newsfirstkannada.com

Jawan: ನಂಬಲೇಬೇಕು! ಅತಿ ದೊಡ್ಡ ದಾಖಲೆ ಬರೆದ ‘ಜವಾನ್​’.. ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

Share :

09-09-2023

    ರೆಡ್​​ ಚಿಲ್ಲೀಸ್​ ಎಂಟರ್​ಟೈನ್​ಮೆಂಡ್​​ ಹಂಚಿಕೊಂಡಿದೆ ಮಾಹಿತಿ

    ಮೂರ್ನಾಲ್ಕು ಡಿಫ್ರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡ ಶಾರುಖ್​​ ಖಾನ್

    ಒಂದೇ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಭಾರತೀಯ ಸಿನಿಮಾ ಇದೇನಾ?

ಭಾರತೀಯ ಚಿತ್ರರಂಗದಲ್ಲೇ ಅತೀ ದೊಡ್ಡ ದಾಖಲೆಯನ್ನ ಶಾರುಖ್​ ಖಾನ್​ ನಟನೆಯ ‘ಜವಾನ್​’ ಬರೆದಿದೆ. ಭಾರತದಲ್ಲಿ ಮಾತ್ರ ಅಲ್ಲ ವಿದೇಶದಲ್ಲೂ ಕೂಡ ಜವಾನ್​ನ ಕಮಾಲ್​​​ ಕಮಾಯಿ ಮಾಡಿದೆ.

ಮೊದಲ ದಿನದ ಕಲೆಕ್ಷನ್​ ಬಗ್ಗೆ ಚಿತ್ರ ನಿರ್ಮಾಣ ಸಂಸ್ಥೆ ರೆಡ್​​ ಚಿಲ್ಲೀಸ್​ ಎಂಟರ್​ಟೈನ್​ಮೆಂಡ್​​ ಮಾಹಿತಿ ಹಂಚಿಕೊಂಡಿದೆ. ಮೊದಲ ದಿನ 129. 6 ಕೋಟಿ ಗಳಿಸಿದೆ ಅಂತ ಹೇಳಿದೆ. ಒಂದೇ ದಿನ ವಿಶ್ವಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಭಾರತೀಯ ಸಿನಿಮಾ ಅನ್ನೋ ಕೀರ್ತಿಗೆ ಭಾಜನವಾಗಿದೆ.

ಅಂದಹಾಗೆಯೇ, ಈ ಚಿತ್ರದಲ್ಲಿ ನಟ ಕಿಂಗ್​​ಖಾನ್​​​ ಶಾರುಖ್​​ ಖಾನ್​​ ಮೂರ್ನಾಲ್ಕು ಡಿಫ್ರೆಂಟ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಆಫೀಸರ್, ಆರ್ಮಿ ಹಾಗೂ ನೆಗೆಟಿವ್​ ಶೇಡ್​ನಲ್ಲೂ ಶಾರುಖ್ ಮಿಂಚಿದ್ದಾರೆ ಎಂಬ ಸುಳಿವು ಟ್ರೇಲರ್ ಕೊಟ್ಟಿತ್ತು. ಹಾಗಾಗಿ ಕಿಂಗ್ ಖಾನ್​ನ ಜವಾನ್ ಚಿತ್ರವನ್ನು ನೋಡಲು ಫ್ಯಾನ್ಸ್​​ ಬಹಳ ಉತ್ಸುಕರಾಗಿದ್ದರು. ಕೊನೆಗೂ ನೆಚ್ಚಿನ ನಟನ ಚಿತ್ರವನ್ನು ನೋಡಿದ ಫುಲ್​ ಖುಷ್​ ಆಗಿದ್ದಾರೆ.

ಹಿಂದಿ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲಿ ಭಾಷೆಗಳಲ್ಲಿ ರಿಲೀಸ್​​ ಆದ ಈ ಚಿತ್ರದಲ್ಲಿ ದಕ್ಷಿಣದ ಜನಪ್ರಿಯ ನಟಿ ನಯನತಾರಾ, ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ದೀಪಿಕಾ ಪಡುಕೋಣೆ, ಯೋಗಿ ಬಾಬು, ಸುನಿಲ್ ಗ್ರೋವರ್, ಸಿಮರ್‌ಜೀತ್ ಸಿಂಗ್ ನಾಗ್ರಾ, ಅಜ್ಜಿ ಬಾಗ್ರಿಯಾ ಮತ್ತು ಮನೋಹರ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಸದ್ಯ ಸಿನಿಮಾ ರಿಲೀಸ್​ ಆಗಿ ಮೊದಲ ದಿನವೇ ಭರ್ಜರಿ ಕಲೆಕ್ಷನ್​​​ ಮಾಡಿದ ಜವಾನ್​ ಮುಂದಿನ ದಿನಗಳಲ್ಲಿ ಏನೆಲ್ಲಾ ದಾಖಲೆ ನಿರ್ಮಿಸಲಿದೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Jawan: ನಂಬಲೇಬೇಕು! ಅತಿ ದೊಡ್ಡ ದಾಖಲೆ ಬರೆದ ‘ಜವಾನ್​’.. ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

https://newsfirstlive.com/wp-content/uploads/2023/09/jawan.webp

Load More