ಶಕ್ತಿ ಯೋಜನೆ ಸಕ್ಸಸ್ ಬೆನ್ನಲ್ಲೇ ಮತ್ತೊಂದು ಮಾಸ್ಟರ್ ಪ್ಲಾನ್
ಆಗಸ್ಟ್ 1 ರಿಂದ ಹೊಸ ನಿಯಮ ಜಾರಿಗೆ ತರಲಿರುವ KSRTC
ಆದಾಯ ಹೆಚ್ಚಿಸಿಕೊಳ್ಳಲು KSRTC ಹೊಸ ಹೊಸ ತಂತ್ರ
ಬೆಂಗಳೂರು: ಶಕ್ತಿ ಯೋಜನೆಯ ಎಫೆಕ್ಟ್ ಆದಾಯದ ಮೂಲ ಹೆಚ್ಚಿಸಲು KSRTC ಮಾಸ್ಟರ್ ಪ್ಲಾನ್ವೊಂದನ್ನು ಮಾಡಿದೆ. ಈಗಾಗಲೇ ನಷ್ಟದಿಂದ ಕೊಂಚ ರಿಲ್ಯಾಕ್ಸ್ ಆಗಿರೋ ಕೆಎಸ್ಆರ್ಟಿಸಿ ಈಗ ಒಪ್ಪಂದದ ಬಸ್ಗಳ ದರ ಪರಿಷ್ಕರಣೆಗೆ ಮುಂದಾಗಿದೆ.
ಹೊಸ ಆದೇಶವೊಂದನ್ನ ಕೆಎಸ್ಆರ್ಟಿಸಿ ಹೊರಡಿಸಿದ್ದು, KSRTC ಸಾಮಾನ್ಯ ಬಸ್, ರಾಜಹಂಸ ಎಕ್ಸಿಕ್ಯೂಟಿವ್, ರಾಜಹಂಸ ಸೇರಿದಂತೆ 7 ವಿವಿಧ ರೀತಿಯ ಒಪ್ಪಂದದ ಮೇರೆಗೆ ಸಂಚಾರ ಮಾಡುವ ಬಸ್ಗಳ ದರ ಪರಿಷ್ಕರಣೆ ಮಾಡಿದೆ. ಈ ಪರಿಷ್ಕೃತ ದರ ಆಗಸ್ಟ್ ಒಂದನೇ ತಾರೀಖಿನಿಂದ ಜಾರಿಯಾಗಲಿದೆ.
55 ಆಸನದ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಒಂದು ದಿನಕ್ಕೆ 350 ಕಿಲೋಮೀಟರ್ ಓಡಾಡಲು ರಾಜ್ಯದೊಳಗಿದ್ರೆ 47 ರೂಪಾಯಿ ಆಗುತ್ತದೆ. ಹೊರ ರಾಜ್ಯವಾದ್ರೆ 50 ರೂಪಾಯಿ ಕೊಡಬೇಕಾಗುತ್ತೆ. ರಾಜಹಂಸ ಎಕ್ಸಿಕ್ಯೂಟಿವ್ ಬಸ್ 36 ಆಸನಗಳುಳ್ಳ ಈ ಬಸ್ಗೆ ದಿನಕ್ಕೆ 350 ಕಿಲೋಮೀಟರ್ ಸಂಚಾರ ಮಾಡುತ್ತೆ. ಇದಕ್ಕೆ ರಾಜ್ಯದೊಳಗಾದ್ರೆ ಕಿಲೋ ಮೀಟರ್ಗೆ 48 ರೂಪಾಯಿ ಹೊರ ರಾಜ್ಯಕ್ಕಾದ್ರೆ 53ರೂಪಾಯಿ ಕೊಡಬೇಕಾಗುತ್ತೆ. 39 ಆಸನದ ರಾಜಹಂಸ ಬಸ್ ದಿನಕ್ಕೆ 350 ಕಿಲೋ ಮೀಟರ್ ಓಡಲಿದೆ. ರಾಜ್ಯದೊಳಗಾದ್ರೆ ಕಿಲೋ ಮೀಟರ್ಗೆ 51ರೂಪಾಯಿ ಆದ್ರೆ ಹೊರ ರಾಜ್ಯಕ್ಕೆ ಹೋಗೋದಾದ್ರೆ 55ರೂಪಾಯಿ ಕೊಡಬೇಕು.
42 ಆಸನದ ಸೆಮಿ ಲೋ ಫ್ಲೋರ್ ಬಸ್ ಪ್ರತಿ ದಿನ 300 ಕಿಲೋ ಮೀಟರ್ ಸಂಚರಿಸಲಿದೆ. ಇದು ರಾಜ್ಯದೊಳಗೆ ಸಂಚರಿಸಲು ಕಿಲೋ ಮೀಟರ್ಗೆ 45ರೂಪಾಯಿ ನಿಗದಿ ಪಡಿಸಲಾಗಿದೆ. 30 ಆಸನಗಳಿರುವ ಮಿಡಿ ಬಸ್ ಇದು ರಾಜ್ಯದೊಳಗೆ ಮಾತ್ರ ಸಂಚರಿಸಲಿದ್ದು ದಿನಕ್ಕೆ 300 ಕಿಲೋಮೀಟರ್ ಸಂಚರಿಸಲಿದೆ. ಇದಕ್ಕೆ ಕಿಲೋ ಮೀಟರ್ಗೆ 40ರೂಪಾಯಿ ನಿಗದಿಪಡಿಸಲಾಗಿದೆ. ಇನ್ನು 32 ಆಸನಗಳುಳ್ಳ ನಾನ್ ಎಸಿ ಸ್ಲೀಪರ್ ಬಸ್ ನಿತ್ಯ 400 ಕಿಲೋಮೀಟರ್ ಸಂಚಾರ ಮಾಡುತ್ತೆ. ರಾಜ್ಯದೊಳಗೆ ಸಂಚಾರ ಮಾಡೋದಾದರೆ 55 ರೂಪಾಯಿ, ಹೊರರಾಜ್ಯಕ್ಕಾದ್ರೆ 60 ರೂಪಾಯಿ ನಿಗಧಿಪಡಿಸಲಾಗಿದೆ.
ಈ ಬಗ್ಗೆ ನಿಮಗೆ ತಿಳಿದಿರಲಿ ಈ ಆದೇಶಕ್ಕೂ ಮುನ್ನ ಬುಕ್ಕಿಂಗ್ ಮಾಡಿರುವ ಒಪ್ಪಂದದ ಬಸ್ಗಳಿಗೆ ಹಳೆಯ ದರ ಮುಂದುವರಿಯಲಿದೆ. ಆದೇಶದ ಬಳಿಕ ಅಂದರೆ ಇವತ್ತಿನಿಂದ ಬುಕ್ ಆಗೋ ಬಸ್ಗಳಿಗೆ ಹೊಸ ದರ ಅನ್ವಯವಾಗುತ್ತೆ. ಒಟ್ಟಿನಲ್ಲಿ ಇನ್ಕಂಗಾಗಿ ಕೆಎಸ್ಆರ್ಟಿಸಿ ಒಪ್ಪಂದದ ಬಸ್ಗಳಿಗೆ ಬೆಲೆ ಹೆಚ್ಚಿಸಿದೆ. ಇದು ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ