newsfirstkannada.com

ಟೀಮ್ ಇಂಡಿಯಾ ವಿರುದ್ಧ ನಾಲಿಗೆ ಹರಿಬಿಟ್ಟ ಅಫ್ರಿದಿ; ಫ್ಯಾನ್ಸ್​ ಹಿಗ್ಗಾಮುಗ್ಗಾ ತರಾಟೆ

Share :

21-11-2023

    ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು

    ಭಾರತದ ಸೋಲನ್ನು ಟೀಕಿಸಿ, ಕೆಂಗಣ್ಣಿಗೆ ಗುರಿಯಾದ ಅಫ್ರಿದಿ

    ನವೆಂಬರ್ 19 ರಂದು ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯ

ಏಕದಿನ ವಿಶ್ವಕಪ್ ಸೋತ ಟೀಮ್ ಇಂಡಿಯಾವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಟೀಕಿಸಿದ್ದಾರೆ. ಅತಿ ಹೆಚ್ಚು ಪಂದ್ಯಗಳನ್ನು ಗೆದ್ದರೆ ಅತಿಯಾದ ಆತ್ಮವಿಶ್ವಾಸ ಬರುತ್ತದೆ. ಅದು ನಿಮ್ಮ ಅವನತಿಗೆ ಕಾರಣವಾಗಬಹುದು ಎಂದು ಅಫ್ರಿದಿ ನಾಲಿಗೆ ಹರಿಬಿಟ್ಟಿದ್ದಾರೆ. ಅಫ್ರಿದಿಯ ಈ ಹೇಳಿಕೆಯನ್ನು ಟೀಮ್​ ಇಂಡಿಯಾದ ಅಭಿಮಾನಿಗಳು ಖಂಡಿಸಿದ್ದಾರೆ.

ನವೆಂಬರ್ 19 ರಂದು ಅಹಮದಾಬಾದ್​ನಲ್ಲಿ ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು. ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಸೆಣಸಾಟದಲ್ಲಿ, ರೋಹಿತ್ ಪಡೆ ಸೋಲಿಗೆ ಶರಣಾಯ್ತು. ಮೊದಲು ಬ್ಯಾಟ್ ಮಾಡಿದ್ದ ಭಾರತ, 10 ವಿಕೆಟ್ ಕಳೆದುಕೊಂಡು 240 ರನ್​ಗಳಿಸಿತ್ತು. 241 ರನ್​ಗಳ ಗುರಿಯನ್ನು ಬೆನ್ನು ಹತ್ತಿದ್ದ ಆಸ್ಟ್ರೇಲಿಯಾ 43ನೇ ಓವರ್​ನಲ್ಲಿ ಸುಲಭವಾಗಿ ಗುರಿ ಮುಟ್ಟಿತು.

ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಭಾರತ ಎನಿಸಿಕೊಂಡಿತ್ತು. ಆಡಿರುವ ಎಲ್ಲಾ 10 ಪಂದ್ಯಗಳನ್ನು ಗೆದ್ದಿದ್ದ ಭಾರತ ಕೊನೆಯ ಪಂದ್ಯದಲ್ಲಿ ಸೋಲನ್ನು ಕಂಡು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. 10 ಪಂದ್ಯಗಳನ್ನು ಗೆದ್ದು ಫೈನಲ್​​ನಲ್ಲಿ ಸೋತಿದ್ದಕ್ಕೆ ಭಾರತ ಭಾರೀ ಟೀಕೆಗೆ ಒಳಗಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಮ್ ಇಂಡಿಯಾ ವಿರುದ್ಧ ನಾಲಿಗೆ ಹರಿಬಿಟ್ಟ ಅಫ್ರಿದಿ; ಫ್ಯಾನ್ಸ್​ ಹಿಗ್ಗಾಮುಗ್ಗಾ ತರಾಟೆ

https://newsfirstlive.com/wp-content/uploads/2023/11/ROHIT-14.jpg

Load More