newsfirstkannada.com

×

ಶಾರುಖ್​ ಖಾನ್​ ‘ಸಲಿಂಗ ಕಾಮಿ’ ಪಾತ್ರದ ಆ ವಿಡಿಯೋ ಈಗ ವೈರಲ್‌; ಅಸಲಿ ಕಾರಣವೇನು?

Share :

Published September 10, 2024 at 2:39pm

Update September 10, 2024 at 3:49pm

    ಕಿಂಗ್​ಖಾನ್ ಶಾರುಖ್​ರ 1989ರ ಆ ಸಿನಿಮಾದ ತುಣುಕು ಈಗ ವೈರಲ್

    ಅಸಲಿಗೆ ಶಾರುಖ್ ಆ ಸಿನಿಮಾದಲ್ಲಿ ಮಾಡಿದ ಪಾತ್ರ ಯಾವುದು ಗೊತ್ತಾ?

    ಶಾರುಖ್ ಹೋರಾಟದ ಹಾದಿಯನ್ನು ತೆರೆದಿಡಲಿದೆ ವೈರಲ್ ಆಗಿರುವ ದೃಶ್ಯ

ಮುಂಬೈ: ಶಾರುಖ್​ ಖಾನ್​, ಬಾಲಿವುಡ್​ ಜಗತ್ತಿನ ಅನಭಿಷಕ್ತ ದೊರೆಯಂತೆ ಹಲವು ದಶಕಗಳ ಕಾಲ ಮೆರೆದ ನಾಯಕ ನಟ. ಪ್ರತಿಸ್ಪರ್ಧಿಯೇ ಇಲ್ಲವೆನೋ ಅನ್ನುವ ಮಟ್ಟಕ್ಕೆ ಒಂದೊಂದೇ ಮೆಟ್ಟಿಲು ಏರುತ್ತಾ ಯಶಸ್ಸಿನ ಗಿರಿಯ ತುತ್ತತುದಿ ತಲುಪಿ ನಿಂತ ಛಲಗಾರ. ಇಂದು ಶಾರುಖ್​​ ಖಾನ್​ರನ್ನ ಹಲವು ಹೆಸರುಗಳಿಂದ ಗುರುತಿಸಲಾಗುತ್ತದೆ. ಕಿಂಗ್​ಖಾನ್, ಬಾಲಿವುಡ್ ಬಾದ್​ಶಾ ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಈ ಹಂತಕ್ಕೆ ತಲುಪಲು ಶಾರುಖ್ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅದೆಷ್ಟು ಸೈಕಲ್ ಹೊಡೆದಿದ್ದಾರೆ ಗೊತ್ತಾ. ಒಂದೇ ಒಂದು ಪಾತ್ರ ಸಿಕ್ಕರೆ ಸಾಕು ಅಂತ ಹಂಬಲಿಸುವ ದಿನಗಳು ಕೂಡ ಇದ್ದವು. ಆ ಹೋರಾಟದ ದಿನಗಳಲ್ಲಿ ಮಾಡಿದ ಒಂದು ಪಾತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್​ನ ಚಾರ್ಜ್​​ಶೀಟ್​ನಲ್ಲಿ ಶುಭಾ ಪೂಂಜಾ ಹೆಸರು; ಗಾಬರಿಯಾದ ನಟಿ, ಹೇಳಿದ್ದೇನು..?

ಸಾಮಾಜಿಕ ಹೋರಾಟಗಾರ್ತಿ ಅರುಂಧತಿ ರಾಯ್​ ಅವರ ಚಿತ್ರ, ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಚಿತ್ರದ ಒಂದು ತುಣುಕು ಈಗ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 1989ರಲ್ಲಿ ಬಂದ ಈ ಸಿನಿಮಾದ ಹೆಸರು ‘In Which Annie Gives It Those Ones’, ಇದರಲ್ಲಿ ಶಾರುಖ್ ಖಾನ್ ಗೇ ಪಾತ್ರ ಅಂದ್ರೆ ಸಲಿಂಗಕಾಮಿಯ ಮಾತ್ರವನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ಆನಂದ ಗ್ರೋವರ್ ಪಾತ್ರದಲ್ಲಿ ಅಂದಿನ ನಟ ದಿಗ್ಗಜ ಅರ್ಜುನ್ ರೈನಾ ಕಾಣಿಸಿಕೊಂಡಿದ್ದಾರೆ. ಒಬ್ಬ ಅತ್ಯುತ್ತಮ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡ ಇವರು ಮುಂದೆ ಓದುವುದನ್ನು ಬಿಟ್ಟು ದೇಶದ ಮುಂದಿರುವ ಸಮಸ್ಯೆಗಳ ಪರಿಹಾರಕ್ಕೆ ನಿಲ್ಲುತ್ತಾರೆ. ಇದರಲ್ಲಿ ಅರುಂಧತಿನ ರಾಯ್ ಕೂಡ ಆನಂದ ಗ್ರೋವರ್​ನ ಪ್ರೇಯಸಿಯಾಗಿ ಕಾಣಿಸಿಕೊಂಡಿದ್ದಾರೆ. ಬೊಹಮೆನ್ ರಾಧಾ ರೋಷನ್ ಸೇಠ, ರಿತುರಾಜ್ ಸಿಂಗ್ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಗೆದ್ದ ಮನೋಜ್ ಬಾಜಪೇಯ್​ ಕೂಡ ಈ ಸಿನಿಮಾದಲ್ಲಿ ಸಣ್ಣ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್ ಆಪ್ತ ನಾಗರಾಜ್ ಆಯ್ತು, ಇದೀಗ ಮತ್ತೊಬ್ಬ ನಟನ ಆಪ್ತನ ಬಂಧನ

ಈ ಸಿನಿಮಾವನ್ನು ಅರುಂಧತಿ ರಾಯ್ ಅವರ ಮಾಜಿ ಪತಿ ಪ್ರದೀಪ್ ಕಿಶನ್ ನಿರ್ದೇಶಿಸಿದ್ದರು. ಈ ಒಂದು ಸಿನಿಮಾಗೆ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಬಂದಿದ್ದವು ಅತ್ಯುತ್ತಮ ಸ್ಕ್ರೀನ್ ಪ್ಲೇ ಅರುಂಧತಿ ರಾಯ್ ಹಾಗೂ ಬೆಸ್ಟ್ ಇಂಗ್ಲಿಷ್ ಫೀಚರ್ ಫಿಲ್ಸ್ ಅವಾರ್ಡ್​ಗಳನ್ನು ಪಡೆದುಕೊಂಡಿತ್ತು ಈ ಸಿನಿಮಾ ರಿಲೀಸ್ ಆಗಿದ್ದು 1989ರಲ್ಲಿ ಇದೇ ವರ್ಷದಲ್ಲಿ ಶಾರುಖ್ ಖಾನ್ ಟಿವಿ ಕಾರ್ಯಕ್ರಮದಲ್ಲಿ ಪದಾರ್ಪಣೆ ಮಾಡಿದ್ದರು. ಫೌಜಿ ಅನ್ನೋ ಧಾರಾವಾಹಿಯಲ್ಲಿ ಅವರು ಕಾಣಿಸಿಕೊಂಡಿದ್ದರು.

ಇದೇ ಸಮಯದಲ್ಲಿ ಬಿಡಗಡೆಯಾದ ಈ ಸಿನಿಮಾದಲ್ಲಿ ಶಾರುಖ್ ಖಾನ್ ಇರುವ ಒಂದು ತುಣುಕು, ಅವರು ಗೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ಎರಡರಿಂದ ಮೂರು ದೃಶ್ಯಗಳಲ್ಲಿ ಬಂದು ಹೋಗುವ ಪಾತ್ರವದು. ಅದರಲ್ಲಿಯೂ ಕೂಡ ಶಾರುಖ್ ನಟನೆ ಅದ್ಭುತ ಎಂದು ನೆಟ್ಟಿಗರು ಶಾರುಖ್​ರನ್ನ ಕೊಂಡಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಶಾರುಖ್​ ಖಾನ್​ ‘ಸಲಿಂಗ ಕಾಮಿ’ ಪಾತ್ರದ ಆ ವಿಡಿಯೋ ಈಗ ವೈರಲ್‌; ಅಸಲಿ ಕಾರಣವೇನು?

https://newsfirstlive.com/wp-content/uploads/2023/07/Sharukh-Khan.jpg

Load More