newsfirstkannada.com

ಬೆಂಗಳೂರಿನ ಪ್ರತಿಷ್ಠಿತ ಮಾಲ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ಕಾಮುಕನ ವಿಡಿಯೋ ವೈರಲ್‌!

Share :

30-10-2023

    ಮಾಲ್‌ನಲ್ಲಿದ್ದ ಯುವತಿಗೆ ಬಹಿರಂಗವಾಗಿ ಕಿರುಕುಳ ನೀಡಿದ ಕಾಮುಕ

    ನಿನ್ನೆ ಸಂಜೆ 6.30ರ ಸುಮಾರಿಗೆ ಪ್ರತಿಷ್ಠಿತ ಮಾಲ್​ನಲ್ಲಿ ನಡೆದ ಘಟನೆ

    ವೈರಲ್ ವಿಡಿಯೋ ಬಗ್ಗೆ ಮಾಗಡಿ ರೋಡ್‌ ಪೊಲೀಸರಿಂದ ಪರಿಶೀಲನೆ

ಬೆಂಗಳೂರಿನ ಪ್ರತಿಷ್ಠಿತ ಮಾಲ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಕಾಮುಕನೊಬ್ಬ ಮಾಲ್‌ನಲ್ಲಿದ್ದ ಯುವತಿಗೆ ಬಹಿರಂಗವಾಗಿ ಕಿರುಕುಳ ನೀಡಿದ ವಿಡಿಯೋ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ಕಾಮುಕನು ಯುವತಿಗೆ ಲೈಂಗಿಕ ಕಿರುಕುಳ ನೀಡಿರುವುದು ಸ್ಪಷ್ಟವಾಗಿದೆ. ನಿನ್ನೆ ಸಂಜೆ 6.30ರ ಸುಮಾರಿಗೆ ಬೆಂಗಳೂರು ನಗರದ ಪ್ರತಿಷ್ಠಿತ ಮಾಲ್​ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಲೈಂಗಿಕ ಕಿರುಕುಳ ನೀಡಿದ ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರತಿಷ್ಠಿತ ಮಾಲ್​ನಲ್ಲಿ ನಡೆದಿರೋ ಈ ಘಟನೆಯ ಬಗ್ಗೆ ಇದುವರೆಗೆ ಯಾರು ಲಿಖಿತ ದೂರು ನೀಡಿಲ್ಲ. ಹೀಗಾಗಿ ವೈರಲ್ ವಿಡಿಯೋ ಆಧರಿಸಿ ಮಾಗಡಿ ರೋಡ್‌ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಹಲವರು ಬೆಂಗಳೂರಿನ ಪ್ರತಿಷ್ಠಿತ ಮಾಲ್ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಆದರೆ ಇದು ನಿಶ್ಚಿತವಾಗಿ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಸಬೇಕಿದೆ.

ವಿಡಿಯೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ಚಹರೆ ಸೆರೆಯಾಗಿದ್ದು, ಪತ್ತೆ ಹಚ್ಚಲು ಸಾಧ್ಯವಿದೆ. ಆದರೆ ಈ ಘಟನೆ ನಡೆದಿದ್ದು ಎಲ್ಲಿಯದ್ದು ಎಂಬುದು ಪಕ್ಕಾ ಆದ ಬಳಿಕ ಪೊಲೀಸರು ಕೇಸ್ ದಾಖಲಿಸಲು ನಿರ್ಧಾರ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಬೆಂಗಳೂರಿನ ಪ್ರತಿಷ್ಠಿತ ಮಾಲ್​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ಕಾಮುಕನ ವಿಡಿಯೋ ವೈರಲ್‌!

https://newsfirstlive.com/wp-content/uploads/2023/10/Bangalore-Mall-Girl.jpg

Load More