Advertisment

ಶಕೀರಾ ಸೊಂಟ ಬಳಕುವಾಗ ಎಡವಟ್ಟು.. ವೇದಿಕೆ ಮೇಲೆ ಭಾರೀ ಮುಜುಗರ; ವಿಡಿಯೋ ವೈರಲ್‌!

author-image
Gopal Kulkarni
Updated On
ಶಕೀರಾ ಸೊಂಟ ಬಳಕುವಾಗ ಎಡವಟ್ಟು.. ವೇದಿಕೆ ಮೇಲೆ ಭಾರೀ ಮುಜುಗರ; ವಿಡಿಯೋ ವೈರಲ್‌!
Advertisment
  • ಡಾನ್ಸ್ ಮಾಡುತ್ತಿದ್ದ ಸ್ಟೇಜ್​ನಿಂದ ಇಳಿದು ಆಚೆ ಹೋಗಿದ್ದೇಕೆ ಶಕೀರಾ?
  • ಅಭಿಮಾನಿಗಳ ದುರ್ವರ್ತನೆ ಕಂಡು ಸಿಂಗರ್ ಶಕೀರಾ ಹೇಳಿದ್ದು ಏನು?
  • ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್.. ನೆಟ್ಟಿಗರಿಂದ ಛೀಮಾರಿ!

ಲ್ಯಾಟೀನ್ ಮ್ಯೂಸಿಕ್​ನ ಕ್ವೀನ್ ಎಂದೇ ಬಣ್ಣಿಸುವ ಕೊಲಂಬಿಯನ್ ಸಿಂಗರ್ ಶಕೀರಾ ಇತ್ತೀಚೆಗೆ ಸ್ಟೇಜ್​ನಲ್ಲಿ ತಮ್ಮದೇ ಅಲ್ಬಮ್​ಗೆ ಡಾನ್ಸ್ ಮಾಡುವ ವೇಳೆ ಅಭಿಮಾನಿಗಳ ಹುಚ್ಚಾಟ ಕಂಡು ಬೇಸರಿಂದ ವೇದಿಕೆಯಿಂದ ಇಳಿದು ಹೊರಗೆ ಹೋಗಿದ್ದಾರೆ. ಸೊಲ್ತೇರಾ ಎಂಬ ಹೊಸ ಸಾಂಗ್​​ಗೆ ಡಾನ್ಸ್ ಮಾಡುವಂತೆ ಒಂದು ಆಹ್ವಾನ ಬಂದಿತ್ತು. ಆಹ್ವಾನದಂತೆ ಶಕೀರಾ ವೇದಿಕೆ ಮೇಲೆ ಬಂದು ಡಾನ್ಸ್​ ಮಾಡ ತೊಡಗಿದಾಗ, ವೇದಿಕೆ ಕೆಳಗಿದ್ದ ಕೆಲವರು ಆಕೆ ಡ್ರೆಸ್​ನ್ನು ವಿಡಿಯೋ ಮಾಡತೊಡಗಿದರು. ಇದನ್ನು ಗಮನಿಸಿದ ಶಕೀರಾ ಈ ರೀತಿಯ ವರ್ತನೆಯನ್ನು ತೋರಬೇಡಿ ಎಂದು ಡಾನ್ಸ್ ಮಾಡುತ್ತಲೇ ಸಂಜ್ಞೆಯ ಮೂಲಕ ತಿಳಿಸಿದ್ದಾರೆ. ಆದ್ರೆ ಕೆಳಗಿದ್ದ ಅಭಿಮಾನಿಗಳು ತಮ್ಮ ವರ್ತನೆಯನ್ನು ಬದಲಿಸಿಲ್ಲ. ವಿಡಿಯೋ ಮಾಡುವುದನ್ನು ಮುಂದುವರಿಸಿದ್ದಾರೆ. ಇದರಿಂದ ಬೇಸತ್ತ ಶಕೀರಾ ಸ್ಟೇಜ್​ನಿಂದ ಇಳಿದು ಆಚೆ ಹೋಗಿದ್ದಾರೆ.

Advertisment

ಇದನ್ನೂ ಓದಿ: ಟ್ರಂಪ್​ಗೆ ಜೀವ ಭಯ.. ಮತ್ತೆ ಗುಂಡಿನ ದಾಳಿ, ಈ ಬಾರಿ ಬಚಾವ್ ಆಗಿದ್ದು ಹೇಗೆ..?

ಶಕೀರಾ ವಿಡಿಯೋ ಮಾಡುತ್ತಿರುವ ಅಭಿಮಾನಿಗಳಿಗೆ ಅನೇಕ ಬಾರಿ ಎಚ್ಚರಿಕೆ ಕೊಡುತ್ತಲೇ ತಮ್ಮ ಬಟ್ಟೆಯನ್ನು ಪದೇ ಪದೇ ಅಡ್ಜಸ್ಟ್​ ಮಾಡಿಕೊಳ್ಳುತ್ತಲೇ ಹೇಳಿದ್ರು. ಆದ್ರೂ ಕೂಡ ವಿಡಿಯೋ ಮಾಡುತ್ತಿರುವವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣದಿದ್ದಾಗ ಸ್ಟೇಜ್​ನಿಂದ ಇಳಿದು ಕೆಳಗೆ ಹೋದರು.

publive-image

ಇದನ್ನೂ ಓದಿ:ಕಮಲಾ ಹ್ಯಾರಿಸ್​ ಕಿವಿಯಲ್ಲಿ ಇರೋದೇನು? ಮೆಗಾ ಡಿಬೇಟ್‌ ಮುಗಿದ ಬೆನ್ನಲ್ಲೇ ಭಾರೀ ಚರ್ಚೆ; ಏನಿದರ ಅಸಲಿಯತ್ತು?
ಸದ್ಯ ಶಕೀರಾ ವೇದಿಕೆಯಿಂದ ಆಚೆ ಹೋದ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಅನೇಕರು ಅಭಿಮಾನಿಗಳ ಈ ಹುಚ್ಚು ವರ್ತನೆಯನ್ನು ಖಂಡಿಸಿದ್ದಾರೆ. ಇದು ನಿಜಕ್ಕೂ ಎಲ್ಲರಿಗೂ ಬೇಸರ ತರಿಸುವಂತ ವರ್ತನೆ. ಕಲಾವಿದರಿಗೆ ಅವರದೇ ಆದಂತಹ ಗೌರವ ಇರುತ್ತದೆ. ಆ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.

Advertisment


ಅಷ್ಟು ಮಾತ್ರವಲ್ಲ ಕಲಾವಿದೆ ಶಕೀರಾ ತನ್ನದೇ ಹಾಡಿಗೆ ಡಾನ್ಸ್ ಮಾಡುತ್ತಿದ್ದರು. ಈ ವೇಳೆ ಹಲವು ಜನರ ವರ್ತನೆಯನ್ನು ನೋಡಿ ಹಾಗೆ ಮಾಡದಂತೆಯೂ ಕೂಡ ತಾಕೀತು ಮಾಡಿದರು. ಇಂತಹ ಸಭೆಗೆ ಬಂದಾಗ ಜನರು ಒಂದು ಸಾಮಾನ್ಯವಾದ ಸಭ್ಯತೆಯನ್ನು ಪಾಲಿಸಬೇಕಾಗುತ್ತದೆ. ಇಷ್ಟೆಲ್ಲಾ ಆದರೂ ಶಕೀರಾ ಮಾತ್ರ ಒಂದು ಸಭ್ಯ ಪ್ರತಿಕ್ರಿಯೆ ಅನ್ನುವಂತೆ ವೇದಿಕೆಯಿಂದ ಕೆಳಗಿಳಿದು ಬಂದಿದ್ದನ್ನು ಮೆಚ್ಚಲೇಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment