newsfirstkannada.com

ಧಾರಾಕಾರ ಮಳೆ.. ತಮಿಳುನಾಡು 9 ಜಿಲ್ಲೆಯ ಜನರಿಗೆ ಹವಮಾನ ಇಲಾಖೆಯಿಂದ ಭಾರೀ ಎಚ್ಚರಿಕೆ; ಶಾಲೆಗಳಿಗೆ ರಜೆ

Share :

15-11-2023

    ತಮಿಳುನಾಡಿನ ಹಲವೆಡೆ ನಿರಂತರ ಧಾರಾಕಾರ ಮಳೆಯ ಅಬ್ಬರ

    ಚೆನ್ನೈ, ಕಾಂಚೀಪುರಂ, ಪುದುಚೇರಿ, ತಂಜಾವೂರಿಗೆ ಯೆಲ್ಲೋ ಅಲರ್ಟ್

    ಐದು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ

ಚೆನ್ನೈ: ತಮಿಳುನಾಡಿನ ಹಲವೆಡೆ ಧಾರಾಕಾರ ಮಳೆಯ ಅಬ್ಬರ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆ ಇಂದು ರಾಜ್ಯದ ಹಲವು ಜಿಲ್ಲೆಗಳು ಮತ್ತು ಪುದುಚೇರಿಯ ಕಾರೈಕಲ್‌ಗೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ.

ತಮಿಳುನಾಡಿನ ಕಡಲೂರು, ಮೈಲಾಡುತುರೈ, ನಾಗಪಟ್ಟಣಂ ಮತ್ತು ತಿರುವರೂರು ಜಿಲ್ಲೆಗಳು ಮತ್ತು ಪುದುಚೇರಿಯ ಕಾರೈಕಲ್‌ನಲ್ಲಿ ಆರೆಂಜ್ ಅಲರ್ಟ್‌ ನೀಡಲಾಗಿದೆ. ಪುದುಚೇರಿಯ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗಲ್ಪಟ್ಟು ಮತ್ತು ತಂಜಾವೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಐದು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನಕ್ಕೆ ಅಡ್ಡಿಯಾಗಿದ್ದು, ಬೆಳಗಾದ್ರೆ ಮನೆಯಿಂದ ಹೊರ ಬರಲು ಸ್ಥಳೀಯರು ಪರದಾಡುತ್ತಿದ್ದಾರೆ. ಹವಾಮಾನ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈಗಾಗಲೇ ಚೆನ್ನೈನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧಾರಾಕಾರ ಮಳೆ.. ತಮಿಳುನಾಡು 9 ಜಿಲ್ಲೆಯ ಜನರಿಗೆ ಹವಮಾನ ಇಲಾಖೆಯಿಂದ ಭಾರೀ ಎಚ್ಚರಿಕೆ; ಶಾಲೆಗಳಿಗೆ ರಜೆ

https://newsfirstlive.com/wp-content/uploads/2023/11/Chennai-Rain.jpg

Load More