newsfirstkannada.com

ರಿಲೀಸ್​ಗೆ ಮುನ್ನವೇ ಬಾಹುಬಲಿ ದಾಖಲೆ ಮುರಿಯುತ್ತಾ ಶಾರುಖ್​​ ಜವಾನ್​ ಸಿನಿಮಾ..? ಏನದು..?

Share :

02-09-2023

  ಸೆಪ್ಟೆಂಬರ್ 7ರಂದು ಜವಾನ್ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜು

  ಹೊಸ ದಾಖಲೆ ನಿರ್ಮಿಸಲು ಸಜ್ಜಾದ ಶಾರುಖ್ ಖಾನ್ ಜವಾನ್​​​

  ಜವಾನ್​ ಚಿತ್ರದಲ್ಲಿ ಹಲವಾರು ಸ್ಟಾರ್‌ ನಟ-ನಟಿಯರ ದಂಡು

ಬಾಲಿವುಡ್​ ಕಿಂಗ್ ಶಾರುಖ್‌ ಖಾನ್‌ ನಟನೆಯ ಬಹುನಿರೀಕ್ಷಿತ ಜವಾನ್‌ ಸಿನಿಮಾದ ಟ್ರೈಲರ್ ರಿಲೀಸ್‌ ಆಗಿ ಎಲ್ಲೆಲ್ಲೂ ಕಮಾಲ್​​​ ಮಾಡುತ್ತಿದೆ. ಕಾಲಿವುಡ್​​ ಸೂಪರ್​​ ಹಿಟ್​​ ಡೈರೆಕ್ಟರ್​ ಅಟ್ಲಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಶಾರುಖ್​​​ ಅಭಿನಯದ ಜವಾನ್​​​ ಚಿತ್ರದ ಟೀಸರ್​​ ಬೆನ್ನಲ್ಲೇ ಟ್ರೈಲರ್​ ಈಗ ಸಾಕಷ್ಟು ಹಿಟ್​ ಆಗುತ್ತಿದೆ.

ರಿಲೀಸ್​ ಆದ ಎರಡು ದಿನಗಳಲ್ಲಿ 36 ಮಿಲಿಯನ್​​ ವೀವ್ಸ್​​ ಪಡೆದುಕೊಳ್ಳುವ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಹವಾ ಸೃಷ್ಟಿಸಿದೆ. ಇನ್ನು ರಿಲೀಸ್​ ಆದ ಟ್ರೈಲರ್‌ನಲ್ಲಿ ಜವಾನ್ ಅವತಾರ ಧೂಳೆಬ್ಬಿಸಿದ್ರೆ, ಶಾರುಖ್ ಖಾನ್ ಬೇಟೆ ಕೋ ಹಾಥ್ ಲಗಾನೆ ಸೆ ಪೆಹಲೆ, ಬಾಪ್‌ ಸೆ ಬಾತ್ ಕರ್‌.. ಅಂದ್ರೆ ಮಗನ ಮೇಲೆ ಕೈ ಹಾಕುವ ಮೊದಲು ಅಪ್ಪನ ಬಗ್ಗೆ ಮಾತಾಡು ಅನ್ನೋ ಡೈಲಾಗ್ ಸಖತ್ ಫೇಮಸ್ ಆಗಿದೆ.

ಶಾರುಖ್ ಖಾನ್ ತಮ್ಮ ಮುಂಬರುವ ಜವಾನ್ ಮೂಲಕ ತಮ್ಮದೇ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಜವಾನ್​ ಚಿತ್ರವು ಸೆಪ್ಟೆಂಬರ್​​ 7ರಂದು ತೆರೆಗೆ ಬರಲಿದ್ದು, ಈ ಮುನ್ನವೆ ಪಠಾಣ್‌ನ ಮುಂಗಡ ಬುಕ್ಕಿಂಗ್‌ಗಿಂತ ಮುಂದೆ ಹೋಗಿ ತನ್ನ ಹೊಸ ದಾಖಲೆ ಮಾಡುತ್ತಿದೆ. ಇನ್ನು ಬಾಹುಬಲಿ 2 28 ಏಪ್ರಿಲ್​ 2017ರಂದು ತೆರೆದೆ ಅಪ್ಪಳಿಸಿ ಎಲ್ಲ ದಾಖಲೆಗಳನ್ನು ಮುರಿದು ಮುನ್ನುಗಿತ್ತು. ಇದೀಗ 7 ವರ್ಷದ ಹಿಂದೆ ರಿಲೀಸ್​​ಗೂ ಮುನ್ನ ಅತೀ ಹೆಚ್ಚು ಟಿಕೆಟ್​ ಮಾರಾಟವಾಗಿತ್ತು. ಇಗ ಆ ದಾಖಲೆಯನ್ನು ಜವಾನ್​ ಚಿತ್ರವು ಮುರಿಯುತ್ತದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

ಇದೀಗ ಶಾರುಖ್ ಖಾನ್ ನಟನೆಯ ಜವಾನ್​ ಚಿತ್ರದ ಮುಂಗಡ ಬುಕಿಂಗ್ ಇಂದು ದೇಶಾದಾದ್ಯಂತ ಪ್ರಾರಂಭವಾಗಿದೆ. ಈ ಚಿತ್ರವು ಈಗಾಗಲೇ ಆರಂಭಿಕ ದಿನಕ್ಕೆ 1.18 ಲಕ್ಷ ಮೌಲ್ಯದ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರ ಜೊತೆಗೆ ವರದಿ ಪ್ರಕಾರ ಆಗ ಮಾರಾಟವಾದ ಟಿಕೆಟ್‌ಗಳ ಮೌಲ್ಯ ₹4 ಕೋಟಿ ಲಾಭ ಗಳಿಸಿದೆ ಎನ್ನಲಾಗಿದೆ. ಜವಾನ್​ ಸಿನಿಮಾದ ಟ್ರೈಲರ್ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ರಿಲೀಸ್​ ಆಗಿದೆ. ಈ ಚಿತ್ರದಲ್ಲಿ ಶಾರುಖ್ ಖಾನ್‌, ವಿಜಯ್‌ ಸೇತುಪತಿ, ನಿರ್ದೇಶಕ ಅಟ್ಲಿ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್, ನಟರಾದ ಯೋಗಿ ಬಾಬು, ಸಾನ್ಯಾ ಮಲ್ಹೋತ್ರಾ, ನಯನತಾರಾ ಮತ್ತು ಪ್ರಿಯಾ ಮಣಿ ಹೀಗೆ ಅನೇಕ ಸ್ಟಾರ್​ ನಟ ನಟಿಯರು ಅಭಿನಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಲೀಸ್​ಗೆ ಮುನ್ನವೇ ಬಾಹುಬಲಿ ದಾಖಲೆ ಮುರಿಯುತ್ತಾ ಶಾರುಖ್​​ ಜವಾನ್​ ಸಿನಿಮಾ..? ಏನದು..?

https://newsfirstlive.com/wp-content/uploads/2023/09/jawan-2.jpg

Load More