newsfirstkannada.com

ರಿಲೀಸ್​​ಗೆ ಮುನ್ನವೇ ದಾಖಲೆ.. 300 ಕೋಟಿ ವೆಚ್ಚದ ಜವಾನ್​​​ ಟಾರ್ಗೆಟ್​ ಎಷ್ಟು ಕೋಟಿ..?

Share :

05-09-2023

    ದೇಶದಲ್ಲಿ ಜವಾನ್ ಜಾತ್ರೆ.. ಟಿಕೆಟ್​ ಬುಕ್ಕಿಂಗ್​ನಲ್ಲಿ ರೆಕಾರ್ಡ್!

    ರಿಲೀಸ್​ಗೂ ಮುಂಚೆನೇ ಕೋಟಿ ಕೋಟಿ ಬಾಚಿದ ಶಾರುಖ್

    300 ಕೋಟಿಯ ಜವಾನ್.. ಚಿತ್ರತಂಡದ ಟಾರ್ಗೆಟ್​ ಎಷ್ಟಿದೆ?

ಸದ್ಯ ಸಿನಿಮಾ ಪ್ರಪಂಚದಲ್ಲಿ ಜವಾನ್ ಸಿನಿಮಾದ ಸುಂಟರಗಾಳಿ ಎದ್ದಿದೆ. ಪಠಾಣ್ ಆದ್ಮೇಲೆ ಮತ್ತೆ ಶಾರುಖ್ ಖಾನ್​ ಸಿನಿಮಾ ಥಿಯೇಟರ್​ಗೆ ಬರ್ತಿದ್ದು, ಕ್ರೇಜ್​​ ಇನ್ನೊಂದು ಲೆವಲ್​ಗೆ ಕ್ರಿಯೇಟ್ ಆಗಿದೆ. ರಿಲೀಸ್​ಗೂ ಮುಂಚೆನೇ ಕೋಟಿ ಕೋಟಿ ಬಾಚಿಕೊಳ್ತಿರೋ ಕಿಂಗ್ ಖಾನ್​, ಅತಿ ದೊಡ್ಡ ಟಾರ್ಗೆಟ್​ನ ಬೆನ್ನತ್ತಿದ್ದಾರೆ. ಪ್ಯಾನ್ ಇಂಡಿಯಾ ಪ್ರಪಂಚದಲ್ಲಿ ಸದ್ಯ ಜವಾನ್ ಫೀವರ್ ಜೋರಾಗಿದೆ. ಸೆಪ್ಟೆಂಬರ್ 7ಕ್ಕೆ ಜವಾನ್ ಗ್ರ್ಯಾಂಡ್​ ಎಂಟ್ರಿ ಕೊಡ್ತಿದ್ದು, ಟಿಕೆಟ್​ ಬುಕ್ಕಿಂಗ್ ದಾಖಲೆ ಬರೆದಿದೆ.
ಜವಾನ್ ಸಿನಿಮಾದ ಟಿಕೆಟ್​ ಬುಕ್ಕಿಂಗ್ ಓಪನ್ ಆಗಿದ್ದು, ಬಿಸಿ ಬಿಸಿ ಮಸಾಲೆ ದೋಸೆಯಂತೆ ಸೇಲ್ ಆಗ್ತಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್​ಗಳಂತೂ ಜವಾನ್ ಚಿತ್ರದ ಫಸ್ಟ್​ ಡೇ ಟಿಕೆಟ್​ ಸಿಕ್ತಾನೇ ಇಲ್ಲ. ಅಷ್ಟು ಫಾಸ್ಟ್​ ಆಗಿ ಮಾರಾಟವಾಗ್ತಿದೆ.

ರಿಲೀಸ್​ಗೂ ಮುಂಚೆನೇ ಕೋಟಿ ಕೋಟಿ ಬಾಚಿದ ಶಾರುಖ್!

ಅಡ್ವಾನ್ಸ್​ ಟಿಕೆಟ್​ ಬುಕ್ಕಿಂಗ್​ನಲ್ಲಿ ಜವಾನ್ ರೆಕಾರ್ಡ್ ಬರೆದಿದೆ. ಬರೀ ಇಂಡಿಯಾದಲ್ಲಿ ಮೊದಲ ದಿನ 7 ಲಕ್ಷಕ್ಕೂ ಹೆಚ್ಚು ಟಿಕೆಟ್​ ಸೇಲ್ ಆಗಿದೆ. ಪಿವಿಆರ್​, ಐನಾಕ್ಸ್, ಸಿನಿಪೋಲಿಸ್​ ಸೇರಿ ಬರೀ ಮಲ್ಟಿಪ್ಲೆಕ್ಸ್​ಗಳಲ್ಲೇ 3 ಲಕ್ಷಕ್ಕೂ ಹೆಚ್ಚು ಟಿಕೆಟ್​ ಮಾರಾಟವಾಗಿದೆ. ಇದರಿಂದ ಜವಾನ್ ತಂಡಕ್ಕೆ ಸಿಕ್ಕಿರೋದು ಬರೋಬ್ಬರಿ 20 ಕೋಟಿ. ಹೌದು, ಜವಾನ್ ಸಿನಿಮಾ ಥಿಯೇಟರ್​ಗೆ ಬರೋದಕ್ಕೂ ಮುಂಚೆಯೇ ದೇಶಾದ್ಯಂತ 20 ಕೋಟಿ ಅಡ್ವಾನ್ಸ್​ ಬುಕ್ಕಿಂಗ್​ನಿಂದ ಕಲೆಕ್ಷನ್ ಮಾಡಿದೆ. ಮೊದಲ ಶೋ ಶುರುವಾಗೋದಕ್ಕೆ ಇನ್ನು ಎರಡು ದಿನ ಬಾಕಿಯಿದ್ದು, ಈ ಎರಡು ದಿನದಲ್ಲಿ ಇನ್ನಷ್ಟು ಕೋಟಿ ಹರಿದು ಬರುವ ನಿರೀಕ್ಷೆ ಇದೆ. ಈ ಮೂಲಕ ಜವಾನ್ ಸಿನಿಮಾ ಫಸ್ಟ್​ ಡೇ ಕಲೆಕ್ಷನ್​ನಲ್ಲಿ ಬಿಗ್ ಓಪನಿಂಗ್ ಮಾಡುವ ಸಾಧ್ಯತೆ ಇದೆ. ಈ ಹಿಂದೆ ತೆರೆಕಂಡ ಪಠಾಣ್ ಸಿನಿಮಾ ಭಾರತದಲ್ಲಿ ಮೊದಲ ದಿನ 57 ಕೋಟಿ ಕಲೆಕ್ಷನ್ ಮಾಡಿತ್ತು. ಈ ಚಿತ್ರದ ಕಲೆಕ್ಷನ್​ನ ಜವಾನ್​ ಸಿನಿಮಾ ಹಿಂದಿಕ್ಕುತ್ತಾ ಎನ್ನುವ ಕುತೂಹಲ ಕಾಡ್ತಿದೆ.

300 ಕೋಟಿಯ ಜವಾನ್.. ಟಾರ್ಗೆಟ್ ಎಷ್ಟಿದೆ?

ರೆಡ್​ ಚಿಲ್ಲಿಸ್​ ಎಂಟರ್​ಟೈನ್​ಮೆಂಟ್​ ಬ್ಯಾನರ್​ನಲ್ಲಿ ಸ್ವತಃ ಶಾರುಖ್ ಖಾನ್ ಈ ಚಿತ್ರ ನಿರ್ಮಾಣ ಮಾಡಿದ್ದು, ಜವಾನ್ ಸಿನಿಮಾದ ಒಟ್ಟು ಬಜೆಟ್​ 300 ಕೋಟಿ. ಹಾಗಾಗಿ ಹಾಕಿದ ಬಂಡವಾಳಕ್ಕಿಂತ ಡಬಲ್​ ಗಳಿಕೆ ಮಾಡಬೇಕು ಅನ್ನೋದು ಚಿತ್ರತಂಡದ ಟಾರ್ಗೆಟ್​. ಸದ್ಯದ ಮಾಹಿತಿ ಪ್ರಕಾರ ಜವಾನ್ ಸಿನಿಮಾ ಈಗಾಗಲೇ 250 ಕೋಟಿ ಪ್ರಿ-ರಿಲೀಸ್​ ಬ್ಯುಸಿನೆಸ್​ ಮಾಡಿದೆಯಂತೆ. ಸೋ, ಥಿಯೇಟರ್​ಗೆ ಬರೋದಕ್ಕೂ ಮುಂಚೆಯೇ ಚಿತ್ರದ ಶೇಕಡಾ 90 ರಷ್ಟು ಬಜೆಟ್​ನ ವಾಪಸ್ ತಗೊಂಡಿರುವ ಜವಾನ್ ತಂಡ ರಿಲೀಸ್​ ನಂತರದ ಗಳಿಕೆ ಮೇಲೆ ಹೆಚ್ಚು ಫೋಕಸ್ ಮಾಡ್ತಿದೆಯಂತೆ.

ಜವಾನ್​ ಕೈ ಹಿಡಿಯುತ್ತಾ ಸೌತ್ ಇಂಡಸ್ಟ್ರಿ?

ಜವಾನ್ ಸಿನಿಮಾ ಬಾಲಿವುಡ್​ಗಿಂತ ಸೌತ್ ಇಂಡಸ್ಟ್ರಿಯಲ್ಲೇ ಹೆಚ್ಚು ಅಬ್ಬರ ಮಾಡ್ತಿದೆ. ಯಾಕಂದ್ರೆ ಇದು ಬಾಲಿವುಡ್​ನಲ್ಲಿ ತಯಾರಾಗಿರುವ ಪಕ್ಕಾ ಸೌತ್ ಸಿನಿಮಾ. ಡೈರೆಕ್ಟರ್ ಅಟ್ಲಿ ಸೇರಿದಂತೆ ಬಹುತೇಕ ಪ್ರಮುಖ ಸ್ಟಾರ್​ಗಳು ದಕ್ಷಿಣ ಇಂಡಸ್ಟ್ರಿಯವರೇ. ಹಾಗಾಗಿ ಜವಾನ್ ಚಿತ್ರದ ಗಳಿಕೆ ವಿಷ್ಯದಲ್ಲಿ ಸೌತ್ ಇಂಡಸ್ಟ್ರಿ ತುಂಬಾ ಪ್ರಮುಖವಾದ ಪಾತ್ರ ನಿರ್ವಹಿಸುತ್ತೆ ಎನ್ನಲಾಗ್ತಿದೆ. ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿ ಜವಾನ್ ಸಿನಿಮಾಗೆ ಹೆಚ್ಚು ಹೆಚ್ಚು ಶೋಗಳು ನೀಡಲಾಗಿದೆ. ಟಿಕೆಟ್​ ಕೂಡ ಅಷ್ಟೇ ವೇಗವಾಗಿ ಬುಕ್ ಆಗ್ತಿದೆ. ಹೆಚ್ಚು ಕಡಿಮೆ ಅಂದ್ರೆ ಮೊದಲ ದಿನದ ಗಳಿಕೆಯಲ್ಲಿ ಅರ್ಧದಷ್ಟು ಕಲೆಕ್ಷನ್ ಸೌತ್ ಇಂಡಸ್ಟ್ರಿಯಿಂದಲೇ ಆಗಬಹುದು ಎಂದು ಹೇಳಲಾಗ್ತಿದೆ.

ಜವಾನ್ ಚಿತ್ರದಲ್ಲಿ ಶಾರುಖ್ ಖಾನ್ ಮೂರ್ನಾಲ್ಕು ಡಿಫ್ರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಆಫೀಸರ್, ಆರ್ಮಿ ಹಾಗೂ ನೆಗೆಟಿವ್​ ಶೇಡ್​ನಲ್ಲೂ ಶಾರುಖ್ ಮಿಂಚಿದ್ದಾರೆ ಎಂಬ ಸುಳಿವು ಕೊಟ್ಟಿದೆ ಟ್ರೇಲರ್. ಹಾಗಾಗಿ ಕಿಂಗ್ ಖಾನ್ ಅಭಿಮಾನಿಗಳಿಗೆ ಜವಾನ್ ಫುಲ್ ಮೀಲ್ಸ್​ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನು ಶಾರುಖ್ ಖಾನ್​ಗೆ ನಯನತಾರ, ವಿಜಯ್ ಸೇತುಪತಿ, ಪ್ರಿಯಾಮಣಿ, ಯೋಗಿ ಬಾಬು, ಬಾಬಿ ಸಿಂಹ ಸೇರಿ ಪ್ರಮುಖ ಸೌತ್ ಸ್ಟಾರ್​ಗಳು ಸಾಥ್ ಕೊಡ್ತಿರೋದು ಚಿತ್ರದ ಕಿಕ್ ಹೆಚ್ಚಿಸಿದೆ. ದೀಪಿಕಾ ಪಡುಕೋಣೆ ಸ್ಪೆಷಲ್ ಅಪಿರಿಯೆನ್ಸ್​ ಜೋಶ್ ಹೆಚ್ಚಿಸಿದೆ. ಇನ್ನು ಸ್ಪೆಷಲ್ ಅಂದ್ರೆ ಸೌತ್ ಇಂಡಸ್ಟ್ರಿಯ ಮ್ಯಾಜಿಕಲ್ ಕಂಪೋಸ್​ ಅನಿರುದ್ಧ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡಿರೋದು ಎಕ್ಟ್ರಾ ಎನರ್ಜಿ ಕೊಟ್ಟಿದೆ.

ಮಗಳ ಜೊತೆ ತಿರುಪತಿಗೆ ಭೇಟಿ ಕೊಟ್ಟ ಶಾರುಖ್!

ಇನ್ನು ಜವಾನ್ ಸಿನಿಮಾದ ರಿಲೀಸ್​ ಹಿನ್ನೆಲೆ ಬಾಲಿವುಡ್​ ಬಾದ್​ಶಾ ತಿರುಪತಿ ಭೇಟಿ ಕೊಟ್ಟು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಜವಾನ್ ಚಿತ್ರದ ಮೇಲೆ ವೆಂಕಟೇಶ್ವರನ ಆಶೀರ್ವಾದ ಇರಲಿ ಅಂತ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಶಾರುಖ್ ಪುತ್ರಿ ಸುಹಾನಾ ಖಾನ್ ಅಪ್ಪನಿಗೆ ಸಾಥ್ ಕೊಟ್ಟಿದ್ದು, ಅಪ್ಪ ಮಗಳು ಇಬ್ಬರು ಬಿಳಿ ಬಣ್ಣದ ಡ್ರೆಸ್​ನಲ್ಲಿ ಮಿಂಚಿದ್ದಾರೆ. ಸದ್ಯಕ್ಕೆ ಪ್ಯಾನ್ ಇಂಡಿಯಾದಲ್ಲಿ ಜೈಲರ್ ಹವಾ ಇದೆ. ಸಕ್ಸಸ್​ಫುಲ್ ಆಗಿ 25 ದಿನ ಕಂಪ್ಲೀಟ್​ ಮಾಡಿ ಮುನ್ನುಗ್ಗುತ್ತಿರುವ ಜೈಲರ್ ವರ್ಲ್ಡ್​ವೈಡ್​ 650 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಮತ್ತೊಂದೆಡೆ ಬಾಲಿವುಡ್ ನಟ ಸನ್ನಿ ಡಿಯೋಲ್ ನಟನೆಯ ಗದರ್-2 ಚಿತ್ರವೂ ಬಾಕ್ಸಾಫೀಸ್​ನಲ್ಲಿ 500 ಕೋಟಿ ಬಾಚಿಕೊಂಡು ರೂಲ್ ಮಾಡ್ತಿದೆ. ಈ ಎರಡು ಚಿತ್ರಗಳ ಅಬ್ಬರದ ನಡುವೆ ಈಗ ಜವಾನ್ ಥಿಯೇಟರ್​ ಅಂಗಳಕ್ಕೆ ಎಂಟ್ರಿ ಕೊಡ್ತಿದ್ದು, ಕಿಂಗ್ ಖಾನ್​ ಟ್ರೆಂಡ್ ಸೃಷ್ಟಿಸ್ತಾರಾ ಎಂಬ ನಿರೀಕ್ಷೆ ಹುಟ್ಕೊಂಡಿದೆ.

ಒಂದು ವೇಳೆ ಜವಾನ್​ ಪಾಸಿಟಿವ್ ರೆಸ್ಪಾನ್ಸ್​ ಪಡೆದುಕೊಂಡು ಬಿಗ್ ಓಪನಿಂಗ್ ಮಾಡಿದ್ರೆ ಓಕೆ. ಒಂದು ವೇಳೆ ಜವಾನ್​ಗೆ ಅನಿರೀಕ್ಷಿತ ಫಲಿತಾಂಶ ಸಿಕ್ಕಿದ್ದೇ ಆದ್ರೆ ಜೈಲರ್ ಮತ್ತು ಗದರ್​ 2 ಚಿತ್ರಗಳಿಗೆ ಇನ್ನಷ್ಟು ಅನುಕೂಲ ಆಗುವ ಸಾಧ್ಯತೆ ಇದೆ. ಜವಾನ್​ ಮೇಲೆ ಎಕ್ಸ್​ಪೆಕ್ಟೇಶನ್ ಜಾಸ್ತಿ ಇದೆ. ಟ್ರೇಲರ್ ನೋಡಿದ್ಮೇಲೆ ಆ ನಿರೀಕ್ಷೆ ಡಬಲ್ ಆಗಿದೆ. ಪಠಾಣ್​ಗಿಂತ ಒಂದು ಹೆಜ್ಜೆ ಜವಾನ್​ ದೊಡ್ಡದಾಗಬಹುದು ಎನ್ನಲಾಗ್ತಿದೆ. ಶಾರುಖ್ ಖಾನ್​ ಅದೃಷ್ಟ ಹೇಗಿದೆ? ಕಿಂಗ್ ಖಾನ್ ಸಿನಿಮಾದ ಭವಿಷ್ಯ ಏನಾಗುತ್ತೆ ಅಂತ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಲೀಸ್​​ಗೆ ಮುನ್ನವೇ ದಾಖಲೆ.. 300 ಕೋಟಿ ವೆಚ್ಚದ ಜವಾನ್​​​ ಟಾರ್ಗೆಟ್​ ಎಷ್ಟು ಕೋಟಿ..?

https://newsfirstlive.com/wp-content/uploads/2023/09/jawan-8.jpg

Load More