ 9 ಮತ್ತು 10 ರಂದು ನಡೆದ G20 ಶೃಂಗಸಭೆಯು ಯಾರು ನೀರಿಕ್ಷಿಸದ ರೀತಿ ಯಶಸ್ಸು ಕಂಡಿರುವುದು ದೇಶದ ಹೆಮ್ಮೆಯ ಸಂಗತಿ. 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಿಸಬೇಕು. ಅಂದರೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು. ಭಾರತದ ಭವಿಷ್ಯ ಭದ್ರವಾಗಿದ್ದು ಹಳೆಯದನ್ನು, ಹಿಂದಿನದನ್ನು ಮರೆಯಬೇಕು ಎಂದು ಹೇಳಿದರು.

ಇತ್ತಿನಿಂದ ನಡೆಯುವ ಸಂಸತ್​ನ ವಿಶೇಷ ಅಧಿವೇಶನ ಪ್ರಮುಖವಾದದ್ದು ಸಂಸತ್ತಿನ ಈ ಅಧಿವೇಶನದ ಸಮಯ ಬಹಳ ಚಿಕ್ಕದಾಗಿದೆ. ಆದರೆ ಈ ಸಮಯಕ್ಕೆ ಅಧಿವೇಶನ ಮಾತ್ರ ದೊಡ್ಡದು. 75 ವರ್ಷಗಳ ಪಯಣದ ಈ ಅಧಿವೇಶನದಲ್ಲಿ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಹೊಸ ಜಾಗದಿಂದ ಪ್ರಯಾಣ ಮುಂದುವರೆಸಲು ನಿರ್ಧಾರ ಮಾಡಲಾಗಿದ್ದು 2047ರ ವೇಳೆಗೆ ಭಾರತವನ್ನ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕು. ಇದಕ್ಕಾಗಿ ಮುಂಬರುವ ಎಲ್ಲಾ ನಿರ್ಧಾರಗಳನ್ನು ನೂತನ ಸಂಸತ್ ಭವನದಲ್ಲಿ ಕೈಗೊಳ್ಳಲಾಗುವುದು ಎಂದಿದ್ದಾರೆ.

ನಾಳೆ ಮಹಾ ಗಣೇಶ ಚತುರ್ಥಿಯಂದು ಹೊಸ ಸಂಸತ್ತಿಗೆ ತೆರಳಲಿದ್ದೇವೆ. ಗಣಪತಿಯನ್ನು ನಿರ್ವಿಘ್ನದಾಯಕ ಎಂದು ಕರೆಯಲಾಗುತ್ತದೆ. ಹೀಗಾಗಿ ದೇಶದ ಅಭಿವೃದ್ಧಿಯಲ್ಲಿ ಯಾವುದೇ ಅಡೆತಡೆಗಳಿಲ್ಲ. ‘ನಿರ್ವಿಘ್ನ ರೂಪ್ ಸೇ ಸಾರೇ ಸಪ್ನೆ ಸಾರೆ ಸಂಕಲ್ಪ ಭಾರತ ಪರಿಪೂರ್ಣ ಕರೇಗಾ’ ಎಂದು ಮೋದಿ ಮಾತನಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ವಿಪಕ್ಷಗಳ ಸಭೆ ನಡೆಯಿತು. ಅಧಿವೇಶನ ಆರಂಭಕ್ಕೂ ಮೊದಲೇ ವಿಪಕ್ಷಗಳ ಮಹತ್ವದ ಸಭೆ ನಡೆಸಿದವು. ಅಜೆಂಡಾದಲ್ಲಿ ಇಲ್ಲದ ಅಂಶಗಳನ್ನು ಕೇಂದ್ರ ಸರ್ಕಾರ ಮಂಡಿಸಬಹುದು. ನಾವು ಎಲ್ಲದಕ್ಕೂ ಸರಿಯಾದ ಉತ್ತರ ಕೊಡಲು ತಯಾರಿರಬೇಕು. ಒಗ್ಗಟ್ಟಿನ ನಿಲುವು ಪ್ರದರ್ಶಿಸಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಈ ವಿಶೇಷ ಅಧಿವೇಶನದ ಸಮಯ ಬಹಳ ಚಿಕ್ಕದು.. ಆದರೆ..’ ಕಲಾಪಕ್ಕೂ ಮೊದಲು ಪ್ರಧಾನಿ ಮೋದಿ ಹೇಳಿಕೆ

https://newsfirstlive.com/wp-content/uploads/2023/09/MODI-12.jpg

Load More