newsfirstkannada.com

×

ಬಾಬರ್ ಅಜಂ ಕೆಳಗಿಳಿಸಿ ನೂತನ ನಾಯಕರ ಆಯ್ಕೆ ಮಾಡಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್..!

Share :

Published November 16, 2023 at 12:28pm

    ವಿಶ್ವಕಪ್ ಸೋಲಿನ ಬೆನ್ನಲ್ಲೇ ಬಾಬರ್ ಅಜಂ ರಾಜೀನಾಮೆ

    ಕ್ಯಾಪ್ಟನ್ಸಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹ ಇತ್ತು

    9 ಪಂದ್ಯಗಳನ್ನು ಆಡಿ ಐದರಲ್ಲಿ ಸೋತಿರುವ ಪಾಕಿಸ್ತಾನ

ಬಾಬರ್ ಅಜಂ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಪಾಕಿಸ್ತಾನ ತಂಡಕ್ಕೆ ನೂತನ ಸಾರಥಿಯ ಆಯ್ಕೆ ಆಗಿದೆ. ಟಿ-20 ಹಾಗೂ ಟೆಸ್ಟ್ ಫಾರ್ಮ್ಯಾಟ್​ಗೆ ಹೊಸ ಸಾರಥಿಯ ಆಯ್ಕೆ ಆಗಿದೆ.

ಶಾಹೀನ್ ಅಫ್ರಿದಿಯನ್ನು ಟಿ-20ಗೆ ನಾಯಕರನ್ನಾಗಿ ನೇಮಕ ಮಾಡಿದ್ರೆ, ಶನ್ ಮಸೂದ್​​ರನ್ನು ಟೆಸ್ಟ್ ತಂಡಕ್ಕೆ ಕ್ಯಾಪ್ಟನ್ ಆಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ (ಪಿಸಿಬಿ) ನೇಮಿಸಿದೆ. ನೂತನ ನಾಯಕರ ಆಯ್ಕೆ ಬೆನ್ನಲ್ಲೇ ಪಿಸಿಬಿ ಟ್ವಿಟರ್​ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.

ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್, ಮೊಹಮ್ಮದ್ ಹಫೀಜ್, ಯೂನಿಸ್ ಖಾನ್, ಸೋಹಿಲ್ ತನ್ವರ್, ವಹಾಬ್ ರಿಯಾಜ್, ಶಾಹೀದ್ ಅಫ್ರಿದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಶಹೀನ್ ಅಫ್ರಿದಿಯನ್ನು ಕ್ಯಾಪ್ಟನ್ ಆಗಿ ನೇಮಕ ಮಾಡಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಎಡಗೈ ವೇಗಿ ಆಗಿರುವ ಅಫ್ರಿದಿ, ಪಾಕಿಸ್ತಾನ್ ಸೂಪರ್ ಲೀಗ್​ (ಪಿಎಸ್​ಎಲ್​) ನಲ್ಲಿ ಲಾಹೋರ್ ಕ್ವಾಲೆಂಡರ್ಸ್​ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರು ಈಗಾಗಲೇ ಎರಡು ಬಾರಿ ಪಿಎಸ್​ಎಲ್ ಕಪ್ ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ.

23 ವರ್ಷದ ಶಹೀನ್ ಅಫ್ರಿದಿಗೆ ಟಿ-20ಯಲ್ಲಿ ಮಾತ್ರ ಅನುಭವ ಇದೆ. 52 ಪಂದ್ಯಗಳನ್ನು ಆಡಿರುವ ಅಫ್ರಿದಿ 7.63 ಎಕನಾಮಿಯಲ್ಲಿ 64 ವಿಕೆಟ್ ಪಡೆದುಕೊಂಡಿದ್ದಾರೆ. ಪಾಕಿಸ್ತಾನ ತಂಡದ ಬೌಲಿಂಗ್ ವಿಭಾಗದ ಬೆನ್ನೆಲಬು ಶಾಹೀನ್ ಅಫ್ರಿದಿ ಆಗಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬಾಬರ್ ಅಜಂ ಕೆಳಗಿಳಿಸಿ ನೂತನ ನಾಯಕರ ಆಯ್ಕೆ ಮಾಡಿದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್..!

https://newsfirstlive.com/wp-content/uploads/2023/10/Netherlands-vs-Pak.jpg

Load More