ಉಚಿತ ಟಿಕೆಟ್ಗಾಗಿ ನಡೀತು ಗಲಾಟೆ
ಸೀಟ್ ಗಿಟ್ಟಿಸಿಕೊಳ್ಳಲು ಹೆಂಗೆಲ್ಲ ಸರ್ಕಸ್?
ಸರ್ಕಾರಿ ಬಸ್ಗಳಿಗೆ ಹೊಸ ಕಳೆ
ಸರ್ಕಾರಿ ಬಸ್ಗಳಲ್ಲಿ ಸ್ತ್ರೀಯರ ಉಚಿತ ಪ್ರಯಾಣಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ರಾಜ್ಯಾದ್ಯಂತ ಸರ್ಕಾರಿ ಬಸ್ಗಳು ಫುಲ್ ರಶ್ನಲ್ಲೇ ಓಡಾಡಿದ್ವು. ನಿಲ್ದಾಣಗಳು ಹಬ್ಬದ ವಾತಾವರಣವನ್ನೇ ಸೃಷ್ಟಿಸಿದ್ವು. ಇತ್ತ, ಮಹಿಳೆಯರು ಸೀಟ್ಗಾಗಿ ಫೈಟ್ ನಡೆಸಿದ್ರೆ, ಗಡಿ ಭಾಗದಲ್ಲಿ ಕೆಲವರು ಟಿಕೆಟ್ ವಿಚಾರದಲ್ಲಿ ಗಲಾಟೆ ಕೂಡ ನಡೆಸಿದ್ರು. ಮೊದಲ ದಿನದ ಪ್ರಯಾಣದ ಮೊತ್ತದ ಲೆಕ್ಕವನ್ನ ಇಲಾಖೆ ನೀಡಿದೆ.
ಸರ್ಕಾರಿ ಬಸ್ ಅಂದ್ರೆ ಮೂಗು ಮುರಿಯುತ್ತಿದ್ದ ನಾರಿಯರ ಪಾಲಿಗೆ ಈಗ ಅದೇ ನೆಚ್ಚಿನ ರಥವಾಗಿದೆ. ಹಿಂದೆಂದಿಗಿಂತಲೂ ಸರ್ಕಾರಿ ಬಸ್ಗಳು ತುಂಬಿ ತುಳುಕ್ತಿವೆ. ಬಸ್ಗಳಿಗೂ ಜೀವಕಳೆ ಬಂದಿದ್ದು, ನಾ ಮುಂದು ತಾ ಮುಂದು ಅಂತ ನೂಕು ನುಗ್ಗಲು ಶುರುವಾಗಿದೆ. ಪ್ರತಿ ಸೀಟ್ಗಳಲ್ಲೂ ವನಿತೆಯರದ್ದೆ ದರ್ಬಾರ ಆರಂಭವಾಗಿದೆ. ಮೊನ್ನೆ ಶಕ್ತಿ ಚಾಲನೆ ಸಿಕ್ಕಿದ್ದು, ನಿನ್ನೆ 2ನೇ ದಿನ ಯೋಜನೆಗೆ ಸ್ತ್ರೀಯರು ಭರ್ಜರಿ ಶಕ್ತಿ ತುಂಬಿದ್ದಾರೆ.
ಮೊದಲ ದಿನ 5 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ!
ಶಕ್ತಿ ಯೋಜನೆ ಈಗ ಮಹಿಳೆಯರ ಪಾಲಿಗೆ ಸ್ತ್ರೀಶಕ್ತಿ ಆಗಿದೆ. ಬಸ್ನಲ್ಲಿನ ಉಚಿತ ಪ್ರಯಾಣ ರಾಜ್ಯದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.. ಮೊದಲ ದಿನವೇ 5 ಲಕ್ಷಕ್ಕಿಂತಲೂ ಅಧಿಕ ಮಹಿಳೆಯರು ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ.. ನಿನ್ನೆ ಒಂದೇ ದಿನ 5,71,023 ಮಹಿಳೆಯರ ಪ್ರಯಾಣ ಬೆಳೆಸಿದ್ದು, ಶಕ್ತಿ ಯೋಜನೆಯ ಮೌಲ್ಯ 1 ಕೋಟಿ 40 ಲಕ್ಷ 22 ಸಾವಿರ 898 ರೂಪಾಯಿ ಅಂತ ಅಂದಾಜಿಸಲಾಗಿದೆ.
ಸ್ತ್ರೀಗೆ ಸಾರಿಗೆ ಶಕ್ತಿ!
KSRTC: ಪ್ರಯಾಣಿಸಿದ ಮಹಿಳೆಯರು : 1,93, 831
ಮೌಲ್ಯ : ₹58,16,178
BMTC: ಪ್ರಯಾಣಿಸಿದ ಮಹಿಳೆಯರು : 2,01,215
ಮೌಲ್ಯ : ₹26,19,604
NWKRTC: ಪ್ರಯಾಣಿಸಿದ ಮಹಿಳೆಯರು : 1,22,354
ಮೌಲ್ಯ : ₹36,17,096
KKRTC: ಪ್ರಯಾಣಿಸಿದ ಮಹಿಳೆಯರು : 53,623
ಮೌಲ್ಯ : ₹19,70,000
ಗಡಿಜಿಲ್ಲೆ ಬೀದರ್ನಲ್ಲಿ ನಿಲ್ದಾಣಗಳಲ್ಲಿ ಮಹಿಳೆಯರ ಸಂಖ್ಯೆ ದುಪ್ಪಟ್ಟಿತ್ತು.. ತವರು ಮನೆ, ಅಣ್ಣ ತಂಗಿ ಮನೆ, ದೇವರು ದಿಂಡಿರೂ ಅಂತ ಬಸ್ ಹತ್ತಿದ್ದಾರೆ. ಇದರಿಂದ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುವ ಬಸ್‌ಗಳಲ್ಲೂ ಜನದಟ್ಟಣೆ ಹೆಚ್ಚಾಗಿತ್ತು. ಒಬ್ಬರು ಧನ್ಯವಾದ ತಿಳಿಸಿದ್ರೆ, ಇನ್ನೊಬ್ಬರು ಒಂದು ಕೈಯಲ್ಲಿ ಕೊಟ್ಟು ಇನ್ನೊಂದರಲ್ಲಿ ಕಿತ್ತುಕೊಳ್ತಾರೆ ಅಂತ ಅದೇ ಬಸ್ನಲ್ಲಿ ಉಚಿತ ಪ್ರಯಾಣ ಮಾಡಿದ್ರು.
ರಾಯಚೂರು ಜಿಲ್ಲೆಯಲ್ಲಿ ಅಂತರ್ ರಾಜ್ಯ ಸಂಚರಿಸುವ ಬಸ್ನಲ್ಲಿ ಉಚಿತ ಟಿಕೆಟ್ಗಾಗಿ ಗಲಾಟೆ ಆಗಿದೆ.. ತನ್ನ ಹೆಂಡತಿ ಮತ್ತು ಮಹಿಳೆಯರಿಗೆ ಮಂತ್ರಾಲಯಕ್ಕೆ ಫ್ರೀ ಟಿಕೆಟ್ ಬೇಕೆಂದು ವ್ಯಕ್ತಿಯೊಬ್ಬ ಜಗಳ ಕಾದಿದ್ದಾನೆ. ಮುದ್ದೇಬಿಹಾಳ-ಮಂತ್ರಾಲಯ ಬಸ್ನಲ್ಲಿ ಈ ಘಟನೆ ನಡೆದಿದೆ. ರಾಯಚೂರಿನ ಕವಿತಾಳದಿಂದ ಕುಟುಂಬ ಬಸ್ ಏರಿತ್ತು. ಮಂತ್ರಾಲಯಕ್ಕೆ ದುಡ್ಡು ಕೊಟ್ಟು ಟಿಕೆಟ್ ತಗೊಳ್ಳಿ ಎಂದ ಕಂಡಕ್ಟರ್ ಜೊತೆ ಪ್ರಯಾಣಿಕ ವಾಗ್ವಾದಕ್ಕಿಳಿದಿದ್ದಾನೆ. ಬಳಿಕ ಯೋಜನೆ ಬಗ್ಗೆ ತಿಳಿ ಹೇಳಿದ ಬಳಿಕ ಪರಿಸ್ಥಿತಿ ತಿಳಿಯಾಗಿದೆ.
ಗದಗ ಬಸ್ ನಿಲ್ದಾಣದಲ್ಲೂ ಇದೇ ಸ್ಥಿತಿ ಇತ್ತು.. ಬಸ್ ಹತ್ತಲು ನೂಕುನುಗ್ಗಲಿತ್ತು.. ಗದಗದಿಂದ ಗ್ರಾಮೀಣ ಪ್ರದೇಶಕ್ಕೆ ಹೋಗುವ ಬಸ್ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.. ಬಸ್ನಲ್ಲಿ ಸೀಟ್ಗಾಗಿ ಪೈಪೋಟಿಗೆ ಇಳಿದ್ರು.. ಪುಟ್ಟ ಪುಟ್ಟ ಮಕ್ಕಳನ್ನು ಕಿಟಕಿ ಒಳಗೆ ತಳ್ಳಿ ಸೀಟ್ಗಳನ್ನ ಖಾತ್ರಿಪಡಿಸಿಕೊಳ್ತಿದ್ರು.. ಒಟ್ಟಾರೆ, ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ಸಿಕ್ಕಿದ್ದೆ ತಡ, ಸರ್ಕಾರಿ ಬಸ್ಗಳು ಲಕ ಲಕ ಹೊಳೆಯುತ್ತಿವೆ.. ನಷ್ಟದ ಜೊತೆಗೆ ಪರ್ಯಾಯ ಆದಾಯವನ್ನು ಪಡೆಯುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ