newsfirstkannada.com

JawanTrailer: ಹಾರ್ಟ್‌ ಬೀಟ್ ಹೆಚ್ಚಿಸಿದ ಜವಾನ್‌; ಟ್ರೈಲರ್‌ನಲ್ಲೇ ಧೂಳೆಬ್ಬಿಸಿದ ಶಾರುಖ್ ಖಾನ್‌ ಡೈಲಾಗ್‌ ಯಾವುದು?

Share :

31-08-2023

    ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದ ಶಾರುಖ್‌ ಖಾನ್‌

    ಸೆಪ್ಟೆಂಬರ್ 7ರಂದು ಜವಾನ್ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜು

    ಜವಾನ್​ ಚಿತ್ರದಲ್ಲಿ ಹಲವಾರು ಸ್ಟಾರ್‌ ನಟ-ನಟಿಯರ ದಂಡು

ಬಾಲಿವುಡ್​ ಕಿಂಗ್ ಖಾನ್ ಶಾರುಖ್‌ ಖಾನ್‌ ನಟನೆಯ ಬಹುನಿರೀಕ್ಷಿತ ಜವಾನ್‌ ಸಿನಿಮಾದ ಟ್ರೈಲರ್ ರಿಲೀಸ್‌ ಆಗಿದೆ. ಕಾಲಿವುಡ್​​ ಸೂಪರ್​​ ಹಿಟ್​​ ಡೈರೆಕ್ಟರ್​ ಅಟ್ಲಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಶಾರುಖ್​​​ ಅಭಿನಯದ ಜವಾನ್​​​ ಚಿತ್ರದ ಟೀಸರ್​​ ಬೆನ್ನಲ್ಲೇ ಟ್ರೈಲರ್​ ಈಗ ಸಾಕಷ್ಟು ಹಿಟ್​ ಆಗುತ್ತಿದೆ. ರಿಲೀಸ್​ ಆದ ಕೆಲವೇ ನಿಮಿಷಗಳಲ್ಲಿ ಜವಾನ್​ ಸಿನಿಮಾದ ಟ್ರೈಲರ್ ಸೋಷಿಯಲ್‌ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ಟ್ರೈಲರ್‌ನಲ್ಲೇ ಜವಾನ್ ಅವತಾರ ಧೂಳೆಬ್ಬಿಸಿದ್ರೆ, ಶಾರುಖ್ ಖಾನ್ ಬೇಟೆ ಕೋ ಹಾಥ್ ಲಗಾನೆ ಸೆ ಪೆಹಲೆ, ಬಾಪ್‌ ಸೆ ಬಾತ್ ಕರ್‌.. ಅಂದ್ರೆ ಮಗನ ಮೇಲೆ ಕೈ ಹಾಕುವ ಮೊದಲು ಅಪ್ಪನ ಬಗ್ಗೆ ಮಾತಾಡು ಅನ್ನೋ ಡೈಲಾಗ್ ಸಖತ್ ಫೇಮಸ್ ಆಗಿದೆ.

ನಿನ್ನೆಯಷ್ಟೇ ಚೆನ್ನೈನಲ್ಲಿ ಅದ್ಧೂರಿಯಾಗಿ ಜವಾನ್​​ ಚಿತ್ರದ ಸಾಂಗ್‌ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಶಾರುಖ್ ಖಾನ್‌, ವಿಜಯ್‌ ಸೇತುಪತಿ, ನಿರ್ದೇಶಕ ಅಟ್ಲಿ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್, ನಟರಾದ ಯೋಗಿ ಬಾಬು, ಸಾನ್ಯಾ ಮಲ್ಹೋತ್ರಾ ಮತ್ತು ಪ್ರಿಯಾ ಮಣಿ ಭಾಗವಹಿಸಿದ್ದರು. ಇದೀಗ ಟ್ರೈಲರ್ ರಿಲೀಸ್‌ ಆಗಿ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿಸಿದೆ. ಈ ಚಿತ್ರವು ಸೆಪ್ಟೆಂಬರ್ 7ರಂದು ತೆರೆಗೆ ಬರಲಿದೆ.

ಇನ್ನು ರಿಲೀಸ್​ ಆದ ಜವಾನ್ ಟ್ರೈಲರ್​ನಲ್ಲಿ ನಟ ಶಾರುಖ್‌ ಖಾನ್‌ ಹತ್ತು ಹಲವು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೇಶವನ್ನು ಉಳಿಸುವ ಸೈನಿಕನಾಗಿ, ಖಡಕ್​ ಪೊಲೀಸ್ ಅಧಿಕಾರಿ​ಯಾಗಿ, ಮತ್ತೆ ಬೋಳು ತಲೆಯಲ್ಲಿ ಕಾಣಿಸಿಕೊಂಡರೆ, ಜೊತೆಗೆ ಗಡ್ಡಧಾರಿ ಹೀಗೆ ಹಲವಾರು ಪಾತ್ರಗಳಲ್ಲಿ ಶಾರುಖ್‌ ಖಾನ್‌ ಮಿಂಚಿದ್ದಾರೆ. ಜವಾನ್​ ಸಿನಿಮಾದ ಟ್ರೈಲರ್ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ರಿಲೀಸ್​ ಆಗಿದೆ. ಆದರೆ ಜವಾನ್ ಚಿತ್ರದ ಟ್ರೈಲರ್ ಕನ್ನಡದಲ್ಲಿ ಏಕೆ ರಿಲೀಸ್​ ಆಗಿಲ್ಲ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

JawanTrailer: ಹಾರ್ಟ್‌ ಬೀಟ್ ಹೆಚ್ಚಿಸಿದ ಜವಾನ್‌; ಟ್ರೈಲರ್‌ನಲ್ಲೇ ಧೂಳೆಬ್ಬಿಸಿದ ಶಾರುಖ್ ಖಾನ್‌ ಡೈಲಾಗ್‌ ಯಾವುದು?

https://newsfirstlive.com/wp-content/uploads/2023/08/jawan-1.jpg

Load More